ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘ ವಾರ್ಷಿಕ ಸಭೆ

byn (1)
Published on

ವಿಜಯವಾಣಿ ಸುದ್ದಿಜಾಲ ಬೈಂದೂರು ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘವು ಈ ಸಾಲಿನಲ್ಲಿ 249 ಕೋಟಿ ರೂ. ವ್ಯವಹಾರ ನಡೆಸಿ, 1.11 ಕೋಟಿ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.13.5 ಡಿವಿಡೆಂಡ್ ನೀಡಲಾಗುತ್ತಿದೆ. ಸಂದ ವತಿಯಿಂದ ಸಿಎನ್‌ಜಿ ಹಾಗೂ ಪೆಟ್ರೋಲ್ ಬಂಕ್ ನಿರ್ವಾಣಕ್ಕಾಗಿ ಸ್ಥಳ ಖರೀದಿ ವಾಡಲಾಗಿದ್ದು, ಈಗಾಗಲೇ ಕಾನೂನು ಪ್ರಕ್ರಿಯೆಗಳು ನಡೆಯುತ್ತಿದೆ. ಶ್ರೀದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಮುದೂರು ವ್ಯವಸಾಯ ಸೇವಾ ಸಹಕಾರಿ ಸಂದ ಅಧ್ಯಕ್ಷ ವಿಜಯ್ ಶಾಸ್ತ್ರಿ ಹೇಳಿದರು. ಸಂದ ಕಚೇರಿ ಆವರಣದಲ್ಲಿ ನಡೆದ 24ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಅಂಗನವಾಡಿ ಕೇಂದ್ರ ಬಸ್ರಿಬೇರು, ದುಡ್ಡಿನಗುಳಿ, ಮುದೂರು ದೇವಸ್ಥಾನ ಬೆಳ್ಕಲ್ ಪ್ರದೇಶಗಳಿಗೆ ಹಸಿರು ಬೋರ್ಡ್ ವಿತರಿಸಲಾಯಿತು. ಈ ಬಾರಿಯ ವಿಪರೀತ ಮಳೆಯ ಕಾರಣದಿಂದ ಮನೆ ಕಳೆದುಕೊಂಡ ಸಂದ ಮೂವರು ಸದಸ್ಯರಿಗೆ ಆರ್ಥಿಕ ಸಹಾಯ ನೀಡಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಧನಸಹಾಯ, ಇಬ್ಬರು ಟಾಪರ್ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪತ್ರಕರ್ತ ರಾಜು ಪೂಜಾರಿ ಮದ್ರಾಣಿ ಅವರ ಸಾವಾಜಿಕ ಕಾರ್ಯಗಳಿಗೆ ಧನಸಹಾಯ ನೀಡಲಾಯಿತು. ಸಹಕಾರಿ ಯೂನಿಯನ್ ವ್ಯವಸ್ಥಾಪಕ ವಿಶ್ವನಾಥ ಅಮೀನ್ ಅವರಿಗೆ ಸಹಕಾರ ಶಿಕ್ಷಣ ನಿಧಿ ಹಸ್ತಾಂತರಿಸಲಾಯಿತು. ಸಂ ನಿರ್ದೇಶಕರಾದ ಸಂತೋಷ್, ನಿಶಾದ್, ಚಂದ್ರಶೇಖರ್, ಅಬ್ದುಲ್ ಆಸಿಸ್, ರಾವೇಂದ್ರ ಡಿ., ಸಿ.ಕೆ.ವಿಜಿ, ಸುಶೀಲಾ, ಸುವರ್ಣ ಕುವಾರ್, ಬೆನ್ನಿ, ಜಯಂತ್, ಬಸವ ನಾಯ್ಕ, ವಲಯ ಮೇಲ್ವಿಚಾರಕ ಶಿವರಾಮ ಪೂಜಾರಿ ಇದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಪೂಜಾರಿ ಸ್ವಾಗತಿಸಿ, ಉಪಾಧ್ಯಕ್ಷ ನಕ್ಷತ್ರ ಬೋವಿ ವಂದಿಸಿದರು. ಪ್ರವೀಣ್ ಟಿ.ವರದಿ ಮಂಡಿಸಿದರು. ಮಂಜುನಾಥ ಬಿ.ಎಲ್.ನಿರೂಪಿಸಿದರು.

ಕೃಷಿ ಅವಲಂಬಿತ ಗ್ರಾಮೀಣ ಭಾಗದಲ್ಲಿ ಜನಜೀವನದ ಆರ್ಥಿಕ ಸ್ಥಿತಿಗತಿ ಹಾಗೂ ಸಾವಾಜಿಕ ಬದ್ಧತೆಯನ್ನು ಬಲಿಷ್ಠಗೊಳಿಸಲು ಸಹಕಾರಿ ಸಂಗಳು ಸಹಕಾರಿಯಾಗಿದೆ. ಜನರ ಅವಶ್ಯಕತೆಗೆ ಪೂರಕವಾಗಿ ತನ್ನ ಪ್ರಾವಾಣಿಕ ಸೇವೆ ಮೂಲಕ ಕೆಲಸ ವಾಡುತ್ತಿರುವ ಮುದೂರು ವ್ಯವಸಾಯ ಸೇವಾ ಸಹಕಾರಿ ಜಿಲ್ಲೆಯಲ್ಲಿ ವಾದರಿಯಾಗಿದೆ. ವಿಶ್ವನಾಥ ಅಮೀನ್, ಸಹಕಾರಿ ಯೂನಿಯನ್ ವ್ಯವಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net