ಚೀನಾದ ಮಿಲಿಟರಿ ಫೋಟೋ ತೋರಿಸಿ ಭಾರತದ ಮೇಲಿನ ದಾಳಿ ಎಂದ​​ ಮುನೀರ್​: ಜಗತ್ತಿನ ಎದುರು ಮತ್ತೆ ಬೆತ್ತಲಾದ ಪಾಕ್! | Pak

dk - 2025-05-26T141607.853
Published on

Pak: ಪ್ರಧಾನಿ ಶೆಹಬಾಜ್​​ ಷರೀಫ್​ಗೆ ಫೀಲ್ಡ್ ಮಾರ್ಷಲ್ ಅಸೀಮ್​​ ಮುನೀರ್ ಚೈನಾದ ಮಿಲಿಟರಿ ಕವಾಯತು ಫೋಟೋವನ್ನು ಸ್ಮಾರಣಾರ್ಥವಾಗಿ ನೀಡುವ ಮೂಲಕ ಇದು ಭಾರತದ ಮೇಲೆ ದಾಳಿ ಮಾಡಿದ ಫೋಟೋ ಎಂದು ಬಿಂಬಿಸಲು ಯತ್ನಿಸಿದ್ದಾನೆ.

ಈ ಫೋಟೋ ವಾಸ್ತವವಾಗಿ ಕಳೆದ ಐದು ವರ್ಷಗಳಲ್ಲಿ ಹಲವು ಬಾರಿ ಬಳಸಲಾದ ಹಳೆಯ ಚಿತ್ರವಾಗಿದೆ. ಇದು PHL-03 ಆಗಿದ್ದು, ಇದು ಚೀನೀ ಮೂಲದ ಬಹು ರಾಕೆಟ್ ಲಾಂಚರ್ ಆಗಿದೆ. ಇದನ್ನು ಮೂಲತಃ 2019 ರಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ ಈ ಫೋಟೋವನ್ನು ಛಾಯಾಗ್ರಾಹಕ ಹುವಾಂಗ್ ಸೆರೆ ಹಿಡಿದಿದ್ದಾರೆ ಎಂದು ಭಾರತ ಪುರಾವೆಗಳನ್ನು ಒದಗಿಸಿದೆ.

ಪಾಕಿಸ್ತಾನ ಹಂಚಿಕೊಂಡಿರುವ ಈ ಫೋಟೋ ಹಾಗೂ ಕೆಲ ವಿಡಿಯೋಗಳ ವಿರುದ್ಧ ಭಾರತ ಪುರಾವೆಗಳನ್ನು ಹಂಚಿಕೊಂಡಿದೆ. ತನ್ನ ವಾಯುನೆಲೆಗಳಿಗೆ ಆಗಿರುವ ಗಮನಾರ್ಹ ಹಾನಿಯನ್ನು ಭಾರತ ಎತ್ತಿ ತೋರಿಸಿದೆ. ಆದಾಗ್ಯೂ, ಮುನೀರ್ ತಂಡವು ಎಂದಿಗೂ ಸಾಧಿಸಲಾಗದ ವಿಜಯವನ್ನು ಪಡೆಯಲು ಚೀನಾದ ಮಿಲಿಟರಿ ವ್ಯಾಯಾಮಗಳ ಹಳೆಯ ಚಿತ್ರವನ್ನು ಬಳಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪುರಾವೆ ಒದಗಿಸಿದೆ. ಈ ಮೂಲಕ ಪಾಕ್​ ಮತ್ತೊಮ್ಮೆ ಜಗತ್ತಿನಲ್ಲಿ ಬೆತ್ತಲಾಗಿದೆ.

ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಜಾರಿಯಲ್ಲಿದ್ದ ಉನ್ನತ ಮಟ್ಟದ ಭೋಜನಕೂಟದಲ್ಲಿ ಈ ಫೋಟೋವನ್ನು ಪ್ರಸ್ತುತಪಡಿಸಲಾಗಿದೆ ವರದಿಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net