ಗೆಲುವಿನ ಹಳಿಗೇರಿದ ಮುಂಬೈ ಇಂಡಿಯನ್ಸ್; ರಾಜಸ್ಥಾನ ರಾಯಲ್ಸ್ ಎದುರು 7 ವಿಕೆಟ್ ಜಯ

MUMBAI AND ROYALS FOR WEB
Published on

ನವದೆಹಲಿ: ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ಹಳಿಗೇರಲು ಯಶಸ್ವಿಯಾಗಿದೆ. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮ ಬಳಗ 7 ವಿಕೆಟ್‌ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿತು. ಟೂರ್ನಿಯುದ್ದಕ್ಕೂ ರನ್‌ಗಳಿಸಲು ಪರದಾಡಿದ್ದ ಕ್ವಿಂಟನ್ ಡಿಕಾಕ್ (70*ರನ್, 50 ಎಸೆತ, 6 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ ಸಂಘಟಿತ ಬ್ಯಾಟಿಂಗ್ ಹೋರಾಟದ ಫಲವಾಗಿ 4 ವಿಕೆಟ್‌ಗೆ 171 ರನ್ ಕಲೆಹಾಕಿತು. ಬಳಿಕ ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಆರಂಭಿಕ ವೈಫಲ್ಯದ ನಡುವೆಯೂ 18.3 ಓವರ್‌ಗಳಲ್ಲಿ 3 ವಿಕೆಟ್‌ಗೆ 172 ರನ್‌ಗಳಿಸಿ ಜಯದ ನಗೆ ಬೀರಿತು.

ರಾಜಸ್ಥಾನ ರಾಯಲ್ಸ್ : 4 ವಿಕೆಟ್‌ಗೆ 171 (ಜೋಸ್ ಬಟ್ಲರ್ 41, ಯಶಸ್ವಿ ಜೈಸ್ವಾಲ್ 32, ಸಂಜು ಸ್ಯಾಮ್ಸನ್ 42, ಶಿವಂ ದುಬೆ 35, ರಾಹುಲ್ ಚಹರ್ 33ಕ್ಕೆ 2, ಟ್ರೆಂಟ್ ಬೌಲ್ಟ್ 37ಕ್ಕೆ 1, ಜಸ್‌ಪ್ರೀತ್ ಬುಮ್ರಾ 15ಕ್ಕೆ 1), ಮುಂಬೈ ಇಂಡಿಯನ್ಸ್: 18.3 ಓವರ್‌ಗಳಲ್ಲಿ 3 ವಿಕೆಟ್‌ಗೆ 172 (ಕ್ವಿಂಟನ್ ಡಿ ಕಾಕ್ 70*, ಕೃನಾಲ್ ಪಾಂಡ್ಯ 39, ಮುಸ್ತಾಫಿಜರ್ ರೆಹಮಾನ್ 37ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net