VIDEO: ಮುಶ್ಫಿಕರ್ ರಹೀಂ ಸಹ-ಆಟಗಾರನ ಮೇಲೆ ಕೈಎತ್ತಿದ್ದು ಎಷ್ಟು ಬಾರಿ ಗೊತ್ತಾ..?

mushfiqur rahim for website new
Published on

ಢಾಕಾ: ಬಾಂಗ್ಲಾದೇಶದ ವಿಕೆಟ್ ಕೀಪರ್ ಮುಶ್ಫಿಕರ್ ರಹೀಂ ಮೊನ್ನೆಯಷ್ಟೇ ಮೈದಾನದಲ್ಲಿ ಸಿಟ್ಟಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದಕ್ಕಾಗಿ ಅವರು ಕ್ಷಮಾಪಣೆಯನ್ನು ಕೇಳಿ ಪ್ರಕರಣಕ್ಕೆ ಇತಿಶ್ರೀ ಹಾಡಲು ಯತ್ನಿಸಿದರು. ಆದರೆ, ಅದೇ ಪಂದ್ಯದಲ್ಲಿ ಮುಶ್ಫಿಕರ್ ರಹೀಂ ಎರಡು ಬಾರಿ ಸಿಟ್ಟಾಗಿದ್ದ ಪ್ರಸಂಗ ಬೆಳಕಿಗೆ ಬಂದಿದೆ. ಸಹ- ಆಟಗಾರ ನಾಸುಮ್ ಅಹಮದ್ ಮೇಲೆ ಸಿಟ್ಟಾಗಿ, ಹಲ್ಲೆಗೆ ಯತ್ನಿಸಿದ್ದ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಇನಿಂಗ್ಸ್‌ನ 13ನೇ ಓವರ್‌ನಲ್ಲೇ ಈ ಘಟನೆ ನಡೆದಿದೆ.

ಬೆಕ್ಸಿಮ್‌ಕೊ ಢಾಕಾ ಹಾಗೂ ಫಾರ್ಚುನ್ ಬರಿಶಾಲ್ ನಡುವಿನ ಬಂಗಾಬಂಧು ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದ ವೇಳೆ ಎರಡು ಬಾರಿ ಮುಶ್ಫಿಕರ್ ರಹೀಂ ಸಿಟ್ಟಾದ ಪ್ರಸಂಗ ನಡೆದಿದೆ. ಫಾರ್ಚುನ್ ತಂಡ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ 13ನೇ ಓವರ್ ಎಸೆದ ಅಹಮದ್, ಬ್ಯಾಟ್ಸ್‌ಮನ್ ಅಫಿಫ್ ಹೊಸೆನ್ ಕವರ್‌ನತ್ತ ಚೆಂಡನ್ನು ತಳ್ಳಿದ್ದಾರೆ. ಈ ವೇಳೆ ವಿಕೆಟ್ ಕೀಪರ್ ಮುಶ್ಫಿಕರ್ ರಹೀಂ ಹಾಗೂ ಬೌಲರ್ ನಾಸುಮ್ ಅಹಮದ್ ಚೆಂಡು ಪಡೆಯಲು ಓಡಿದ್ದಾರೆ. ಮೊದಲಿಗೆ ಚೆಂಡು ಪಡೆದ ರಹೀಂ ಬಳಿಕ ಬಂದ ನಾಸುಮ್ ಮೇಲೆ ಹಲ್ಲೆ ಮಾಡಲು ಯತ್ನಿಸಿದರಂತೆ. ಬಳಿಕ 17ನೇ ಓವರ್‌ನಲ್ಲೂ ಅಫಿಫ್ ಹೊಸೆನ್ ನೀಡಿದ ಕ್ಯಾಚ್ ಪಡೆಯುವ ವಿಚಾರದಲ್ಲೂ ರಹೀಂ, ನಾಸುಮ್ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಮುಶ್ಫಿಕರ್ ರಹೀಂ ವರ್ತನೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಯಿತು. ತಕ್ಷಣವೇ ಎಚ್ಚೆತ್ತ ಮುಶ್ಫಿಕರ್ ರಹೀಂ ಸಾಮಾಜಿಕ ಜಾಲತಾಣಗಳ ಮೂಲಕವೇ ಕ್ಷಮೆ ಕೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net