ಪಿಎಂ ಆವಾಸ್​ ಯೋಜನೆ ಹಣ ಪಡೆದು ಗಂಡಂದಿರಿಗೆ ಕೈಕೊಟ್ಟ ಲವರ್ಸ್​ ಜತೆ ನಾಲ್ವರು ವಿವಾಹಿತೆಯರು ಪರಾರಿ!

ಲಖನೌ: ಪ್ರಧಾನ ಮಂತ್ರಿ ಆವಾಸ್​ ಯೋಜನೆ (ಪಿಎಂಎವೈ)ಯ ಹಣ ಸ್ವೀಕರಿಸಿದ ಬಳಿಕ ನಾಲ್ವರು ವಿವಾಹಿತ ಮಹಿಳೆಯರು ತಮ್ಮ ಗಂಡಂದಿರಿಗೆ ಕೈಕೊಟ್ಟು ಲವರ್ಸ್​ ಜೊತೆ ಎಸ್ಕೇಪ್​ ಆಗಿರುವ ವಿಚಿತ್ರ ಪ್ರಕರಣ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.

ಪಿಎಂಎವೈ ಕೇಂದ್ರೀಯ ಯೋಜನೆಯಾಗಿದ್ದು, ಬಡವರಲ್ಲಿ ನಗರ ವಸತಿ ಕೊರತೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ ಸರ್ಕಾರವು ಫಲಾನುಭವಿಗಳ ಖಾತೆಗಳಿಗೆ ಹಣವನ್ನು ವರ್ಗಾಯಿಸುತ್ತದೆ. ಇದರಿಂದ ಅವರು ಮನೆ ಹೊಂದಬಹುದು.

ಈ ಯೋಜನೆಯಡಿ ಕೇಂದ್ರ ಸರ್ಕಾರವು ಕುಟುಂಬದ ಮುಖ್ಯಸ್ಥೆಯಾದ ಮಹಿಳೆಯನ್ನು ಮನೆಯ ಮಾಲೀಕ ಅಥವಾ ಸಹ-ಮಾಲೀಕರಾಗಿರುವುದನ್ನು ಕಡ್ಡಾಯಗೊಳಿಸಿದೆ. ಹೀಗಾಗಿ ಹಣವು ಅವರ ಖಾತೆಗಳಿಗೆ ಜಮಾ ಆಗುತ್ತದೆ. ಈ ಯೋಜನೆಯಡಿ ಫಲಾನುಭವಿಗಳಾದ ನಾಲ್ವರು ಮಹಿಳೆಯರು ಮೊದಲ ಕಂತಿನ 50 ಸಾವಿರ ರೂ. ಹಣವನ್ನು ಸ್ವೀಕರಿಸಿದರು. ಇದಾದ ಬಳಿಕ ನಾಲ್ವರು ಕೂಡ ತಮ್ಮ ಗಂಡಂದಿರಿಗೆ ಕೈಕೊಟ್ಟ ತಮ್ಮ ತಮ್ಮ ಲವರ್ಸ್​ ಜೊತೆ ಪರಾರಿಯಾಗಿದ್ದಾರೆ.

ಹಣ ಸ್ವೀಕರಿಸಿದರೂ ಮನೆ ನಿರ್ಮಾಣ ಕಾರ್ಯ ಆರಂಭವಾಗದಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಮನೆಯ ಕೆಲಸವನ್ನು ಆರಂಭಿಸುವಂತೆ ಅಧಿಕಾರಿಗಳು ನೋಟಿಸ್​ ಕಳುಹಿಸಿದರು. ಆದರೆ, ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ಮಹಿಳೆಯರ ಗಂಡಂದಿರೇ ಸ್ಥಳೀಯ ಕಚೇರಿಗೆ ತೆರಳಿ ತಮ್ಮ ಪತ್ನಿಯರು ಹಣದ ಜೊತೆ ಲವರ್ಸ್​ ಜೊತೆ ಓಡಿ ಹೋಗಿದ್ದಾರೆ ಎಂದು ತಿಳಿಸಿದರು.

ಎರಡನೇ ಕಂತಿನ ಹಣವನ್ನು ಅವರ ಖಾತೆಗಳಿಗೆ ಕ್ರೆಡಿಟ್​ ಮಾಡಬೇಡಿ ಅಂತಾ ಇದೇ ಸಂದರ್ಭದಲ್ಲಿ ಸಂತ್ರಸ್ತ ಗಂಡಂದಿರು ಕೇಳಿಕೊಂಡರು. ಈ ಕತೆಯನ್ನು ಕೇಳಿ ಅಧಿಕಾರಿಗಳೇ ಒಂದು ಕ್ಷಣ ಅವಕ್ಕಾದರು. ಅಲ್ಲದೆ, ಮಹಿಳೆಯರಿಂದ ಹಣ ಹೇಗೆ ವಸೂಲಿ ಮಾಡುವುದು ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಗಂಡಂದಿರು ಸ್ಥಳೀಯ ಪೊಲೀಸ್​ ಠಾಣೆಗೆ ತೆರಳಿ ತಮ್ಮ ಪತ್ನಿಯರ ವಿರುದ್ಧ ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್​)

ಬೀದರ್​: ಮದುವೆ ಆಗಲ್ಲ ಎಂದಿದ್ದಕ್ಕೆ ಕೆರೆ ಬಳಿ ಕರೆದೊಯ್ದು ಯುವತಿಯ ಉಸಿರು ನಿಲ್ಲಿಸಿದ ಪಾಗಲ್​ ಪ್ರೇಮಿ

ಅಸಹಜ ಲೈಂಗಿಕ ಕ್ರಿಯೆ, ವರದಕ್ಷಿಣೆ ಕಿರುಕುಳ ಆರೋಪ: ರಾಖಿ ಪತಿ ಆದಿಲ್​ಗೆ ನ್ಯಾಯಾಂಗ ಬಂಧನ

ಸಂಸತ್ತಿನಲ್ಲಿ ಪಠಾಣ್​ ಸಿನಿಮಾ ಯಶಸ್ಸನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ! ಶಾರುಖ್​ ಅಭಿಮಾನಿಗಳ ಸಂಭ್ರಮ

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…