Namma Metro: ಅ.3ರಂದು ಹಸಿರು ಮಾರ್ಗದ ನಮ್ಮ ಮೆಟ್ರೋ ಸೇವೆಯಲ್ಲಿ ವ್ಯತ್ಯಯ!

namma metro
Published on

ಬೆಂಗಳೂರು: ಸುರಕ್ಷತಾ ತಪಾಸಣೆ ನಡೆಸುತ್ತಿರುವುದರಿಂದ ಅಕ್ಟೋಬರ್ 03ರಂದು ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ Namma Metrob ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಅಕ್ಟೋಬರ್ 03ರಂದು ನಾಗಸಂದ್ರ ಮತ್ತು ಮಾಧವರ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ಸೇವೆಯಲ್ಲಿ ವ್ಯತ್ಯವಾಗಲಿದೆ. ಈ ಅವಧಿಯಲ್ಲಿ ನಾಗಸಂದ್ರ ಮತ್ತು ಪೀಣ್ಯ ಇಂಡಸ್ಟ್ರೀ ನಿಲ್ದಾಣಗಳ ನಡುವೆ ರೈಲು ಸಂಚಾರ ಇರುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಪ್ರಕಟಣೆಯಲ್ಲಿ ತಿಳಿಸಿದೆ.

ನಾಗಸಂದ್ರ ಮತ್ತು ಮಾದವಾರ ನಿಲ್ದಾಣಗಳ ನಡುವಿನ ಹೊಸ ಮಾರ್ಗವನ್ನು ಮೆಟ್ರೋ ರೈಲ್ವೆ ಸುರಕ್ಷತ ಆಯುಕ್ತರಿಂದ ಶಾಸನಬದ್ಧ ಸುರಕ್ಷತಾ ತಪಾಸಣೆ ನಡೆಸುತ್ತಿರುವುದರಿಂದ, ದಿನಾಂಕ 3ನೇ ಅಕ್ಟೋಬರ್ 2024 ರಂದು ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಕಾರ್ಯಾಚರಣೆಯಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಬದಲಾವಣೆಯಾಗಲಿದೆ.

ಈ ಹಿನ್ನೆಲೆಯಲ್ಲಿ ಗುರುವಾರ ನಾಗಸಂದ್ರ ಮತ್ತು ಪೀಣ್ಯ ಇಂಡಸ್ಟ್ರಿ ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ವಾಣಿಜ್ಯ ಸೇವೆ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ, ಪೀಣ್ಯ ಇಂಡಸ್ಟ್ರಿ ಮತ್ತು ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆ ಎಂದಿನಂತೆ ಲಭ್ಯವಿರುತ್ತದೆ. ಬೆಳಿಗ್ಗೆ 9.00 ಗಂಟೆಗೆ ರೇಷ್ಮೆ ಸಂಸ್ಥೆಯಿಂದ ಹೊರಡುವ ಕೊನೆಯ ರೈಲು ನಾಗಸಂದ್ರ ನಿಲ್ದಾಣಕ್ಕೆ ತಲುಪಲಿದೆ.

ನೇರಳೆ ಮಾರ್ಗದ ಮೆಟ್ರೋ ರೈಲು ಕಾರ್ಯಾಚರಣೆಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ನಮ್ಮ ಮೆಟ್ರೋ ಪ್ರಯಾಣಿಕರು ಸದರಿ ಬದಲಾವಣೆಯನ್ನು ಗಮನಿಸಲು ಮತ್ತು ಸಹಕರಿಸಲು ಕೋರಿದೆ. ಇದರಿಂದಾಗುವ ಅನಾನುಕೂಲತೆಗೆ ವಿಷಾದಿಸಿದೆ ಎಂದು ಬಿಎಂಆರ್​ಸಿಎಲ್​ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net