

ಮೈಸೂರು: ರೋಹಿಣಿ ಸಿಂಧೂರಿ ಐಎಎಸ್ ಪಾಸ್ ಮಾಡಿದ್ದಾರಾ? ಅನ್ನೋದೆ ನನಗೆ ಡೌಟು. ಬೇಸಿಕ್ ನಾಲೆಡ್ಜ್ ಇಲ್ಲದ ಐಎಎಸ್ ಅಧಿಕಾರಿ ಎಂದು ಎಂಎಲ್‌ಸಿ ರಘು ಆಚಾರ್ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಹುಣಸೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಪಿ. ಮಂಜುನಾಥ್ ನಡುವಿನ ಆರೋಪ-ಪ್ರತ್ಯಾರೋಪ ಸಮರ ತಾರಕಕ್ಕೇರಿದೆ. ಆರಂಭದಲ್ಲಿ ಶಾಸಕ ಮಂಜುನಾಥ್ ಮೈಸೂರಿಗೆ ಇಬ್ಬರು ಮಹಾರಾಣಿಯರಿದ್ದಾರೆ, ಮೂರನೇಯವರ ಅವಶ್ಯಕತೆ ಇಲ್ಲವೆಂದು ಡಿಸಿ ವಿರುದ್ಧ ಕಿಡಿಕಾರಿದ್ದರು. ಅದಕ್ಕೆ ಪ್ರತಿಯಾಗಿ ರೋಹಿಣಿ ಸಿಂಧೂರಿ, ಪತ್ರದ ಮೂಲಕ ತಿರುಗೇಟು ನೀಡಿದ್ದರು. ಅಲ್ಲದೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಡಿಸಿಯನ್ನು ಹಿಟ್ಲರ್‌ಗೆ ಹೋಲಿಸಿ ವಾಗ್ದಾಳಿ ನಡೆಸಿದರು. ನಾನೂ ನಿಮ್ಮ ಬಗ್ಗೆ ವೈಯಕ್ತಿಕವಾಗಿ ಮಾತನಾಡಬಹುದು. ನಿಮ್ಮ ವೈಯಕ್ತಿಕ ವಿಚಾರ ಜಗಜ್ಜಾಹೀರಾಗಿದೆ ಎಂದು ಕಿಡಿಕಾರಿದರು. ಶಾಸಕರ ಆಕ್ರೋಶಕ್ಕೆ ಧ್ವನಿಗೂಡಿಸಿರುವ ಎಂಎಲ್‌ಸಿ ರಘು ಆಚಾರ್, ಡಿಸಿ ವಿರುದ್ಧ ವಾಗ್ದಾಳಿ ನಡೆಸಿದರು.
ಕೌನ್ಸಿಲ್‌ಗೆ ಬಂದು ಉತ್ತರ ಕೊಡಲಿ ಪ್ರಿವಿಲೇಜ್ ಮೂವ್ ಮಾಡ್ತೀನಿ. ಜನಪ್ರತಿನಿಧಿಗಳು ಅಂದ್ರೆ ಕಂಡಮ್ ಮಾಡ್ಕೊಂಡಿದ್ದೀರಾ? ನನಗೆ ಅನುಮಾನ... ನೀವು ಐಎಎಸ್ ಪಾಸ್ ಮಾಡಿಕೊಂಡಿಲ್ಲ ಎಂದೆಲ್ಲ ಕಟುವಾಗಿ ಟೀಕಿಸಿದರು.