ಧೋನಿ ಬಗ್ಗೆ ಆರೋಪ ಮಾಡಿದ ಯೋಗರಾಜ್​​ ಸಿಂಗ್​; ತಂದೆಗೆ ಮಾನಸಿಕ ಸಮಸ್ಯೆಯಿದೆ ಎಂದ ಯುವರಾಜ್​ ಸಿಂಗ್​!

Yuvraj Singh
Published on

ನವದೆಹಲಿ: ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಕ್ರಿಕೆಟ್ ಲೋಕದಲ್ಲಿ ಅಜಾತಶತ್ರು ಎಂದೇ ಖ್ಯಾತರಾಗಿದ್ದಾರೆ. ಧೋನಿಯನ್ನು ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಟೀಕೆ ಮಾಡಿದ್ದಾರೆ. ಈ ಕುರಿತಾದ ಸುದ್ದಿ ಎಲ್ಲಡೆ ವೈರಲ್​ ಆಗುತ್ತಿದ್ದಂತೆ ಈಗ ಯುವರಾಜ್​ ಸಿಂಗ್​​ ತಂದೆ ಕುರಿತಾಗಿ ಮಾತನಾಡಿರುವ ಹಳೆ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಯೋಗರಾಜ್​​ ಸಿಂಗ್​ ಭಾರತದ ಮಾಜಿ ಕ್ರಿಕೆಟಿಗ, ನಟ ಕೂಡ ಹೌದು. ಇವರು ಸಂದರ್ಶನವೊಂದರಲ್ಲಿ ಮಾತನಾಡಿ, ಯುವರಾಜ್​ ಸಿಂಗ್​​ನ ವೃತ್ತಿ ಜೀವನ ಕೊನೆಗೊಳ್ಳಲು ಧೋನಿ ಕಾರಣ. ಯುವಿ ಇನ್ನೂ 4-5 ವರ್ಷ ಆಡಬಹುದಿತ್ತು ಎಂದು ಮಹೇಂದ್ರ ಸಿಂಗ್​ ಧೋನಿ ಬಗ್ಗೆ ಗಂಭೀರ ಆರೋಪ ಮಾಡಿದ್ದರು.

ಅವರೊಬ್ಬ ಮಹಾನ್ ಕ್ರಿಕೆಟಿಗ ಆದರೆ ನನ್ನ ಮಗನಿಗೆ ಆತ ಮಾಡಿದ್ದು ಈಗ ಬೆಳಕಿಗೆ ಬರುತ್ತಿದೆ. ಅವನು ಎಂದಿಗೂ ಕ್ಷಮಿಸುವುದಿಲ್ಲ. ನನ್ನ ಜೀವನದಲ್ಲಿ ನಾನು ಎರಡು ಕೆಲಸಗಳನ್ನು ಮಾಡಿಲ್ಲ - ಮೊದಲನೆಯದಾಗಿ, ನನಗೆ ಅನ್ಯಾಯ ಮಾಡಿದವರನ್ನು ನಾನು ಎಂದಿಗೂ ಕ್ಷಮಿಸಿಲ್ಲ. ಎರಡನೆಯದಾಗಿ, ತಪ್ಪು ಮಾಡಿದವರು ನನ್ನ ಕುಟುಂಬದ ಸದಸ್ಯರಾಗಲಿ ಅಥವಾ ನನ್ನ ಮಕ್ಕಳಾಗಲಿ ನಾನು ಯಾರನ್ನೂ ಕ್ಷಮಿಸುವುದಿಲ್ಲ ಎಂದಿದ್ದರು.

ಕಪಿಲ್​ ದೇವ್​ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದರು. ಈ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೀಗ ಇದರ ಬೆನ್ನಲ್ಲೇ ಯುವರಾಜ್​ ಸಿಂಗ್​ ತನ್ನ ತಂದೆಯ ಬಗ್ಗೆ ಮಾತನಾಡಿದ ಸಂಗತಿ ಇದೀಗ ವೈರಲ್​ ಆಗಿದೆ.

9 ತಿಂಗಳ ಹಿಂದೆ ಪಾಡ್​​ಕಾಸ್ಟ್​ವೊಂದರಲ್ಲಿ ಮಾತನಾಡಿದ ಯುವರಾಜ್​ ಸಿಂಗ್​​​, ‘ನಮ್ಮ ತಂದೆಗೆ ಮಾನಸಿಕ ಸಮಸ್ಯೆಯಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಅವರು ಮಾತ್ರ ಇದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಇದು ಅವರು ಗಮನಹರಿಸಬೇಕಾದ ವಿಷಯವಾಗಿದೆ. ಆದರೆ ಅವರು ಅದನ್ನು ಗಂಭೀರವಾಗಿ ಒಪ್ಪಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net