ದೇಶಕ್ಕೀಗ ಹದಿಹರೆಯ, ಸಾಧಿಸಬೇಕಾದ್ದು ಬಹಳಷ್ಟಿದೆ- ಸಂಸದರ ಫ್ಲ್ಯಾಟ್ ಕಟ್ಟಡ ಉದ್ಘಾಟಿಸಿ ಪ್ರಧಾನಿ

Multi-storeyed flats for MPs inaugurated in national capital 1
Published on

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಸಂಸದರ ವಸತಿ ಸೌಕರ್ಯಕ್ಕಾಗಿ ನಿರ್ಮಿಸಿರುವ ಬಹುಮಹಡಿಯ ಫ್ಲಾಟ್​ ಕಟ್ಟಡವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. 80 ವರ್ಷ ಹಳೆಯ ಬಂಗಲೆಗಳ ಜಾಗದಲ್ಲಿ ಈ 76 ಮಹಡಿಯ ಫ್ಲ್ಯಾಟ್​ಗಳ ಕಟ್ಟಡ ತಲೆಎತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರದಲ್ಲಿ ಲೋಕಸಭೆ ಕಲಾಪದ ಮೂಲಕ ಗರಿಷ್ಠ ಮಟ್ಟದ ಫಲ ಉಂಟಾಗಿದ್ದು, ದೇಶದಲ್ಲಿ ಐತಿಹಾಸಿಕವೆನಿಸುವ ಅಭಿವೃದ್ಧಿ ಕಾರ್ಯಗಳು ನಡೆಯತೊಡಗಿವೆ. ಬದಲಾವಣೆಗಳು ಆಗತೊಡಗಿವೆ ಎಂದು ಹೇಳಿದರು.

ಲೋಕಸಭೆಯ 16 ಮತ್ತು 18 ನೇ ಅವಧಿ (2014-29) ಯನ್ನು ಹದಿಹರೆಯಕ್ಕೆ ಹೋಲಿಸಿದ ಅವರು, ದೇಶವೂ ಈಗ ಹದಿಹರೆಯದಲ್ಲಿದ್ದು, ಭವಿಷ್ಯ ರೂಪಿಸಿಕೊಳ್ಳುತ್ತಿದೆ. ಆತ್ಮನಿರ್ಭರ ಅಭಿಯಾನ, ಆರ್ಥಿಕ ಪ್ರಗತಿ ಹೀಗೆ ಹಲವು ವಿಚಾರಗಳಲ್ಲಿ ದೇಶಕ್ಕಾಗಿ ನಾವು ಸಾಧಿಸಬೇಕಾದ್ದು ಬಹಳಷ್ಟಿದೆ ಎಂದು ಮೋದಿ ವಿವರಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net