More

    ಫೇಸ್​ಬುಕ್​ನಲ್ಲಿ ಈಕೆಯ ಬಲೆಗೆ ಬಿದ್ದವರ ಗತಿ ಅಧೋಗತಿ: ಚಾಲಾಕಿ ಯುವತಿಯ ಖತರ್ನಾಕ್​ ಕೆಲಸವಿದು!

    ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಹಣ, ಒಡವೆ ಪಡೆದುಕೊಂಡು ವಂಚನೆ ಮಾಡುತ್ತಿದ್ದ ಖತರ್ನಾಕ್​ ಯುವತಿ ಕೊನೆಗೂ ಮೈಸೂರು ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಕಂಬಿ ಹಿಂದೆ ಸೇರಿದ್ದಾಳೆ.

    ಮೇಘಾ ಅಲಿಯಾಸ್​ ಹರಿಣಿ ಬಂಧಿತ ವಂಚಕಿ. ಈಕೆ ಫೇಸ್​ಬುಕ್​ನಲ್ಲಿ ನಕಲಿ ಖಾತೆ ತೆರೆದು ಯುವಕರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಳು. ಅವರನ್ನು ಚೆನ್ನಾಗಿ ನಂಬಿಸಿ ಚಿನ್ನಾಭರಣ ಹಾಗೂ ನಗದು ಪಡೆದುಕೊಳ್ಳುತ್ತಿದ್ದಳು. ಆ ಬಳಿಕ ಮೊಬೈಲ್ ಸ್ವೀಚ್ ಆಫ್ ಮಾಡಿಕೊಳ್ಳುತ್ತಿದ್ದಳು.

    ಈಕೆ ಓದಿರೋದು ಮಾತ್ರ 10ನೇ ತರಗತಿ. ಆದರೆ, ಯಾಮಾರಿಸುವುದರಲ್ಲಿ ಕಳ್ಳರಿಗಿಂತ ಚಾಲಾಕಿ. ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನಲ್ಲಿ ಈಕೆ ವಂಚನೆ ಎಸಗಿದ್ದಾಳೆ. ಈಕೆ ಬೆಂಗಳೂರಿನ ಅಂದರಹಳ್ಳಿ ಎರಡನೇ ಮುಖ್ಯ ರಸ್ತೆಯಲ್ಲಿ ವಾಸವಾಗಿದ್ದಾಳೆ.

    ಇದನ್ನೂ ಓದಿರಿ: ವೋಟರ್ ಐಡಿಗೆ ಆಧಾರ್ ಜೋಡಣೆ ಬಗ್ಗೆ ಪರಿಶೀಲನೆ: ಜನರ ಡೇಟಾ ದುರ್ಬಳಕೆ ಆಗದಂತೆ ಸುರಕ್ಷತಾ ಕ್ರಮದ ಭರವಸೆ

    ಪ್ರತಿ ಬಾರಿ ಅಪರಾಧ ಮಾಡುವಾಗ ಮಧ್ಯವರ್ತಿಗಳನ್ನಾಗಿ ಹೊಸಬರನ್ನೇ ಬಳಸಿಕೊಳ್ಳುತ್ತಿದ್ದಳು. ತನ್ನ ಕೆಲಸ ಮುಗಿದ ಬಳಿಕ ದೂರವಾಣಿ ಸಂಖ್ಯೆಯನ್ನು ಬದಲಾಯಿಸಿ ಸಂಪರ್ಕ ಕಡಿದುಕೊಳ್ಳುತ್ತಿದ್ದಳು. ಅದೃಷ್ಟ ಎಲ್ಲ ಸಮಯದಲ್ಲೂ ಒಂದೇ ರೀತಿ ಇರುವುದಿಲ್ಲ ಎಂಬಂತೆ ಕೊನೆಗೂ ವಂಚಕಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

    ವಂಚನೆ ಜಾಲದ ಬಗ್ಗೆ ಸಮಗ್ರ ತನಿಖೆ ಮುಂದುವರಿಸಿರುವ ಪೊಲೀಸರು ಈಕೆಯಿಂದ ವಂಚನೆಗೊಳದಾವರು ಯಾರಿದ್ದಾರೆ ಎಂಬ ಮಾಹಿತಿ ನೀಡುವಂತೆ ವಿಚಾರಣೆ ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಚಿನ್ನದಂಥ ಮಕ್ಕಳನ್ನು ಕೊಂದು ನೇಣಿಗೆ ಕೊರಳೊಡ್ಡಿದ ತಂದೆ: ಕಾಸರಗೋಡಿನಲ್ಲಿ ಹೃದಯವಿದ್ರಾವಕ ಘಟನೆ

    ನೀರು ಕೇಳುವ ನೆಪದಲ್ಲಿ 71 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 17ರ ಯುವಕ

    ಆಮೆಗೆ ಹಲ್ಲೇ ಇರಲ್ಲ! ಅದು ಊಟ ಮಾಡೋದು ಹೇಗೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts