ಬೆಂಗಳೂರು: ‘ಹೌಸ್ಫುಲ್’, ‘ನಿಂಬೆಹುಳಿ’ ಚಿತ್ರಗಳನ್ನು ನಿರ್ದೇಶಿಸುವುದರ ಜತೆಗೆ ಅದರಲ್ಲಿ ನಾಯಕನಾಗಿಯೂ ನಟಿಸಿದ್ದ ಹೇಮಂತ್ ಹೆಗ್ಡೆ, ಈಗ ಸಣ್ಣ ಗ್ಯಾಪ್ನ ನಂತರ ಇನ್ನೊಂದು ಕಾಮಿಡಿ ಚಿತ್ರದ ಮೂಲಕ ವಾಪಸ್ಸಾಗುತ್ತಿದ್ದಾರೆ. ಈ ಬಾರಿ ಒಂದು ಗಹನವಾದ ವಿಷಯವನ್ನು ತಮಾಷೆಯಾಗಿ ಹೇಳುವುದಕ್ಕೆ ಹೊರಟಿದ್ದಾರೆ.
ಇದನ್ನೂ ಓದಿ: ನಟ ಸುದೀಪ್ಗೆ ಬಂದ ಬೆದರಿಕೆ ಪತ್ರದಲ್ಲಿ ಏನಿದೆ? ತನಿಖೆಯ ಜವಾಬ್ದಾರಿ ಸಿಸಿಬಿ ಹೆಗಲಿಗೆ
ಉತ್ತರ ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ರೈತರ ಮಕ್ಕಳಿಗೆ ಹೆಣ್ಣು ಸಿಗುವುದೇ ಕಷ್ಟವಾಗಿದೆ. ಅದೇ ವಿಷಯವನ್ನು ಹೇಮಂತ್ ತಮ್ಮ ‘ನಮ್ ನಾಣಿ ಮದ್ವೆ ಪ್ರಸಂಗ’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದು, ಈ ಚಿತ್ರ ಏಪ್ರಿಲ್ 07ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
‘ನಮ್ ನಾಣಿ ಮದ್ವೆ ಪ್ರಸಂಗ’ ಒಂದು ಅಪ್ಪಟ ಮನರಂಜನೆಯ ಚಿತ್ರವಾಗಿದ್ದು, ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಸಮಸ್ಯೆಯೇ ಈ ಚಿತ್ರದ ಕಥೆಯಂತೆ. ‘ಉತ್ತರ ಕನ್ನಡದ ಸೊಗಡನ್ನು ಕಟ್ಟಿ ಕೊಡುವ ಚಿತ್ರ ಇದು. ಶಿರಸಿಯಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣವಾಗಿದೆ. ಅಲ್ಲಿನ ಪ್ರಾಂತೀಯ ಭಾಷೆಯಲ್ಲೇ ಹೆಚ್ಚು ಸಂಭಾಷಣೆ ಇರುತ್ತದೆ. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡುವಂತಹ ಕಾಮಿಡಿ ಚಿತ್ರ. ಕರ್ನಾಟಕದ ಜ್ವಲಂತ ಸಮಸ್ಯೆಯನ್ನು ಹಾಸ್ಯದ ರೂಪದಲ್ಲಿ ಹೇಳುವ ಪ್ರಯತ್ನ ಮಾಡಿದ್ದು, ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಗುವ ನಂಬಿಕೆ ಇದೆ’ ಎನ್ನುತ್ತಾರೆ ಹೇಮಂತ್.
‘ನಮ್ ನಾಣಿ ಮದ್ವೆ ಪ್ರಸಂಗ’ ಚಿತ್ರದಲ್ಲಿ ಎರಡು ಹಾಡುಗಳಿದ್ದು, ವಿ.ಮನೋಹರ್ ಹಾಗೂ ರವಿ ಮುರೂರ್ ಸಂಗೀತ ನೀಡಿದ್ದಾರೆ. ಚಿತ್ರದ ಒಂದು ವಿಶೇಷತೆಯೆಂದರೆ, ಅದು ಹವ್ಯಕ ಭಾಷೆಯ ಹಾಡು. ಹೇಮಂತ್ ಹೆಗ್ಡೆ ಅವರೆ ಬರೆದಿರುವ ಈ ಹಾಡಿಗೆ ರವಿ ಮುರೂರ್ ಸಂಗೀತ ಸಂಯೋಜಿಸಿದ್ದಾರೆ. ಯೂಟ್ಯೂಬ್ನ ಎ2 ಮ್ಯೂಸಿಕ್ ಚಾನಲ್ನಲ್ಲಿ ಈ ಹಾಡು ಈಗಾಗಲೇ ಬಿಡುಗಡೆಯಾಗಿ, ಜನಪ್ರಿಯವಾಗಿದೆ.
ಇದನ್ನೂ ಓದಿ: ಮೋದಿ ಜತೆಗೆ ಕಾಣಿಸಿಕೊಂಡ ಅಭಿಷೇಕ್ ಅಂಬರೀಷ್; ಇಲ್ಲಿದೆ ವಿವರ
ಸಂದೀಪ್ ನಾಗರಾಜ್ ನಿರ್ಮಿಸಿರುವ ‘ನಮ್ ನಾಣಿ ಮದ್ವೆ ಪ್ರಸಂಗ’ ಚಿತ್ರಕ್ಕೆ ಹೇಮಂತ್ ಕಥೆ ಬರೆದು ನಿರ್ದೇಶಿಸುವುದರ ಜತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರಿಗೆ ನಾಯಕಿಯರಾಗಿ ಶೃತಿ ನಂದೀಶ್ ಮತ್ತು ಶ್ರೇಯಾ ವಸಂತ್ ನಟಿಸಿದ್ದು, ರಾಜೇಶ್ ನಟರಂಗ, ಪದ್ಮಜಾ ರಾವ್, ಸುನೇತ್ರ ಪಂಡಿತ್, ಮಧು ಹೆಗ್ಡೆ, ರೇವಣ್ಣ ಸಿದ್ದಯ್ಯ ಮುಂತಾದವರು ನಟಿಸಿದ್ದಾರೆ. ಕೃಷ್ಣ ಭಂಜನ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
‘ಸ್ವಾತಿ ಮುತ್ತಿನ ಮಳೆಹನಿಯೇ’ ಟೈಟಲ್ ವಿವಾದ; ರಮ್ಯಾ ಪರವಾಗಿ ಕೋರ್ಟ್ ಆದೇಶ