VIDEO: ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಹೊಸ ಜೆರ್ಸಿಗಿದೆ ಐದು ವಿಶೇಷತೆಗಳು.!

MUMBAI INDIANS FOR WEB
Published on

ಮುಂಬೈ: 14ನೇ ಆವೃತ್ತಿಯ ಐಪಿಎಲ್‌ಗೆ ದಿನಗಣನೆ ಆರಂಭಗೊಂಡಿದೆ. ಈಗಾಗಲೇ ಎಲ್ಲ ತಂಡಗಳು ಭರ್ಜರಿ ಸಿದ್ಧತೆಯಲ್ಲಿವೆ. ಈ ಬಾರಿ ಕೇವಲ ಆರು ನಗರಗಳಲ್ಲಿ ಮಾತ್ರ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಮೊದಲ ಚರಣದಲ್ಲಿ ಚೆನ್ನೈ ಹಾಗೂ ಮುಂಬೈನಲ್ಲಿ ಪಂದ್ಯಗಳು ನಡೆಯಲಿವೆ. ಇದಕ್ಕೆ ಪೂರ್ವಭಾವಿಯಾಗಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಶನಿವಾರ ಜೆರ್ಸಿ ಅನಾವರಣ ಮಾಡಿತು. ಇಡೀ ವಿಶ್ವಕ್ಕೆ ಅವಶ್ಯಕತೆಯಿರುವ ಐದು ಅಂಶಗಳೇ ಜೆರ್ಸಿಯ ವಿಶೇಷತೆಯಾಗಿದೆ. ಭೂಮಿ, ನೀರು, ಬೆಂಕಿ, ಗಾಳಿ ಹಾಗೂ ಆಕಾಶದ ಮಹತ್ವವನ್ನು ಜೆರ್ಸಿಯಲ್ಲಿ ಸಾರಲಾಗಿದೆ.

ಪ್ರತಿವರ್ಷದಂತೆ ಈ ವರ್ಷವೂ ತಂಡದ ಜೆರ್ಸಿ ವಿಶೇಷತೆ ಹೊಂದಿದೆ. ಐದು ಬಾರಿ ಪ್ರಶಸ್ತಿ ಗೆದ್ದಿದ್ದು, ಇದಕ್ಕಾಗಿ ಜೆರ್ಸಿಯಲ್ಲಿ ಐದು ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ. ಸಾಮಾಜಿಕ ಕಳಕಳಿ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ನೀಲಿ ಬಣ್ಣದ ಜೆರ್ಸಿ ಐದು ವಿಶೇಷತೆಗಳನ್ನು ಎಂದು ಮುಂಬೈ ಇಂಡಿಯನ್ಸ್ ತಂಡ ವಕ್ತಾರ ತಿಳಿಸಿದ್ದಾರೆ. ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಐದು ಬಗೆಯ ವಿಶೇಷತೆ ಒಳಗೊಂಡಿದೆ ಈ ಜೆರ್ಸಿ ಎನ್ನುತ್ತಾರೆ. ಈ ಬಾರಿ ಜೆರ್ಸಿ ಮತ್ತಷ್ಟು ವಿಶೇಷವಾಗಿರಲಿದೆ ಎಂದು ತಂಡದ ಮೂಲಗಳು ತಿಳಿಸಿವೆ.

ಮುಂಬೈ ಇಂಡಿಯನ್ಸ್ ತಂಡ ಏಪ್ರಿಲ್ 9 ರಂದು ನಡೆಯಲಿರುವ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿದೆ. ಹಿಂದಿನ ವರ್ಷಗಳಲ್ಲಿ ತವರು ಮೈದಾನದಲ್ಲಿ ತರಬೇತಿ ಶಿಬಿರ ಆಯೋಜಿಸುತ್ತಿದ್ದ ತಂಡಗಳು ಈ ಬಾರಿ ಬಯೋಬಬಲ್ ವಲಯದ ನಿರ್ಮಾಣದಿಂದಾಗಿ ಮೊದಲ ಚರಣ ನಡೆಯಲಿರುವ ಮುಂಬೈ ಹಾಗೂ ಚೆನ್ನೈಗೆ ಬಂದಿಳಿದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net