More

    ಬಿಡದಿ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುತ್ತಪ್ಪ ರೈ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನೂ ನೆನಪಿಸಿಕೊಂಡು ಹೇಳಿದ್ದೇನು?!

    ರಾಮನಗರ: ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಬಹುಕಾಲದ ನಂತರ ಸೋಮವಾರ ಬಿಡದಿಯಲ್ಲಿರುವ ತಮ್ಮ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಭೂಗತ ಚಟುವಟಿಕೆ ನಿಲ್ಲಿಸಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೈ ಅವರ ಪತ್ರಿಕಾಗೋಷ್ಠಿ ಕುತೂಹಲ ಕೆರಳಿಸಿತ್ತು.

    ತಲೆಗೊಂದು ಬಿಳಿ ಹ್ಯಾಟು, ಬಿಳಿ ಶರ್ಟ್ ಮೇಲೊಂದು ಜಾಕೆಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದ ಮುತ್ತಪ್ಪ ರೈ ಹೇಳಿದ್ದಿಷ್ಟು: ನನಗೆ ಕಳೆದ ಕೆಲ ತಿಂಗಳ ಹಿಂದೆ ಬೆನ್ನು ನೋವು ಕಾಣಿಸಿಕೊಂಡಿತ್ತು. ವೈದ್ಯರ ಬಳಿ ಪರೀಕ್ಷಿಸಿದಾಗ ಕ್ಯಾನ್ಸರ್ ಇರುವುದು ಕಂಡುಬಂತು. ನಂತರ ದೆಹಲಿ, ಮದ್ರಾಸ್ ಹಾಗೂ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ.

    ಸುಮಾರು 90% ಈಗ ನನ್ನ ಆರೋಗ್ಯ ಸರಿಯಾಗಿದೆ. ಬ್ರೈನ್ ಗೆ ಕ್ಯಾನ್ಸರ್ ಅಟ್ಯಾಕ್ ಆಗಿತ್ತು, ವೈದ್ಯರು ಉತ್ತಮ ಚಿಕಿತ್ಸೆ ಕೊಟ್ಟಿದ್ದಾರೆ. ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ಚಿಕಿತ್ಸೆ ನೀಡಿದ್ದ ವೈದ್ಯರೇ ನನಗೆ ಚಿಕಿತ್ಸೆ ನೀಡಿದ್ದಾರೆ. ನನಗೆ ಕ್ಯಾನ್ಸರ್ ಇರುವುದು ಸತ್ಯ, ಚಿಕಿತ್ಸೆ ಪಡೆದಿರುವುದು ಸತ್ಯ. ಆದರೆ ನನ್ನ ಆತ್ಮವಿಶ್ವಾಸದಿಂದ ಬದುಕಿದ್ದೇನೆ.

    ಎಷ್ಟು ದಿನ ಬದುಕಿರುತ್ತೇನೆ ಎಂದು ಗೊತ್ತಿಲ್ಲ, ದೇವರು ಶಕ್ತಿ ಕೊಡುವವರೆಗೂ ಬದುಕುತ್ತೇನೆ. ಆದರೆ ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನಹರಿಸಬೇಕು. ಯಾರು ಕೂಡ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ನನ್ನ ಮಕ್ಕಳು ನನ್ನನ್ನ ಚೆನ್ನಾಗಿ ನೋಡಿಕೊಂಡರು. ನನ್ನ ಶತ್ರುವಿಗೂ ಸಹ ಈ ಕಾಯಿಲೆ ಬರಬಾರದು. ಅದೇ ನಾನು ದೇವರಲ್ಲಿ ಕೇಳಿಕೊಳ್ಳುತ್ತೇನೆ.

    ನಾನು 25 ರಿಂದ 30 ಕೋಟಿ ಟ್ಯಾಕ್ಸ್ ಕಟ್ಟುತ್ತೇನೆ. ನನ್ನ ಎಲ್ಲಾ ಆಸ್ತಿಯನ್ನ ಮಕ್ಕಳಿಗೆ ವಿಲ್ ಮಾಡಿದ್ದೇನೆ. ನನ್ನ ಜತೆಯಲ್ಲಿ ಕೆಲವರು 15 ವರ್ಷದಿಂದ ಇದ್ದಾರೆ. ಅವರಿಗೆಲ್ಲ ಒಂದು ಸೈಟ್ ಕೊಡಲು ನಿರ್ಧರಿಸಿದ್ದೇನೆ. ನನ್ನ ಮಕ್ಕಳಿಗೂ ಹೇಳಿದ್ದೇನೆ, ಯಾರು ನಮ್ಮನ್ನ ಪ್ರೀತಿ ಮಾಡ್ತಾರೋ ಅವರಿಗೆ ಪ್ರೀತಿ ಮಾಡಿ. ನೀವು ಹೇಗೆ ಜನರನ್ನ ನೋಡಿಕೊಳ್ತೀರೋ, ಅವರು ನಮ್ಮನ್ನು ಹಾಗೆಯೇ ಕಾಣ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts