ಸಂಪಾದಕೀಯ | ನೈತಿಕ ಹೊಣೆಗಾರಿಕೆ; ಖಾಸಗಿ ಶಾಲೆ ಶುಲ್ಕಕ್ಕೆ ಮಿತಿ

blank

ನೂತನ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದು, ಖಾಸಗಿ ಶಾಲೆಗಳಲ್ಲಿ ಮನಬಂದಂತೆ ಶುಲ್ಕ ಹೆಚ್ಚಳ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದ್ದು, ಆಕ್ಷೇಪವೂ ವ್ಯಕ್ತವಾಗುತ್ತಿದೆ. ಮಾಧ್ಯಮಗಳಲ್ಲಿ ಕೂಡ ವರದಿಗಳು ಪ್ರಕಟವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಸಂಘಟನೆಗಳು ಸಭೆ ನಡೆಸಿ, ಗರಿಷ್ಠ ಶುಲ್ಕದ ವಿಚಾರವಾಗಿ ಒಂದು ನಿಲುವಿಗೆ ಬಂದಿರುವುದು ಗಮನಾರ್ಹ.

ರಾಜ್ಯದ ಖಾಸಗಿ ಶಾಲೆಗಳಲ್ಲಿ ವಾರ್ಷಿಕ ಶುಲ್ಕ ಹೆಚ್ಚಲ ಶೇ.10ರಿಂದ 15ಕ್ಕಿಂತ ಮೀರಬಾರದು. ಒಂದು ವೇಳೆ ಅದಕ್ಕಿಂತ ಹೆಚ್ಚಿನ ಶುಲ್ಕ ಪಡೆದಲ್ಲಿ ಖಾಸಗಿ ಶಾಲಾ ಸಂಘಟನೆಗಳೇ ಕ್ರಮ ಜರುಗಿಸುವ ಭರವಸೆ ನೀಡಿವೆ. ಕ್ಯಾಮ್್ಸ, ಕುಸುಮ, ಮಾಸ್, ಮಿಸ್ಕಾ ಸೇರಿ ವಿವಿಧ ಸಂಘಟನೆಗಳು ಈ ಸಭೆಯಲ್ಲಿ ಭಾಗಿಯಾಗಿದ್ದವು. ಕ್ಯಾಮ್್ಸ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ‘ಕೆಲವು ಶಾಲೆಗಳಿಂದಾಗಿ ಇಡೀ ವ್ಯವಸ್ಥೆಗೆ ಕೆಟ್ಟ ಹೆಸರು ಬರುತ್ತಿದೆ. ಆದ್ದರಿಂದ ಶಾಲೆಗಳು ವರ್ಷದ ಮಧ್ಯದಲ್ಲಿ ಶುಲ್ಕ ಹೆಚ್ಚಳ ಮಾಡುವುದು ಅಥವಾ ವಾಣಿಜ್ಯೀಕರಣಕ್ಕೆ ಕಾರಣವಾದರೆ ಅಂತಹ ಕ್ರಮಗಳನ್ನು ಬೆಂಬಲಿಸುವುದಿಲ್ಲ’ ಎಂದು ಹೇಳಿರುವುದು ಪಾಲಕರು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಖ್ಯವಾದುದು.

ಆದರೆ ಈ ಸೂತ್ರಕ್ಕೆ ಬದ್ಧವಾಗಿರಬೇಕಾದ ಹೊಣೆಗಾರಿಕೆಯನ್ನು ಎಲ್ಲ ಶಾಲೆಗಳೂ ಪ್ರದರ್ಶಿಸಬೇಕು ಮತ್ತು ಒಂದೊಮ್ಮೆ ಈ ನಿಯಮದ ಉಲ್ಲಂಘನೆಯಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾದ ಉತ್ತರದಾಯಿತ್ವ ಶಾಲಾ ಸಂಘಟನೆಗಳದ್ದಾಗಿರಬೇಕು. ಖಾಸಗಿ ಶಾಲೆಗಳು ಮನಸೋಇಚ್ಛೆ ಶುಲ್ಕ ವಿಧಿಸಿದರೆ, ಪಾಲಕರು ಸೂಕ್ತ ಪುರಾವೆಗಳೊಂದಿಗೆ ಲಿಖಿತ ದೂರು ನೀಡಿದರೆ ಕ್ರಮ ತೆಗೆದುಕೊಳ್ಳುವ ಬದ್ಧತೆಯನ್ನು ಸಂಘಟನೆಗಳು ನೀಡಿವೆ. ಸರ್ಕಾರ ಸಹ ಅನಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸುವ ಜತೆಗೆ, ಇಂಥಲ್ಲಿ ಅಧಿಕ ಶುಲ್ಕ ಪಡೆಯುತ್ತಿದ್ದರೆ, ಕ್ರಮ ಜರುಗಿಸಬೇಕು ಎಂಬುದು ಪಾಲಕರ ಬೇಡಿಕೆ. ಲಕ್ಷ ಲಕ್ಷ ಶುಲ್ಕ ಪಡೆದ ಮಾತ್ರಕ್ಕೆ ಶಾಲೆಗಳ ಗುಣಮಟ್ಟ ಉತ್ತಮವಾಗಿರುತ್ತದೆ ಎಂದು ಪಾಲಕರು ಭಾವಿಸದೆ, ಪೂರ್ವಾಪರ ವಿಚಾರಿಸಿ ಶಾಲೆಗೆ ಸೇರಿಸುವುದು ಉತ್ತಮ.

