Murdeshwara beach ವಿದ್ಯಾರ್ಥಿನಿಯರ ಸಾವಿನ ಪ್ರಕರಣ 6 ಶಿಕ್ಷಕರು, ಅಮಾನತು ಅವರ ವಿರುದ್ಧ FIR

Murdeshwara beach
Published on

ಭಟ್ಕಳ: ಮುರ್ಡೇಶ್ವರ ಕಡಲ ತೀರದಲ್ಲಿ  Murdeshwara beach ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಸಾವಿಗೀಡಾದ ಪ್ರಕರಣ ಸಂಬಂಧಿಸಿದಂತೆ ಕೋಲಾರ ಮುಳಬಾಗಿಲು ಮೊರಾರ್ಜಿ ವಸತಿ ಶಾಲೆಯ ಆರು ಶಿಕ್ಷಕರ ವಿರುದ್ಧ ಮುರುಡೇಶ್ವರ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಮೊರಾರ್ಜಿ ವಸತಿ ಶಾಲೆಯ ಮುಖ್ಯಾಧ್ಯಾಪಕಿ ಶಶಿಕಲಾ, ಅತಿಥಿ ಶಿಕ್ಷಕರಾದ ಸುನೀಲ್ ಆರ್. ಚೌಡಪ್ಪ ಎಸ್., ವಿಶ್ವನಾಥ್ ಎಸ್., ಶಾರದಮ್ಮ ಸಿ.ಎನ್., ನರೇಶ ಕೆ. ವಿರುದ್ಧ ಪ್ರಕರಣ ದಾಖಲಾಗಿದೆ.

ಕೋಲಾರ ಮುಳುಬಾಗಿಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಲ್ಲಿ 19 ಬಾಲಕಿಯರು ಹಾಗೂ 27 ಬಾಲಕರು ಸೇರಿ 46 ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆತರಲಾಗಿತ್ತು. ಮೋನೋ ಟ್ರಾವೆಲ್ಸ್ನಲ್ಲಿ ಪ್ರವಾಸಕ್ಕೆ ಕರೆತಂದಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರು ಯಾವುದೇ ಸುರಕ್ಷತಾ ನಿಯಮ ಪಾಲಿಸದೇ ಮಕ್ಕಳನ್ನು ಸಮುದ್ರದ ನೀರಿನಲ್ಲಿ ಆಡವಾಡಲು ಅವಕಾಶ ಮಾಡಿಕೊಟ್ಟಿದ್ದರು. ಮಂಗಳವಾರದ ನಡೆದ ದುರ್ಘಟನೆಗೆ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರ ನಿರ್ಲಕ್ಷ್ಯವೇ ಕಾರಣವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Murdeshwara beach ಪ್ರಕರಣ  ಶಿಕ್ಷಕರ ಅಮಾನತು.

ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪಾಂಶುಪಾಲೆ ಶಶಿಕಲಾ ಹಾಗೂ ಅಥಿತಿ ಶಿಕ್ಷಕರನ್ನು ಅಮಾನತು ಮಾಡಿ ಆದೇಶ ಮಾಡಲಾಗಿದೆ. ಇನ್ನು ಮೃತ ವಿದ್ಯಾರ್ಥಿನಿಯರ ಶವ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು ಉಳಿದ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತ ಅವರ ಊರಿಗೆ ಕಳುಹಿಸಲು ವ್ಯವಸ್ಥೆ ಮಾಡಿದೆ. ಮುರ್ಡೇಶ್ವರ ಕಡಲ ತೀರಕ್ಕೆ ಮುಂದಿನ ಆದೇಶ ಬರುವವರೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಭಂದಿಸಿ ತಾಲೂಕಾಡಳಿತ ಆದೇಶಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net