VIDEO: ಎಲ್ಲೂ ನೋಡಿರದ ಪ್ರಕೃತಿಯ ಅಪರೂಪದ ಕ್ಷಣ: ಕಣಿವೆಗಳ ಮೇಲೆ ತೇಲುತ್ತಿರುವ ಮೋಡಗಳ ದೃಶ್ಯ ಹಂಚಿಕೊಂಡ ಸಚಿವ!

modagalu
Published on

ಕೊಹಿಮಾ: ಕಣಿವೆಗಳ ಮೇಲೆ ಹರಿಯುತ್ತಿರುವ ಈ ದೃಶ್ಯ ಸುಂದರವಾಗಿಲ್ಲವೇ..? ಎಂದು ಪ್ರಶ್ನಿಸುವ ಮೂಲಕ ನಾಗಾಲ್ಯಾಂಡ್ ಬುಡಕಟ್ಟು ಸಚಿವ ತೆಮ್ಜೆನ್ ಇಮ್ನಾ ಅವರು ತಮ್ಮ ಟ್ವೀಟ್​ ಖಾತೆಯಲ್ಲಿ ವಿಡಿಯೋ ಸಮೇತ ಹಂಚಿಕೊಂಡಿದ್ದಾರೆ.

ಪ್ರಕೃತಿ ಹಲವಾರು ವೈಶಿಷ್ಟ್ಯತೆಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದ್ದು, ಹಲವು ಅಚ್ಚರಿಗಳ ಘಟನೆಗೆ ಸಾಕ್ಷಿಯಾಗಿದೆ. ಭೂಮಿಯಲ್ಲಿ ವಿಶೇಷ ಹಾಗೂ ಸುಂದರ ಸ್ಥಳಗಳು ಮನುಷ್ಯನನ್ನು ಮಂತ್ರಮುಗ್ದಗೊಳಿಸುತ್ತಿರುತ್ತವೆ.ಅಂತಹ ವಿಶೇಷ ಹಾಗೂ ವಿಸ್ಮಯ ದೃಶ್ಯವನ್ನು ಹಂಚಿಕೊಳ್ಳುವ ಮೂಲಕ ಸಚಿವ ತೆಮ್ಜೆನ್​​, ಈ ಸುಂದರ ದೃಶ್ಯವನ್ನು ನೀವೊಮ್ಮೆ ನೋಡಿ ಕಣ್ತುಂಬಿಕೊಳ್ಳಿ ಎಂದಿದ್ದಾರೆ.

ಅಂದಹಾಗೆ ದೃಶ್ಯದಲ್ಲಿ ಏನಿದೆ ಎಂಬುದಾದರೆ ಅದೊಂದು ಸುಂದರವಾದ ಕಣಿವೆಗಳ ಪ್ರದೇಶವಾಗಿದ್ದು, ಕಣಿವೆಗಳ ಮೇಲೆ ಸಾವಿರಾರು ಮನೆಗಳಿವೆ. ಮನೆಗಳ ಮೇಲೆಯೇ ಮೋಡಗಳು ಹರಿಯುವಂತೆ ತೇಲುತ್ತಿವೆ. ಈ ಸುಂದರ ಹಾಗೂ ಅದ್ಭುತ ಕ್ಷಣವನ್ನು ಸಚಿವರು ಸೆರೆ ಹಿಡಿದು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಸಚಿವರು ಹಂಚಿಕೊಂಡಿರುವ ಈ ವಿಡಿಯೋ ಭಾರೀ ವೈರಲ್​ ಆಗುತ್ತಿದ್ದು, ಈ ಸುಂದರ ತಾಣಕ್ಕೆ ನಾವೊಮ್ಮೆ ಭೇಟಿ ನೀಡಬೇಕು ಎಂದು ಕೆಲವರು ಅಭಿಪ್ರಾಯಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net