ಹೈದರಾಬಾದ್: ತೆಲುಗು ನಟ ನಾಗಚೈತನ್ಯ ಮತ್ತು ನಟಿ ಶೋಭಿತಾ ಧೂಳಿಪಾಲ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಯಾವಾಗ ಮತ್ತು ಎಲ್ಲಿ ಮದುವೆಯಾಗಲಿದ್ದಾರೆ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಪ್ಯಾರಿಸ್‌ನಲ್ಲಿ ಮದುವೆ ಎಂಬ ಸುದ್ದಿ ಹರಿದಾಡುತ್ತಿದೆಯಾದರೂ, 2025ರ ಮಾರ್ಚ್‌ನಲ್ಲಿ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: ಒಂದೇ ದಿನದಲ್ಲಿ ಶೇ.20ರಷ್ಟು ಏರಿಕೆ ಕಂಡ ಷೇರು.. 2 ವರ್ಷದೊಳಗೆ 1ಲಕ್ಷಕ್ಕೆ 5 ಲಕ್ಷ!
ವಿವಾಹದ ಕುರಿತು ಅಕ್ಕಿನೇನಿ ಕುಟುಂಬ ಅಥವಾ ಶೋಭಿತಾ ಅವರಿಂದ ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲವಾದರೂ ಮುಂದಿನ ವರ್ಷ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನಿಖರ ದಿನಾಂಕ ನಿಗದಿಯಾಗಲಿದೆ. ಎರಡೂ ಕುಟುಂಬಗಳ ಅನುಕೂಲ ಮತ್ತು ಶಾಸ್ತ್ರೋಕ್ತವಾಗಿ ಒಳ್ಳೆಯ ಮುಹೂರ್ತದಲ್ಲಿ ದಿನಾಂಕ ನಿಗಧಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎನ್ನಲಾಗಿದೆ. ಅಂದುಕೊಂಡಂತೆ ಎಲ್ಲ ನಡೆದರೆ ಮುಂದಿನ ಆರು ತಿಂಗಳಲ್ಲಿ ಈ ಪ್ರೇಮ ಪಕ್ಷಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ನಾಗಚೈತನ್ಯ ಸದ್ಯ ತಾಂಡೇಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಾಯಿ ಪಲ್ಲವಿ ನಾಯಕಿಯಾಗಿದ್ದಾರೆ.
ವಾಲ್ಮೀಕಿ ನಿಗಮ ಹಗರಣ: ಚಾರ್ಜ್ ಶೀಟ್ನಲ್ಲಿ ನಾಗೇಂದ್ರ, ಬಸನಗೌಡ ಹೆಸರು ಮಾಯ!