ಮನೆಯಲ್ಲಿಯೇ ಇರಬೇಕಾಗಿದೆ ಮುಂಬೈ ಪೊಲೀಸರು, ಆತಂಕ ಮೂಡಿಸಿದೆ ಸಿಬ್ಬಂದಿಯಲ್ಲೇ ಹೆಚ್ಚುತ್ತಿರುವ ಸೋಂಕು

Mumbai police
Published on

ಮುಂಬೈ: ಇಡೀ ಮಹಾರಾಷ್ಟ್ರದಲ್ಲಿ ಕೋವಿಡ್​-19 ಕಾಯಿಲೆಗೆ ಒಳಗಾದವರ ಸಂಖ್ಯೆ 8,590. ಇದರಲ್ಲಿ ಮುಂಬೈವೊಂದರಲ್ಲಿಯೇ ಇವರ ಸಂಖ್ಯೆ 6,000 ಸಮೀಪಿಸಿದೆ. ಪ್ರತಿದಿನವೂ ಮಹಾನಗರದಲ್ಲಿ ನೂರಾರು ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ವರದಿಯಾಗುತ್ತಲೇ ಇವೆ.

ಇಲ್ಲಿನ 15 ಕೋಟಿಗೂ ಅಧಿಕ ಜನಸಂಖ್ಯೆಗೆ ರಕ್ಷಣೆ ನಿಡುವ ಹೊಣೆ ಹೊತ್ತಿರುವ, ಕರೊನಾ ಸಂಕಷ್ಟದ ಸಮಯದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಮುಂಬೈ ಪೊಲೀಸರೇ ಮನೆಯಲ್ಲಿ ಕೂರುವಂತಹ ಪರಿಸ್ಥಿತಿ ಎದುರಾಗಿದೆ.

ಹೌದು.... ಏಕೆಂದರೆ ಮುಂಬೈನ ಪೊಲೀಸ್​ನ 20 ಅಧಿಕಾರಿಗಳು ಸೇರಿ 107 ಜನರಿಗೆ ಕರೊನಾ ಅಂಟಿದೆ. ಇಷ್ಟೇ ಅಲ್ಲ ಮೂವರು ಪೊಲೀಸರು ಕೂಡ ಕೋವಿಡ್​-19ಕ್ಕೆ ಬಲಿಯಾಗಿದ್ದಾರೆ. ಹೀಗಾಗಿ ಪೊಲಿಸರು ಮನೆಯಿಮದ ಹೊಬರುವುದಕ್ಕೂ ಯೋಚನೆ ಮಾಡುವಂತಾಗಿದೆ.

ಇಂಥ ಸಂದರ್ಭದಲ್ಲಿ ಸಿಬ್ಬಂದಿಯ ಆತ್ಮಸ್ಥೈರ್ಯ ಕುಸಿಯದಂತೆ ನೋಡಿಕೊಳ್ಳಲು ಪೊಲೀಸ್​ ಇಲಾಖೆ ಮುಂದಾಗಿದೆ. ಪೊಲೀಸರು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ವ್ಯಾನಿಟಿ ವ್ಯಾನ್​ಗಳನ್ನು ವ್ಯವಸ್ಥೆ ಮಾಡಿದೆ.

ಕರೊನಾದಿಂದ ಮೃತಪಟ್ಟ ಮೂವರೂ ಪೊಲೀಸರು ಹಿರಿಯರಾದ ಕಾರಣ 55 ವರ್ಷ ಮೇಲ್ಪಟ್ಟ ಹಾಗೂ ಈಗಾಗಲೇ ಕಾಯಿಲೆಯಿಂದ ಬಳಲುತ್ತಿದ್ದರೆ ಅಂಥವರು ರಜೆ ಪಡೆದು ಮನೆಯಲ್ಲಿ ಇರಬಹುದು ಎಂದು ಇಲಾಖೆ ತಿಳಿಸಿದೆ. ಒಂದು ವೇಳೆ ಕರ್ತವ್ಯ ನಿರ್ವಹಿಸಲು ಬಯಸಿದಲ್ಲಿ ಕಚೇರಿಯಲ್ಲಿನ ಕೆಲಸಗಳನ್ನು ಮಾಡಿ, ಹೊರಾಂಗಣದಲ್ಲಿ ಕೆಲಸ ಮಾಡುವುದು ಬೇಡ ಎಂದು ಸೂಚಿಸಿದೆ. ಇದು ಹಲವರಿಗೆ ನಿರಾಳತೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net