ನೋಟುಗಳ ಮೇಲೆ ವಿವಾಹಿತ ಮಹಿಳೆಯರ ಬಗ್ಗೆ ಅಸಹ್ಯ ಬರಹ: ನಿಗೂಢ ಪ್ರಕರಣ ಭೇದಿಸಿದ ಪೊಲೀಸರು

Mysterious Currency

ರಾಜ್​ಕೋಟ್​: ಗುಜರಾತಿನ ಜಸ್ದಾನ್ ಪಟ್ಟಣದಲ್ಲಿ ನೋಟುಗಳ ಮೇಲೆ ಸ್ಪಷ್ಟವಾಗಿ ಬರೆಯಲಾಗಿದ್ದ​ ನಿಗೂಢ ಪ್ರಕರಣವನ್ನು ಕೊನೆಗೂ ಬಗೆಹರಿಸಲಾಗಿದೆ. ವಿವಾಹಿತ ಮಹಿಳೆಯರಿಗೆ ಕಳಂಕ ತರುವ ರೀತಿಯಲ್ಲಿ ನೋಟುಗಳ ಮೇಲೆ ಅಸಹ್ಯವಾಗಿ ಬರೆದು ಪಟ್ಟಣದಲ್ಲಿ ಚೆಲ್ಲಾಡಿದ್ದಕ್ಕಾಗಿ 58 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಐದು ವರ್ಷಗಳಿಗೂ ಹೆಚ್ಚು ಕಾಲ ಬಂಧಿತ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ನಿರ್ದಿಷ್ಟ ಮನೆಯ ಮಹಿಳೆಯರ ಬಗ್ಗೆ ಅಸಹ್ಯಕರ ವಿವರಗಳನ್ನು ನೋಟುಗಳ ಮೇಲೆ ಬರೆದು ತಡರಾತ್ರಿ ಮನೆ ಮನೆ ಸುತ್ತಿ ನೋಟುಗಳನ್ನು ಎಸೆದು ಬರುವುದು ಈತನ ಖಯಾಲಿಯಾಗಿತ್ತು.

ಇದನ್ನೂ ಓದಿ: ತಮ್ಮನ ಸಾವಿನ ನೋವಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಅಕ್ಕ

ಹೆಚ್ಚಿನ ನೋಟುಗಳಲ್ಲಿ ನೆರೆ ಮನೆಯವರ ಜೊತೆಗಿನ ಮಹಿಳೆಯರ ಅಕ್ರಮ ಸಂಬಂಧದ ಬಗ್ಗೆ ಬರೆಯಲಾಗಿತ್ತು. ಈ ಕೃತ್ಯದಿಂದ ಅನೇಕ ಸಂಸಾರಗಳು ಸಹ ಮುರಿಬಿದ್ದಿವೆ. ಅಲ್ಲದೆ, ಅನುಮಾನ ಎಂಬ ಪೆಡಂಭೂತ ವಕ್ಕರಿಸಿ ಕುಟುಂಬಗಳ ನಡುವಿನ ಸಾಮರಸ್ಯವನ್ನೇ ಹಾಳು ಮಾಡಿತು.

ಕಳೆದ ಒಂದು ತಿಂಗಳಿನಿಂದ ತನ್ನ ಮಿತಿಯನ್ನು ಮೀರಿದ್ದ ಆರೋಪಿ, ತಡರಾತ್ರಿಯಲ್ಲಿ ಹೆಚ್ಚು ಮನೆಗಳನ್ನು ತಲುಪುತ್ತಿದ್ದನು. ಕೊಳಕು ಬರಹಗಳುಳ್ಳ ನೋಟುಗಳನ್ನು ಮನೆಗೆ ಮನೆಗೆ ಚೆಲ್ಲಾಡಿ ಬರುತ್ತಿದ್ದನು. ಇದಕ್ಕೆಲ್ಲ ಅಂತಿಮ ಮೊಳೆ ಹೊಡೆಯಲೇಬೇಕೆಂಬ ತಿರ್ಮಾನಕ್ಕೆ ಜಸ್ದಾನ್​ ಮಹಿಳೆಯರು ಬಂದರು.

ಜಸ್ದಾನ್​ ಠಾಣೆಗೆ ತೆರಳಿದ ಮಹಿಳೆಯರು ದೂರು ದಾಖಲಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಮೀಪದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಸಂದೇಹ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದನ್ನು ಗಮನಿಸಿದಾಗ ಆತನ ಕೃತ್ಯ ಬಯಲಾಗಿದೆ.

ಇದನ್ನೂ ಓದಿ: ವೈಭವದ ಐತಿಹಾಸಿಕ ಕರಗ ಮಹೋತ್ಸವ; ದ್ರೌಪದಿ ದೇವಿಯ ಕರಗ ಕಣ್ತುಂಬಿಕೊಳ್ಳಲು ಬಂದ ಸಾವಿರಾರು ಭಕ್ತರು

ಅಚ್ಚರಿಯೇನೆಂದರೆ, ಬಂಧಿತ ವ್ಯಕ್ತಿ ಜನರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದಾರೆ. ಎಲ್ಲರೊಂದಿಗೆ ಚೆನ್ನಾಗಿಯೇ ಇದ್ದ ಆತ ರಾತ್ರಿ ಸಮಯದಲ್ಲಿ ಮನೆಹಾಳು ಮಾಡುವ ಕೆಲಸ ಮಾಡುತ್ತಿದ್ದ. ಜಸ್ದಾನ್​ ನಗರದಲ್ಲಿ ಬಹಳ ದಿನಗಳಿಂದ ಆತ ವಾಸಿಸುತ್ತಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ, ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ. ಆತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂದು ಪೊಲೀಸರು ದೃಢಪಡಿಸಿದ್ದಾರೆ. (ಏಜೆನ್ಸೀಸ್​)

ಸಂಪಾದಕೀಯ | ನೈತಿಕ ಹೊಣೆಗಾರಿಕೆ; ಖಾಸಗಿ ಶಾಲೆ ಶುಲ್ಕಕ್ಕೆ ಮಿತಿ

ರೈತರ ಮಕ್ಕಳಿಗೆ ಹೆಣ್ಣು ಕೊಡಿ … ಹೇಮಂತ್​ ಹೆಗ್ಡೆ ಕಾಮಿಡಿ ಅಭಿಯಾನ

‘ಸ್ವಾತಿ ಮುತ್ತಿನ ಮಳೆ‌ಹನಿಯೇ’ ಟೈಟಲ್‌ ವಿವಾದ; ರಮ್ಯಾ ಪರವಾಗಿ ಕೋರ್ಟ್​ ಆದೇಶ

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…