ಶಿಕ್ಷಣದ ಹೆಸರಿನಲ್ಲಿ ಖಾಸಗಿ ವಲಯದ ಶಾಲೆಗಳಲ್ಲಿ ಶೋಷಣೆ ನಡೆಯುತ್ತದೆ; ಪಾಲಕರ ಆರ್ಥಿಕ- ಸಾಮಾಜಿಕ ಸ್ಥಿತಿಗತಿ ಗಮನಿಸದೆ ಶುಲ್ಕ ವಿಧಿಸಲಾಗುತ್ತದೆ ಎಂಬ ಪುಕಾರು ಬಹಳ ವರ್ಷಗಳಿಂದ ಇದೆ. ಖಾಸಗಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳ ಗುಣಮಟ್ಟ ಕಡಿಮೆ ಎಂಬ ಭಾವನೆಯಿದೆ. ಈಚಿನ ವರ್ಷಗಳಲ್ಲಿ ಸರ್ಕಾರಿ ವ್ಯವಸ್ಥೆಯಲ್ಲಿ ಬಹಳ ಸುಧಾರಣೆಯಾಗಿದ್ದರೂ, ಜನರಲ್ಲಿ ಆ ಭಾವನೆ ಇನ್ನೂ ಮಾಯವಾಗಿಲ್ಲ. ಶಾಲೆಯ ಗುಣಮಟ್ಟ ಹಾಗೂ ವ್ಯವಸ್ಥೆಗೆ ಅನುಗುಣವಾಗಿ ಶುಲ್ಕ ವಿಧಿಸಲು ಶಾಲೆಗಳಿಗೆ ಸ್ವಾತಂತ್ರ್ಯವಿದ್ದು, ಇದನ್ನು ಹೈಕೋರ್ಟ್ ಕೂಡ ಎತ್ತಿಹಿಡಿದಿದೆ. ಈ ತೀಪು ಪ್ರಶ್ನಿಸಿ ರಾಜ್ಯ ಸರ್ಕಾರ ಸವೋಚ್ಚ ನ್ಯಾಯಾಲಯಕ್ಕೆ ಹೋಗಿದೆ. ಅಲ್ಲಿ ಯಾವ ನಿರ್ಣಯ ಬರುತ್ತದೆಂಬುದನ್ನು ಕಾದುನೋಡಬೇಕು. ಶಾಲೆ ನಡೆಸುವುದು ಖರ್ಚಿನ ಬಾಬತ್ತೆಂಬುದು ಹೌದಾದರೂ, ಪಾಲಕರಿಗೆ ಹೊರೆಯಾಗದಂತೆ, ಗುಣಮಟ್ಟದ ಶಿಕ್ಷಣ ಸಿಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಖಾಸಗಿ ವಲಯದ ಮೇಲಿದೆ. ಉತ್ತಮ ಶಿಕ್ಷಣದಿಂದ ವ್ಯಕ್ತಿಗತ ಏಳಿಗೆ ಆಗುವ ಜತೆಗೆ, ದೇಶದ ಬೆಳವಣಿಗೆಗೂ ಅನುವಾಗುತ್ತದೆ ಎಂಬ ಅರಿವು ಎಲ್ಲರಲ್ಲೂ ಇದ್ದು, ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಅಪೇಕ್ಷಣೀಯ.

Share This Article

ಈ ಜನರಿಂದ ದೂರವಿರಿ ! ಇಲ್ಲದಿದ್ದರೆ ನಿಮ್ಮ ಜೀವನವೇ ಹಾಳಾಗುತ್ತದೆ..Chanakya Niti

Chanakya Niti: ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ಬೋಧಿಸಿದ್ದಾರೆ. ವೈಯಕ್ತಿಕ ಜೀವನದಿಂದ ವೈವಾಹಿಕ…

ಹಣೆಗೆ ಬಿಂದಿ ಇಟ್ಟುಕೊಳ್ಳುವುದರಿಂದ ಇಷ್ಟೆಲ್ಲ ಆರೋಗ್ಯ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ… Bindi

Bindi: ಇಂದಿನ ದಿನಗಳಲ್ಲಿ ಎಲ್ಲರೂ ಆಧುನಿಕ ಪದ್ಧತಿಗೆ ಒಗ್ಗಿಕೊಂಡಿದ್ದು, ತಲಾತಲಾಂತರದಿಂದ ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯಗಳನ್ನು ಬದಿಗಿಡಲಾಗುತ್ತಿದೆ.…

ನೀವು ಮಾಗಿದ ಬಾಳೆಹಣ್ಣುಗಳನ್ನು ಬಿಸಾಡುತ್ತೀರಾ? Banana ಉಪಯೋಗದ ಬಗ್ಗೆ ತಿಳಿಯಿರಿ….

Banana : ಬಾಳೆಹಣ್ಣನ್ನು ಇಷ್ಟಪಡದವರೇ ಇಲ್ಲ. ಇದಲ್ಲದೆ ಋತುಮಾನವನ್ನು ಲೆಕ್ಕಿಸದೆ ಎಲ್ಲಾ ವರ್ಗದ ಜನರಿಗೆ ಇದು…