ಪತ್ನಿ ನೀತಾ ಅಂಬಾನಿಗೆ ದೀಪಾವಳಿ ಹಬ್ಬದ ಪ್ರಯುಕ್ತ ದುಬಾರಿ ಬೆಲೆಯ ಕಾರು ಗಿಫ್ಟ್​​ ಮಾಡಿದ ಮುಕೇಶ್ ಅಂಬಾನಿ

Nita ambani Mukesh Ambani
Published on

ಮುಂಬೈ: ಉದ್ಯಮಿ ಮುಕೇಶ್​ ಅಂಬಾನಿ ಅವರು ಪತ್ನಿ ನೀತಾ ಅಂಬಾನಿ ಅವರಿಗೆ  ದೀಪಾವಳಿ ಹಬ್ಬದ ಪ್ರಯುಕ್ತ ದುಬಾರಿ ಬೆಲೆ ಬಾಳುವ ಕಾರ್​ವೊಂದನ್ನು  ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ಬೆಲೆ  ಚರ್ಚೆಯಾಗುತ್ತಿದೆ.

ಮುಕೇಶ್ ಅಂಬಾನಿ ಅವರ ಬಳಿ ಇರುವ ದುಬಾರಿ ಬೆಲೆಗಳ ಕಾರುಗಳ ಪಟ್ಟಿಗೆ ಹೊಸ ಸೇರ್ಪಡೆಯೆಂದರೆ 10 ಕೋಟಿ ರೂ. ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್ ಎಸ್‌ಯುವಿ. ಬಿಲಿಯನೇರ್‌ ಮುಕೇಶ್‌ ಅಂಬಾನಿ ತಮ್ಮ ಪತ್ನಿ ನೀತಾ ಅಂಬಾನಿಗೆ ಈ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕಾರಿನ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ  CS 12 Vlogs ಹಂಚಿಕೊಂಡಿದೆ. ನೀತಾ ಅಂಬಾನಿಯವರ ಹೊಸ ರೋಲ್ಸ್ ರಾಯ್ಸ್ ಈಗ ಭಾರತದ ಅತ್ಯಂತ ದುಬಾರಿ ಕಾರು ಎಂದು ಗುರುತಿಸಿಕೊಂಡಿದೆ.
ಕಸ್ಟಮೈಸ್ ಮಾಡಲು ವ್ಯಾಪಕ ಶ್ರೇಣಿಯ ಆಯ್ಕೆಗಳನ್ನು ನೀಡುತ್ತದೆ. ಹುಡ್ ಅಡಿಯಲ್ಲಿ, ಅಲ್ಟ್ರಾ-ಐಷಾರಾಮಿ SUV 6.75-ಲೀಟರ್ ಟ್ವಿನ್-ಟರ್ಬೊ V12 ಎಂಜಿನ್‌ನಿಂದ ಚಾಲಿತವಾಗಿದ್ದು ಅದು 600 Bhp ಮತ್ತು 900 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅದೇನೆ ಇರ್ಲಿ,ಒಟ್ನಲ್ಲಿ ಅಂಬಾನಿ ಫ್ಯಾಮಿಲಿಯ ಕಾಸ್ಟ್ಲೀ ಕಾರು ಕಲೆಕ್ಷನ್‌ಗೆ ಸದ್ಯ ಹೊಸ ಕಾರೊಂದು ಸೇರ್ಪಡೆಯಾಗಿದೆ. ಕೆಲವೆ ಕೆಲವು ಸ್ಟಾರ್ಸ್​​ಗಳು ಮಾತ್ರ ಈ ಐಷಾರಾಮಿ ಕಾರಿನ ಮಾಲೀಕರಾಗಿದ್ದಾರೆ ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net