ನಾ.ಡಿಸೋಜರಿಗೆ ಸಾರ್ವಜನಿಕ ಶ್ರದ್ಧಾಂಜಲಿ

mng-8jan-na dsouza
Published on


ಮಂಗಳೂರು : ಪರಿಸರ, ವೈಚಾರಿಕ ಸಾಹಿತ್ಯ, ವಿಡಂಬನೆ ಅಲ್ಲದೆ ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಮಹತ್ತರ ಸಾಧನೆ ಮಾಡಿರುವ ಶ್ರೇಷ್ಠ ಸಾಹಿತಿ ನಾ.ಡಿಸೋಜಾ ಅವರು ಎಲ್ಲರ ಮನ್ನಣೆ ಪಡೆದವರು. ಯಾರದೇ ಪ್ರಭಾವವಿಲ್ಲದೆ ಸ್ವಸಾಮರ್ಥ್ಯದಿಂದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳನ್ನು ಪಡೆದು, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾದದ್ದು ಅವರ ಬರವಣಿಗೆಯ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹಿರಿಯ ಸಾಹಿತಿ ಡಾ. ಬಿ.ಎ. ವಿವೇಕ ರೈ ನುಡಿದರು.
ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಗರದ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ನಾ.ಡಿಸೋಜರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಮಾತನಾಡಿ ಭಾರತೀಯ ಸಂಸ್ಕೃತಿಯ ಬಗ್ಗೆ ಯಾವುದೇ
ಮತ ಭೇದವಿಲ್ಲದೆ ಅವರ ಸ್ವತಂತ್ರ ನಿಲುವು ಶ್ಲಾಘನೀಯವಾದದ್ದು ಎಂದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು, ಡಾ. ಎಂ.ಬಿ. ಪುರಾಣಿಕ್, ಎಸ್.ವಿ. ಪ್ರಭಾಕರ ಶರ್ಮ, ಡಾ. ಎಂ. ಪ್ರಭಾಕರ ಜೋಶಿ, ಪಿ. ಬಿ. ಹರೀಶ್ ರೈ, ಎಚ್. ಶಶಿಧರ ಶೆಟ್ಟಿ, ಸುಧಾಕರ ರಾವ್ ಪೇಜಾವರ, ಟಿ. ಸುಬ್ರಹ್ಮಣ್ಯ ರಾವ್, ಚಂದ್ರಶೇಖರ ಮಯ್ಯ, ಕೆ. ತಾರಾನಾಥ ಹೊಳ್ಳ., ಪ್ರಭಾಕರ ರಾವ್ ಪೇಜಾವರ, ಶೇಷಾದ್ರಿ ಪಿ. ಭಟ್, ಪ್ರಕಾಶ್ ನಾಯಕ್, ಸಿ. ರಮೇಶ ಆಚಾರ್ಯ, ಭುವನಾಭಿರಾಮ ಉಡುಪ, ಕೃಷ್ಣಮೂರ್ತಿ, ಜೆ.ಕೆ. ಭಟ್ ಸೇರಾಜೆ, ತಮ್ಮ ಲಕ್ಷ್ಮಣ, ಪಿ.ವಿ. ಪರಮೇಶ್, ಸುಮಾ ಪ್ರಸಾದ್, ಪೂರ್ಣಿಮಾ ರಾವ್ ಪೇಜಾವರ, ತೋನ್ಸೆ ಪುಷ್ಕಳ ಕುಮಾರ್, ಡಾ. ಪ್ರಸನ್ನ ರೈ ಕೆ., ದಯಾನಂದ ಕಟೀಲ್ ಇವರು ನಾ.ಡಿಸೋಜಾರವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net