ಇದು ವರನಿಲ್ಲದ ಮದ್ವೆ! ಈ ಅದ್ಧೂರಿ ಆಚರಣೆಗೆ ವಧು ಖರ್ಚು ಮಾಡಿದ್ದು ಬರೋಬ್ಬರಿ 38 ಲಕ್ಷ ರೂ.

My fianc cheated weeks before our 35k wedding so I went ahead without him'
Published on

ನವದೆಹಲಿ: ನೀವು ಅನೇಕ ಮದುವೆಗಳನ್ನು ನೋಡಿರಬೇಕು.. ಆದರೆ  ವರ ಇಲ್ಲದ ಮದುವೆಯನ್ನು ನೀವು ಎಂದಾದರೂ ನೋಡಿದ್ದೀರಾ? ವರನಿಲ್ಲದ ಬ್ರಿಟನ್ ನಲ್ಲಿ ಇಂಥದ್ದೊಂದು ವಿಚಿತ್ರ 'ಮದುವೆ' ನಡೆದಿದೆ.

ಮದುವೆಗೆ ಕೆಲವು ದಿನಗಳ ಮೊದಲು ತನ್ನ ಭಾವಿ ಪತಿ ತನಗೆ ಮೋಸ ಮಾಡುತ್ತಿದ್ದಾನೆಂದಿ ಅರಿರತುಕೊಂಡ ಯುವತಿ ವರನಿಗೆ ಈ  ವುವಾಹ ಬೇಡ ಎಂದು ಹೇಳಿದ್ದಾಳೆ. ಆದರೆ, ಮದುವೆ ಸಮಾರಂಭ ಹಾಗೂ ಹನಿಮೂನ್ ಟ್ರಿಪ್ ಯಾವುದೂ ಕೂಡಾ ರದ್ದಾಗಿರಲಿಲ್ಲ. ಮೇಲಾಗಿ ಮದುವೆ ಸಮಾರಂಭಕ್ಕೆ ಸುಮಾರು ರೂ. 38 ಲಕ್ಷ ಖರ್ಚು ಮಾಡಲಾಗಿದೆ. ನಾಟಿಂಗ್‌ಹ್ಯಾಮ್‌ಶೈರ್‌ನ ಮ್ಯಾನ್ಸ್‌ಫೀಲ್ಡ್‌ನಲ್ಲಿ ವಿಚಿತ್ರವಾದ 'ವಿವಾಹ' ನಡೆದಿದೆ.

31 ವರ್ಷದ ಲಿಂಡ್ಸೆ ಸ್ಲೇಟರ್​ ಸುಮಾರು 12 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಳು. ತಮ್ಮ 12 ವರ್ಷಗಳ ಸಂಬಂಧಕ್ಕೆ ವಿವಾಹ ಮುದ್ರೆ ಒತ್ತಲು ಇಬ್ಬರೂ 2020 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಮದುವೆಯ ದಿನಾಂಕವನ್ನು ಸಹ 17ನೇ ಆಗಸ್ಟ್ 2024 ರಂದು ನಿರ್ಧರಿಸಲಾಗಿತ್ತು. ಆದರೆ ಈ ಜೋಡಿ ಮದುವೆಯಾಗದೆ ಬೇರ್ಪಟ್ಟರು.  ಮದುವೆಯಾಗಲು ಬಯಸಿದ ವ್ಯಕ್ತಿಯೂ ಬೇರೊಬ್ಬನನ್ನು ಪ್ರೀತಿಸುತ್ತಿರುವುದು ಗೊತ್ತಾಯಿತು.  ಹೀಗಾಗಿ ಈಕೆ ಈತನ ಜತೆ ಮದುವೆ ಬೇಡ ಎಂದು ನಿರ್ಧಾರ ಮಾಡಿದಳು. ಆದರೆ ನಂತರ ಅವರು ವರನಿಲ್ಲದೆ ವಿಶೇಷ ವಿವಾಹವನ್ನು ಮಾಡಲು ನಿರ್ಧರಿಸಿದರು.

ತಾನು ಮದುವೆಯಾಗಲು ಯೋಜಿಸಿದ ದಿನವನ್ನು 'ಸ್ವಾತಂತ್ರ್ಯ ದಿನ' ಎಂದು ಆಚರಿಸಲು ನಿರ್ಧರಿಸಿದಳು.  ಮದುವೆ ಮತ್ತು ಹನಿಮೂನ್ ಟ್ರಿಪ್ ಗೆ 46 ಸಾವಿರ ಡಾಲರ್ (38 ಲಕ್ಷಕ್ಕೂ ಅಧಿಕ) ಖರ್ಚು ಮಾಡಿದ್ದಾರೆ. ಲಿಂಡ್ಸೆ ತನ್ನ ಖರ್ಚು ವ್ಯರ್ಥವಾಗದಂತೆ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಚರಿಸಲು ಯೋಜಿಸುತ್ತಾಳೆ. ಆಕೆಯ ಸಹೋದರಿ ಬೆತ್ ಕೂಡ ಇದಕ್ಕೆ ಸಹಾಯ ಮಾಡಿದರು.

'ಫ್ರೀಡಂ ಪಾರ್ಟಿ'ಯ ಭಾಗವಾಗಿ ವರನಿಲ್ಲದ ಮದುವೆಯಲ್ಲಿ ಸುಮಾರು 70 ಅತಿಥಿಗಳು ಭಾಗವಹಿಸಿದ್ದರು. ತಿನ್ನುವುದು, ಕುಡಿಯುವುದು ಮತ್ತು ನೃತ್ಯದಂತಹ ವಿವಿಧ ಚಟುವಟಿಕೆಗಳನ್ನು ಒಳಗೊಂಡಿದೆ. ಇದಾದ ನಂತರ ಲಿಂಡ್ಸೆ ಕೂಡ ಏಳು ದಿನಗಳ ಹನಿಮೂನ್ ಟ್ರಿಪ್‌ನ ಭಾಗವಾಗಿ ತನ್ನ ಗೆಳತಿಯೊಂದಿಗೆ ಗ್ರೀಸ್‌ಗೆ ತೆರಳಿದ್ದಳು. ವೃತ್ತಿಯಲ್ಲಿ ವಕೀಲರಾಗಿರುವ ಲಿಂಡ್ಸೆ ಈ ನಿರ್ಧಾರದಿಂದ ಸಂತಸಗೊಂಡಿದ್ದಾರೆ. ಕಷ್ಟದ ಸಮಯದಲ್ಲಿ ತನ್ನೊಂದಿಗೆ ನಿಂತ ಎಲ್ಲರಿಗೂ ಅವರು ಧನ್ಯವಾದಗಳನ್ನು ಅರ್ಪಿಸಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net