

Punjab: ಭಾರತೀಯ ಮೂಲದ ಅಮೆರಿಕ ಪ್ರಜೆಯಾಗಿರುವ 71 ವರ್ಷದ ಮಹಿಳೆಯೊಬ್ಬರು, ಯುಕೆ ಮೂಲದ ವ್ಯಕ್ತಿಯೊಬ್ಬರನ್ನು ಮದುವೆಯಾಗಲು ಸಿಯಾಟಲ್ನಿಂದ ಭಾರತಕ್ಕೆ ಬಂದ ಕೆಲವೇ ದಿನಗಳಲ್ಲಿ ಹತ್ಯೆಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ರುಪಿಂದರ್ ಕೌರ್ ಅವರು ಚಿರಂಜೀತ್ ಅವರನ್ನು ಮದುವೆಯಾಗಲು ಜುಲೈ ತಿಂಗಳಲ್ಲಿ ಸಿಯಾಟಲ್ನಿಂದ ಲುಧಿಯಾನಾಗೆ ಬಂದಿದ್ದರು. ಆದರೆ, ಮದುವೆಯ ಸಂದರ್ಭದಲ್ಲಿ ಚರಂಜೀತ್ ಅವರು ಮಹಿಳೆಗೆ ಮೋಸ ಮಾಡಿ, ಹಣಕ್ಕಾಗಿ ಹತ್ಯೆ ಸಂಚು ರೂಪಿಸಿದ್ದಾರೆ ಎಂದಿದ್ದಾರೆ.
ಹತ್ಯೆ ನಂತರ ಜುಲೈ 24 ರಂದು ಪಂಧೇರ್ ಅವರ ಸಹೋದರಿ ಕಮಲ್ ಕೌರ್ ಖೈರಾ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದನ್ನು ಕಂಡ ಪೊಲೀಸರು ಈಕೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಕೊಲೆಯ ವಿಚಾರವಾಗಿ ಜುಲೈ 28ರಂದು ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದು, ಇದು ಅಲ್ಲಿನ ಸ್ಥಳೀಯ ಪೊಲೀಸರ ಮೇಲೆ ಒತ್ತಡ ಹೇರಿ ಈ ಪ್ರಕರಣವನ್ನು ಭೇದಿಸುವಂತೆ ಒತ್ತಾಯಿಸಿತು.
ಆರೋಪಿ ಸೋನು, ರುಪಿಂದರ್ ಅವರನ್ನು ಮನೆಯಲ್ಲಿ ಕೊಂದು, ದೇಹವನ್ನು ಸ್ಟೋರ್ರೂಂನಲ್ಲಿ ಸುಟ್ಟು ಹಾಕಿದ್ದಾರೆ. ಈ ಕೃತ್ಯ ಮಾಡಿದರೆ, ಚಿರಂಜೀತ್ ಅವರು ಸೋನು ಅವರಿಗೆ 50 ಲಕ್ಷ ನೀಡುವುದಾಗಿ ತಿಳಿಸಿದ್ದರು ಎಂದು ಅದೀಕೃತ ಮಾಹಿತಿಗಳು ತಿಳಿಸಿವೆ.
ಪ್ರಕರಣದ ಬಗ್ಗೆ ಅಧಿಕಾರಿಗಳು ಮಾತನಾಡಿದ್ದು, ಈ ಕೃತ್ಯವು ಉದ್ದೇಶವಾಗಿತ್ತು. ಆರೋಪಿ ಚಿರಂಜೀತ್ ಹಣದ ಆಸೆಗೆ ಮಹಿಳೆಯನ್ನು ಇಲ್ಲಿಗೆ ಕರೆಸಿಕೊಂಡು ಹತ್ಯೆಗೈದಿದ್ದಾನೆ. ಹಾಗೆಯೇ ಈತನ ಭೇಟಿಗೂ ಮುಂಚೆ ಚಿರಂಜೀತ್ ಗೆ ಗಣನೀಯ ಪ್ರಮಾಣದ ಹಣವನ್ನು ಆಕೆಯೊಂದ ವರ್ಗಾಹಿಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಕೊಲೆಯ ನಂತರ ಸೋನು ಅವರನ್ನು ಬಂಧಿಸಿದ್ದು, ಚಿರಂಜೀತ್ ತಲೆಮರೆಸಿಕೊಂಡಿದ್ದಾನೆ. ಇನ್ನು ಆತನನ್ನು ಬ್ರಿಟನ್ನಲ್ಲಿ ಬಂಧಿಸಲು ಪ್ರಕ್ರಿಯೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)