ಮನಸ್ಸಿನ ನೆಮ್ಮದಿಗಾಗಿ ಕೊಪ್ಪಳದ ಗವಿಮಠದಲ್ಲಿ ಮುಸ್ಲಿಂ ಮಹಿಳೆ ಧ್ಯಾನ! Muslim woman

Muslim woman
Published on

Muslim woman : ನಗರದ ಗವಿಮಠದಲ್ಲಿ ಮುಸ್ಲಿಂ ಮಹಿಳೆ ನಿತ್ಯ ಒಂದು ಗಂಟೆ ಧ್ಯಾನ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕುಕನೂರು ತಾಲೂಕು ಕುದರಿಮೋತಿ ಗ್ರಾಮದ ಹಸೀನಾ ಬೇಗಂ ಜು.19ರಿಂದ ಧ್ಯಾನ ಮಾಡುತ್ತಿದ್ದಾರೆ.

ಆಗಾಗ ಮಠಕ್ಕೆ ಬರುತ್ತಿದ್ದ ಮಹಿಳೆ, ಮಾನಸಿಕ ಒತ್ತಡ ನಿವಾರಣೆಗೆ ಧ್ಯಾನ ಮಾಡಲು ಗವಿಶ್ರೀಗಳ ಅನುಮತಿ ಕೇಳಿದ್ದರು. ಅವರು ಅನುಮತಿ ನೀಡಿದ್ದರಿಂದ ಸಂತಸಗೊಂಡು ನಿತ್ಯ ಧ್ಯಾನ ಮಾಡುತ್ತಿದ್ದಾರೆ.

ಶ್ರೀಗಳು ಕೂಡುವ ಸ್ಥಳದ ಎದುರು ನಾಗದೇವರ ಮೂರ್ತಿ ಬಳಿ ಧ್ಯಾನ ಮಾಡುತ್ತಾರೆ. 11 ದಿನಗಳ ವ್ರತ ಸಂಕಲ್ಪ ಮಾಡಿದ್ದು, ಧ್ಯಾನದಿಂದ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ. ಸಮಸ್ಯೆಗಳು ನಿವಾರಣೆಯಾಗಿವೆ ಎನ್ನುತ್ತಾರೆ ಮಹಿಳೆ.

2013ರಿಂದ ಮಠಕ್ಕೆ ಬರುತ್ತಿರುವೆ. ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಅದಕ್ಕೆ ಧ್ಯಾನ ಮಾಡಲು ಶ್ರೀಗಳ ಅನುಮತಿ ಪಡೆದೆ. ಹಿಂದು-ಮುಸ್ಲಿಂ ಎಲ್ಲ ಒಂದೇ. ಇದು ನಮ್ಮ ಮಠ. ಮೊದಲ ದಿನ ಮಳೆಯಲ್ಲಿಯೇ ಧ್ಯಾನ ಮಾಡಿದೆ. ಶ್ರೀಗಳು ಕೂರುವ ಜಾಗದ ಎದುರು ನಿತ್ಯ 1 ಗಂಟೆ ಧ್ಯಾನ ಮಾಡುವೆ ಎಂದು ಹಸೀನಾಬೇಗಂ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net