

ಮೈಸೂರು: ಭುವನೇಶ್ವರ ಒಡಿಶಾದ ಕೆಐಐಟಿ ವಿಶ್ವವಿದ್ಯಾಲಯಲ್ಲಿ ಆಯೋಜಿಸಿರುವ 2024-25ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೈಸೂರು ವಿವಿ ತಂಡ ಭಾಗಿಯಾಗಿದೆ.
ಈ ಸಂಬಂಧ ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಏಪ್ರಿಲ್ 2 ರಿಂದ 12ರ ವರೆಗೆ ಪಂದ್ಯಾವಳಿ ನಡೆಯಲಿದೆ.
ಕೆ.ಸುಪ್ರೀತಾ(ನಾಯಕಿ), ಎಸ್.ಅಕ್ಷತಾ, ಪ್ರತಿಮಾ ಎಂ.ಸುರೇಶ್, ಎಸ್.ನಂದಿತಾ, ಜಿ.ದಕ್ಷಿತ, ಬಿ.ಆರ್.ಕಾವ್ಯ, ಜಿ.ವಿದ್ಯಾ, ಪಿ.ಸಲೋನಿ, ಸಾಕ್ಷಿ, ಸಾಧನಾ ಎಂ. ನಾಯರ್, ವಿ.ವರ್ಷಿತ, ಅದಿತಿ ರಮೇಶ್ ಆಯ್ಕೆಯಾಗಿದ್ದು, ತರಬೇತುದಾರರಾದ ಎಸ್.ರಜತ್, ವ್ಯವಸ್ಥಾಪಕ ಡಾ.ಎಚ್.ಎಸ್.ಭಾಸ್ಕರ್ ನೇತೃತ್ವದಲ್ಲಿ ನಮ್ಮ ತಂಡ ಪಂದ್ಯಾವಳಿಯಲ್ಲಿ ಭಾಗಿಯಾಗಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.