ಜೈಲಿನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ರಾಜೀವಗಾಂಧಿ ಹಂತಕಿ

nalini
Published on

ವೆಲ್ಲೂರು: 1991ರಲ್ಲಿ ಪ್ರಧಾನಿಯಾಗಿದ್ದ ರಾಜೀವಗಾಂಧಿ ಅವರ ಹತ್ಯೆಗೆ ಸಂಬಂಧಿಸಿದಂತೆ ಜೈಲಿನಲ್ಲಿ ಬಂಧಿಯಾಗಿರುವ ನಳಿನಿ ಶ್ರೀಹರನ್‌ ಜೈಲಿನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ವೆಲ್ಲೂರು ಮಹಿಳಾ ಜೈಲಿನಲ್ಲಿ ಇರುವ ನಳಿನಿ, ನಿನ್ನೆ ರಾತ್ರಿ ಈಕೆ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಎಂದು ಅವರ ವಕೀಲ ಪುಗಲೆಂತಿ ತಿಳಿಸಿದ್ದಾರೆ.

ರಾಜೀವಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 29 ವರ್ಷಗಳಿಂದ ನಳಿನಿ ಜೈಲಿನಲ್ಲಿದ್ದಾಳೆ. ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಕಠಿಣ ನಿರ್ಧಾರವನ್ನು ನಳಿನಿ ತೆಗೆದುಕೊಂಡಿರುವುದಾಗಿ ವಕೀಲ ಪುಗಲೆಂತಿ ಹೇಳಿದ್ದಾರೆ.

ನಳಿನಿ ಮತ್ತು ಆಕೆಯ ಜತೆ ಜೈಲಿನಲ್ಲಿ ಇರುವ ಇನ್ನೊಬ್ಬ ಅಪರಾಧಿ ನಡುವೆ ಜಗಳವಾಗಿರುವುದೇ ಆತ್ಮಹತ್ಯೆ ಪ್ರಯತ್ನಕ್ಕೆ ಕಾರಣ ಎನ್ನಲಾಗಿದೆ. ಈ ಜಗಳಕ್ಕೆ ಸಂಬಂಧಿಸಿದಂತೆ ಇತರ ಕೈದಿಗಳಯ ಈ ವಿಷಯವನ್ನು ಜೈಲರ್‌ಗೆ ತಿಳಿಸಿದ್ದ ಹಿನ್ನೆಲೆಯಲ್ಲಿ ನೊಂದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಮೊದಲು ನಳಿನಿ ಈ ರೀತಿಯ ಯಾವತ್ತೂ ನಡೆದುಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿಜವಾದ ಕಾರಣವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಪುಗಲೆಂತಿ ಹೇಳಿದ್ದು, ಈ ಕುರಿತು ಜೈಲಿನ ಅಧಿಕಾರಿಗಳನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.

ಈ ಘಟನೆ ಬಳಿಕ ನಳಿನಿ ಪತಿ ಮುರುಗನ್ ತಮ್ಮ ಪತ್ನಿಯನ್ನು ವೆಲ್ಲೂರು ಜೈಲಿನಿಂದ ಪುಲಝಲ್ ಜೈಲಿಗೆ ಸ್ಥಳಾಂತರಿಸುವಂತೆ ಕೋರಿದ್ದಾರೆ ಎಂದು ಪುಗಲೆಂತಿ ಹೇಳಿದ್ದಾರೆ. ಇದಕ್ಕಾಗಿ ಕಾನೂನು ಅಡಿ ಏನೆಲ್ಲಾ ಸಾಧ್ಯವೋ ಆ ರೀತಿ ವಿನಂತಿ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net