'ಗಲ್ವಾನ್ ಚೀನಾದ್ದಲ್ಲ, ಭಾರತದ್ದು...ಅದಕ್ಕೆ ಪುರಾವೆ ಇದೆ': ಕಣಿವೆ ಅನ್ವೇಷಿಸಿದವರ ಮರಿ ಮೊಮ್ಮಗನ ಮಾತುಗಳಿವು

Galwan Valley 20 June 20
Published on

ನವದೆಹಲಿ: ಪೂರ್ವ ಲಡಾಖ್​ನ ವಾಸ್ತವ ಗಡಿ ರೇಖೆ ಬಳಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಉಂಟಾಗಿ, ಭಾರತೀಯ ಸೇನೆಯ 20 ಯೋಧರು ಹುತಾತ್ಮರಾಗಿದ್ದಾರೆ.

ಈ ಸಂಘರ್ಷಕ್ಕೆ ಕಾರಣ ಭಾರತದ ಸೈನಿಕರು ಎಂದು ಚೀನಾ ಪ್ರತಿಪಾದಿಸುತ್ತಿದೆ. ಗಾಲ್ವಾನ್​ ಕಣಿವೆ ನಮ್ಮದು. ಭಾರತೀಯ ಯೋಧರು ಗಡಿ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ. ಅವರೇ ಈಗಿನ ಸಾವು-ನೋವಿಗೆ ಕಾರಣ ಎಂದು ಚೀನಾ ಹೇಳಿದೆ. ಇದನ್ನೂ ಓದಿ: ಕೊವಿಡ್​-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ದೆಹಲಿ ಆರೋಗ್ಯ ಸಚಿವರ ಸ್ಥಿತಿ ಗಂಭೀರ…

ಈ ಮಧ್ಯೆ ಗಾಲ್ವಾನ್​ ಪ್ರದೇಶವನ್ನು ಕಂಡು ಹಿಡಿದ ರಸೂಲ್ ಗಾಲ್ವಾನ್ ಅವರ ಮರಿ ಮೊಮ್ಮಗ ಮೊಹಮ್ಮದ್​ ಅಮಿನ್​ ಗಾಲ್ವಾನ್​ ಅವರು ರಾಷ್ಟ್ರೀಯ ಮಾಧ್ಯಮವೊಂದರ ಬಳಿ ಮಾತನಾಡುತ್ತ, ಈ ಕಣಿವೆಗೆ ಗಾಲ್ವಾನ್​ ಎಂದು ಹೆಸರು ಬಂದಿದ್ದೇ ನನ್ನ ಮುತ್ತಾತ ಅದನ್ನು ಅನ್ವೇಷಿಸಿದ ಮೇಲೆ. ಇದು ಭಾರತಕ್ಕೇ ಸೇರಿದ್ದು ಎಂದು ಹೇಳಿದ್ದಾರೆ.

1892-1893ರ ಅವಧಿಯಲ್ಲಿ ಬ್ರಿಟಿಷರ ಜತೆಗೆ ಈ ಕಣಿವೆಯಲ್ಲಿ ಟ್ರಕ್ಕಿಂಗ್​ ಮಾಡಿದ್ದರು. ಬ್ರಿಟಿಷ್​ ಅಧಿಕಾರಿಗಳು ಈ ಪ್ರದೇಶದಲ್ಲಿ ದಾರಿ ತಪ್ಪಿದಾಗ ನಮ್ಮ ಮುತ್ತಾತ ಈ ಕಣಿವೆಯನ್ನು ಅನ್ವೇಷಿಸಿ, ಇಲ್ಲಿನ ದಾರಿಯ ಮೂಲಕ ಅವರಿಗೆ ಮಾರ್ಗ ತೋರಿಸಿದ್ದರು. ಗಲ್ವಾನ್​ ನಾಲಾದ ಮೂಲಕ ಹೊಸ ದಾರಿ ಕಂಡು ಹಿಡಿದು, ಪ್ರತಿಯೊಬ್ಬ ಬ್ರಿಟಿಷ್​ ಅಧಿಕಾರಿಯೂ ಸುಲಭವಾಗಿ ಅವರ ಗಮ್ಯ ತಲುಪುವಂತೆ ಮಾಡಿದರು. ಹಾಗಾಗಿ ಬ್ರಿಟಿಷರು ಈ ಕಣಿವೆಗೆ ನನ್ನ ಮುತ್ತಾತನ ಹೆಸರನ್ನೇ ಇಟ್ಟರು ಎಂದು ತಿಳಿಸಿದರು. ಇದನ್ನೂ ಓದಿ: ಪಾಕಿಸ್ತಾನದ ಕಳ್ಳಾಟ ಬಯಲು; ಏನೇನೆಲ್ಲಾ ಇತ್ತು ಗೊತ್ತಾ ನೆಲಕ್ಕುರುಳಿದ ಡ್ರೋನ್​ನಲ್ಲಿ?!

ಸದ್ಯದ ಭಾರತ ಮತ್ತು ಚೀನಾದ ನಡುವಿನ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಅವರು, ಗಲ್ವಾನ್​ ಕಣಿವೆ ಯಾವಾಗಲೂ ಭಾರತದ ಭೂಪ್ರದೇಶದಕ್ಕೆ ಸೇರಿದ್ದು. ಮುಂದೆ ಕೂಡ ಹಾಗೇ ಉಳಿಯಲಿದೆ. ಭಾರತೀಯ ಯೋಧರು ಚೀನಾ ಸೈನಿಕರನ್ನು ಅಲ್ಲಿಂದ ಓಡಿಸಲೇಬೇಕು. ಗಲ್ವಾನ್​ ಚೀನಾಕ್ಕೆ ಸೇರಿದ್ದು ಎಂಬುದಕ್ಕೆ ಆ ದೇಶದ ಬಳಿ ಪುರಾವೆ ಇಲ್ಲ. ಆದರೆ ಅದು ನಮ್ಮ ದೇಶದ್ದು ಎನ್ನಲು ನಮಗೆ ಸಾಕ್ಷಿ ಸಿಗುತ್ತದೆ ಎಂದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net