ಅಮೆರಿಕಾದಲ್ಲಿ ಮೋದಿಗೆ ಭೋಜನಕೂಟ; ವಿಶೇಷ ಅತಿಥಿಗಳಾಗಿ ಭಾರತೀಯ ಉದ್ಯಮಿಗಳಾದ ಮುಕೇಶ್- ನೀತಾ ಅಂಬಾನಿ

modi
Published on

ಅಮೆರಿಕಾ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾ ಪ್ರವಾಸದಲ್ಲಿದ್ದಾರೆ. ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಜತೆ ಔತಣಕೂಟದಲ್ಲಿ ಮೋದಿ ಭಾಗಿಯಾಗಿದ್ದಾರೆ.  ಈ ಜೌತಣಕೂಟಕ್ಕೆ ವಿಶೇಷ ಅತಿಥಿಗಳಾಗಿ ಭಾರತೀಯ ಉದ್ಯಮಿಗಳಾದ ಮುಕೇಶ್- ನೀತಾ ಅಂಬಾನಿ ಭಾಗವಹಿಸಿದ್ದಾರೆ.

ಸಾಂಸ್ಕೃತಿ ಬಾಂಧವ್ಯವನ್ನು ಬಲಪಡಿಸುವ ಮತ್ತು ಉಭಯ ದೇಶಗಳ ನಡುವಿನ ನಿರಂತರ ಸ್ನೇಹವನ್ನು ಆಚರಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.  ಈ ಭೋಜನಕ್ಕೆ 400ಕ್ಕೂ ಹೆಚ್ಚು ಅತಿಥಿಗಳಿಗೆ ವೈಟ್​​ಹೌಸ್ ಆಹ್ವಾನವನ್ನು ನೀಡಲಾಗಿತ್ತು.

ಶ್ವೇತಭವನದಲ್ಲಿ ಬಿಡನ್ ಆಯೋಜಿಸಿದ್ದ ಪ್ರಧಾನಿ ಮೋದಿ ಅವರ ಜತೆಗೆ ವಿಶೇಷ ಅತಿಥಿಗಳಾಗಿ ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ-ನೀತಾ ಅಂಬಾನಿ, ಗೂಗಲ್​​ ಮುಖ್ಯಸ್ಥ ಸುಂದರ್​​ ಪಿಚೈ ಹಾಗೂ ಅವರ ಪತ್ನಿ ಅಂಜಲಿ ಪಿಚೈ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಗಾಗಿ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ವಿಶೇಷವಾಗಿ  ಸಸ್ಯಾಹಾರಿ ಮೆನುವನ್ನು ಸಿದ್ಧಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net