

ಶಿರ್ವ: ಯಾಂತ್ರೀಕೃತ ಬದುಕಿನ ನಡುವೆ ಬಿಡುವಿಲ್ಲದೆ ಸಮಯದಲ್ಲಿ ಕೃಷಿ ಪರಂಪರೆ ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ ಶ್ಲಾಘನೀಯ ಎಂದು ಆಡಳಿತ ಮಂಡಳಿ ಸದಸ್ಯೆ ರೂಪಾ ಬಲ್ಲಾಳ್ ಹೇಳಿದರು.
ಪಾಜಕ ಆನಂದತೀರ್ಥ ಪ.ಪೂ ಕಾಲೇಜು ಹಾಗೂ ಆನಂದತೀರ್ಥ ವಿದ್ಯಾಲಯದ ವಸತಿ ನಿಲಯದ ವಿದ್ಯಾರ್ಥಿಗಳಿಗಾಗಿ ಕಾಲೇಜು ಆಡಳಿತ ಮಂಡಳಿ ಸದಸ್ಯ ಸುದರ್ಶನ್ ರಾವ್ ರವರ ಗದ್ದೆಯಲ್ಲಿ ಒಂದು ದಿನದ ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟಿಸಿ ಇತ್ತೀಚೆಗೆ ಮಾತನಾಡಿದರು.
ಕ್ರಿಡಾಕೂಟದಲ್ಲಿ ಆಡಳಿತ ಮಂಡಳಿ ಸದಸ್ಯ ಮಧ್ವರಾಜ್ ಭಟ್, ಪ್ರಾಂಶುಪಾಲ ವಿಜಯ್ ಪಿ.ರಾವ್, ಡಾ.ಗೀತಾ ಶಶಿದರ್, ದೈಹಿಕ ಶಿಕ್ಷಣ ಶಿಕ್ಷಕ ವಕ್ಷತ್ ಸಾಲಿಯಾನ್, ಸಂತೋಷ್ ಕುಮಾರ್ ಶೆಟ್ಟಿ, ಸುಮನಾ, ಕಲ್ಮೇಶ್, ಸಚಿನ್, ದರ್ಗಪ್ಪ, ಮಮತಾ, ಸಂಸ್ಕೃತ ಶಿಕ್ಷಕ ವೀರೇಂದ್ರ ಹೆಗ್ಡೆ, ಬಾಲಕರ ವಸತಿ ನಿಲಯದ ಮೇಲ್ವಿಚಾರಕ ಅಮೀಶ್, ಮಂಜುನಾಥ್, ಬಾಲಕಿಯರ ವಸತಿ ನಿಲಯ ಮೇಲ್ವಿಚಾರಕ ಶಿವಾನಿ, ಪಾವನಶ್ರೀ, ಆನಂದ ತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಸುಮಂತ್ ಮಯ್ಯ, ಹೇಮಂತ್ ಮಯ್ಯ ಉಪಸ್ಥಿತರಿದ್ದರು.