

ಪುತ್ತೂರು: ನಾವೀನ್ಯ ಹಾಗೂ ಪರಿಶುದ್ಧ ಆಭರಣಗಳ ಮೂಲಕ ಮನೆಮಾತಾಗಿರುವ ಮುಳಿಯ ಜ್ಯುವೆಲ್ಸ್ ಪುತ್ತೂರು ಹಾಗೂ ಬೆಳ್ತಂಗಡಿ ಮಳಿಗೆಯಲ್ಲಿ -.೧೫ರಿಂದ ೨೮ರವರೆಗೆ ಜೆಮ್ ಸ್ಟೋನ್ ಉತ್ಸವ ಪ್ರಾರಂಭಗೊಂಡಿದೆ.
ಗ್ರಾಹಕರಿಗೆ ವಿಶೇಷತೆಗಳನ್ನು ನೀಡುತ್ತಾ ಬಂದಿರುವ ಮುಳಿಯದ ೧೩ ದಿನಗಳ ಕಾಲ ಜೆಮ್ ಸ್ಟೋನ್ ಉತ್ಸವದಲ್ಲಿ ಒಂಬತ್ತು ವಿಭಿನ್ನ ರತ್ನದ ಕಲ್ಲುಗಳನ್ನು ಒಳಗೊಂಡಿರುವ ಮಾಣಿಕ್ಯ, ಮುತ್ತು, ಹವಳ, ಪಚ್ಚೆ, ಪುಷ್ಯರಾಗ, ವಜ್ರ, ನೀಲ, ಗೋಮೇಧಕ ಮತ್ತು ವೈಡೂರ್ಯ ಗಳಾದ ನವರತ್ನ ಆಭರಣಗಳ ಉತ್ಸವದ ಮೂಲಕ ಗ್ರಾಹಕರಿಗೆ ಹೊಸತನವನ್ನು ಪರಿಚಯಿಸುವುದಕ್ಕೆ ಮುಂದಾಗಿದೆ. ನವರತ್ನ ಆಭರಣಗಳದ ಉಂಗುರ, ನೆಕ್ಲೇಸ್, ಬ್ರೇಸ್ಲೆಟ್ಸ್, ಪದಕ, ಬಳೆ ಮತ್ತು ಸರಗಳು ಅಽಕ ವಿನ್ಯಾಸದ ನವರತ್ನ ಆಭರಣಗಳ ಅಮೋಘ ಸಂಗ್ರಹವಿದೆ.
ಮಹಿಳೆಯರ ಮನಸೂರೆಗೊಳಿಸುವ ರೀತಿಯಲ್ಲಿ ಚಿನ್ನಾಭರಣದ ಸಂಗ್ರಹ ಹೊಂದಿರುವ ಮುಳಿಯದಲ್ಲಿ ಗ್ರಾಹಕರು ಉತ್ಸವದ ಮೂಲಕ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಮುಳಿಯ ಮಳಿಗೆಯಲ್ಲಿ ಜೆಮ್ ಸ್ಟೋನ್ ಉತ್ಸವದ ಅನಾವರಣ ಮಾಡಲಾಯಿತು. ಎಕ್ಸೆಲ್ ಕಾಲೇಜ್ ಗುರುವಾಯನಕೆರೆಯ ಉಪನ್ಯಾಸಕಿ ಸಹನಾ ಜೈನ್, ನಿಶಾ ಪೂಜಾರಿ, ಶ್ರುತಿ ಶೆಟ್ಟಿ ಅನಾವರಣಗೊಳಿಸಿದರು. ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿ ಶಾಖಾ ಪ್ರಬಂಧಕಾರದ ಲೋಹಿತ್ ಕುಮಾರ್ ಹಾಗೂ ಉಪಶಾಖಾ ಪ್ರಬಂಧಕಾರದ ದಿನೇಶ್ ಮತ್ತು ಮುಳಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.