ಮೂರ್ತೆದಾರರ ಸಹಕಾರಿ ಮಹಾಮಂಡಲ ಸಭೆ

New Project (10)
Published on

ಬಂಟ್ವಾಳ: ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ಬಿ.ಸಿ.ರೋಡ್ ಘಟಕದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಬಿ.ಸಿ.ರೋಡಿನಲ್ಲಿ ಜರುಗಿತು.

ಮಹಾಮಂಡಲ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾಮಂಡಲವು 10 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, 5.50 ಕೋಟಿ ರೂ. ಸಾಲ ನೀಡಿದೆ. 5 ಕೋಟಿ ರೂ. ಹೂಡಿಕೆ ಮಾಡಿದ್ದು, ಪ್ರಸ್ತುತ ಸಾಲಿನಲ್ಲಿ 10.28 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 31 ಮೂರ್ತೆದಾರರ ಸಹಕಾರಿ ಸಂಘಗಳು ಇದ್ದು, ಇದರಲ್ಲಿ ಈಗಾಗಲೇ 18 ಪ್ರಾಥಮಿಕ ಮೂರ್ತೆದಾರರ ಸಹಕಾರಿ ಸಂಘಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತೊಡಗಿದ್ದು, 1,000 ಕೋಟಿ ರೂ. ವ್ಯವಹಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಮಹಾಮಂಡಲದ ವತಿಯಿಂದ ನೀಡುವ ಅತ್ಯುತ್ತಮ ಮೂರ್ತೆದಾರರ ಸಹಕಾರಿ ಸಂಘ ಪ್ರಶಸ್ತಿಯನ್ನು ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಹಾಗೂ ಅಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘಗಳಿಗೆ ನೀಡಿ ಸನ್ಮಾನಿಸಲಾಯಿತು.

ಉಪಾಧ್ಯಕ್ಷ ರಾಜೇಶ್ ಸುವರ್ಣ, ನಿರ್ದೇಶಕರಾದ ವಿಜಯ ಕುಮಾರ್ ಸೊರಕೆ, ಆರ್.ಸಿ.ನಾರಾಯಣ್ ರೆಂಜ, ಪುರುಷ ಎನ್.ಸಾಲ್ಯಾನ್, ಅಣ್ಣಿ ಯಾನೆ ನೋಣಯ್ಯ, ವಿಶ್ವನಾಥ ಪೂಜಾರಿ ಪಂಜ, ಬೇಬಿ ಕುಂದರ್, ವಿಶ್ವನಾಥ ಬಿ., ಶಿವಪ್ಪ ಸುವರ್ಣ, ಪದ್ಮನಾಭ ಕೋಟ್ಯಾನ್, ಹರೀಶ್ ಸುವರ್ಣ, ಗಣೇಶ್ ಪೂಜಾರಿ ಉಪಸ್ಥಿತರಿದ್ದರು. ನಿರ್ದೇಶಕಿ ಉಷಾ ಅಂಚನ್ ಸ್ವಾಗತಿಸಿದರು. ಸಿಇಒ ಕಿಶೋರ್ ಕುಮಾರ್ ನಿರೂಪಿಸಿದರು. ಶೈಲಜಾ ಕೆ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net