ಮುಂಬೈ ಇಂಡಿಯನ್ಸ್​ ತಂಡದ ಹೊಸ ಜೆರ್ಸಿ ಅನಾವರಣ

mumbai indians jesrsy
Published on

ಮುಂಬೈ: ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡ ಐಪಿಎಲ್​ 13ನೇ ಆವೃತ್ತಿಗೆ ಹೊಸ ಜೆರ್ಸಿಯೊಂದಿಗೆ ಸಜ್ಜಾಗಿದೆ. ಈ ಹಿಂದಿನ ಐಪಿಎಲ್​ಗಳಿಗಿಂತ ಸ್ವಲ್ಪ ಭಿನ್ನವಾದ ಜೆರ್ಸಿಯೊಂದಿಗೆ 4 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್ ತಂಡ ಕಣಕ್ಕಿಳಿಯಲಿದೆ.

ರೋಹಿತ್​ ಶರ್ಮ ಸಾರಥ್ಯದ ಮುಂಬೈ ಇಂಡಿಯನ್ಸ್​ ತಂಡ ಭಾನುವಾರ ಅಬುಧಾಬಿಯಲ್ಲಿ ಅಭ್ಯಾಸ ಆರಂಭಿಸಿದೆ. ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ತಂಡದ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಲಾಗಿದೆ.

ಹೊಸ ಜೆರ್ಸಿಯಲ್ಲಿ ಎದುರು ಭಾಗದಲ್ಲಿ ತಿಳಿ ನೀಲಿ ಬಣ್ಣವಿದ್ದರೆ, ಭುಜದ ಭಾಗದಲ್ಲಿ ಚಿನ್ನದ ಸ್ಟ್ರಿಪ್ಸ್​ಗಳಿವೆ. ಭುಜ ಮತ್ತು ಪಕ್ಕದ ಭಾಗದ ಬಣ್ಣ ಕಡುನೀಲಿಯಾಗಿದೆ. ಟ್ರೌಸರ್ಸ್​ ಕಡು ನೀಲಿ ಬಣ್ಣದ್ದಾಗಿದೆ. ತಂಡದ ಅಧಿಕೃತ ಪ್ರಾಯೋಜಕ ಸ್ಯಾಮ್​ಸಂಗ್​ ಹೆಸರನ್ನು ಜೆರ್ಸಿಯ ಎದುರು ಭಾಗದಲ್ಲಿ ಬರೆಯಲಾಗಿದೆ. ಬೆನ್ನಹಿಂದೆ ಕಲರ್​ ಚಾನಲ್​ನ ಹೆಸರು ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net