Muda case | ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯಿಸಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ

blank

ಮಂಡ್ಯ: ಸಿಎಂ ಸಿದ್ದರಾಮಯ್ಯ ಮುಡಾ ಪ್ರಕರಣದ ಕುರಿತ ಹೈಕೋರ್ಟ್​ ಆದೇಶದ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಯಾವುದೇ ತೀರ್ಮಾನ ಆಗದೇ ಇದ್ದರೂ ನನ್ನನ್ನು ಆರೋಪಿ ಮಾಡುತ್ತಿದ್ದಾರೆ. ನನ್ನ ಮೇಲಿನ ಆರೋಪ ಎಲ್ಲಾ ಮುಗಿಯಲಿ, ಅದೆಲ್ಲಾ ಮುಗಿದ ಮೇಲೆ ಮಾತಮಾಡುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಇದನ್ನೂ ಓದಿ: ಒಂದು ನಿಮಿಷವೂ ಮುಖ್ಯಮಂತ್ರಿ ಹುದ್ದೆಯಲ್ಲಿರಲು ಸಿದ್ದರಾಮಯ್ಯ ಅರ್ಹರಲ್ಲ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನಾಗಮಂಗಲ ಶ್ರೀ ಆದಿಚುಂನಗಿರಿ ಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಪಾದಯಾತ್ರೆಗೆ ನಾನೂ ಹೋಗಿದ್ದೆ, ಪಾದಯಾತ್ರೆಯಲ್ಲಿ ನಾನು ಜನರನ್ನು ಜಾಗೃತರನ್ನಾಗಿ ಮಾಡುವ ಕೆಲಸ ಮಾಡಿದ್ದೇನೆ. ಬಿಜೆಪಿ ನಾಯಕರ ಜತೆ ಹೆಜ್ಜೆ ಹಾಕಿದ್ದೇನೆ ಎಂದು ಹೇಳಿದರು.

ಸಿಎಂ ರಾಜೀನಾಮೆಗೆ ಒತ್ತಾಯ ಮಾಡಿಲ್ಲ

ನಾನು ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಮಾಡಿಲ್ಲ, ಇರುವ ಪರಿಸ್ಥಿತಿಯನ್ನು ಜನರಿಗೆ ಹೇಳಿದ್ದೇನೆ. ದೇಶದ ಕಾನೂನನಲ್ಲಿ ರಕ್ಷಣೆ ಕೊಡಲು ಸಂವಿಧಾನದಲ್ಲಿ ಅವಕಾಶ ಇದೆ. ಕಾನೂನು ಬಾಹಿರ ಚಟುವಟಿಕೆ ಮಾಡಿದ್ದರೆ ಏನು ತೀರ್ಪು ಬೇಕು ಅದು ನ್ಯಾಯಾಲಯ ಕೊಡುತ್ತದೆ. ಕಾನೂನಿನ ಒಳಗೆ ಇದ್ದರೆ ಏನು ಬೇಕಾದರೂ ಆಗಬಹುದು ಎಂದು ಸಚಿವರು ಹೇಳಿದರು.

Muda case | ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯಿಸಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ

ನಾನು ಸಿದ್ದರಾಮಯ್ಯ ಅವರಿಗೆ ಏನಾನೂ ಹೇಳಲ್ಲ. ನನ್ನ ಅಭಿಪ್ರಾಯ ನಾನು ಹೇಳಲ್ಲ. ಕುಮಾರಸ್ವಾಮಿ ಏನೋ ಮಾಡಿದ್ದಾನೆ ಎಂದು ಹೇಳಿದ್ದಾರೆ. ನನ್ನ ನೈತಿಕತೆ ಏನು ಅನ್ನೊದು ಕ್ಲಿಯರ್ ಆಗಬೇಕು. ಗ್ರೇಟ್ ಪಾಲಿಟಿಷಿಯನ್ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ, ಮಾಡಲಿ, ಉತ್ತರ ಕೊಡುತ್ತೇನೆ. ಪ್ರಾಸಿಕ್ಯೂಷನ್ ಪ್ರಕರಣ ಕ್ಲಿಯರ್ ಆದ ಬಳಿಕ ಮಾತನಾಡುತ್ತೇನೆ ಎಂದು ಅವರು ತಿಳಿಸಿದರು.

ಕೇಂದ್ರ ಸಚಿವನಾಗಿರುವುದನ್ನು ಸಹಿಸುತ್ತಿಲ್ಲ

ತಮ್ಮ ವಿರುದ್ಧ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯೆಸಿದ ಅವರು, ಸಿಎಂ ನೈತಿಕ ಹೊಣೆ ಹೊರಲಿಲ್ಲ ಅಂದರೆ, ಹೊತ್ತುಕೊಳ್ಳಿ ಎಂದು ನಾನು‌ ಹೇಳಲು ಆಗುತ್ತಾ? ನನ್ನನ್ನು ಇಕ್ಕಟ್ಟಿಗೆ ಸಿಕ್ಕಿಸಲು ಹೋಗಿದ್ದಾರೆ. ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇನೆ. ನಾಲ್ಕೈದು ಮಂದಿ ಬಿಡಾಡಿ ಮಂತ್ರಿಗಳು ನನ್ನ ಮೇಲೆ ಆರೋಪ ಮಾಡಿದ್ದಾರೆ, ಅವರಿಗೆ ನಾನು ಉತ್ತರ ಕೊಡುವ ಅಗತ್ಯ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

siddaramaiah highcourt decision

ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿರುವ ಬಗ್ಗೆ ಇನ್ನೂ ಅನುಮಾನ ಇದೆ. ನಾನು ಇದನ್ನು ಷಡ್ಯಂತ್ರ ಅನ್ನವುದಿಲ್ಲ, ಕುಮಾರಸ್ವಾಮಿ ಕೇಂದ್ರ ಸಚಿವನಾಗಿರುವುದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ. ಜನರ ನಡುವೆ ಕಂದಕ ಸೃಷ್ಟಿ ಮಾಡಲು ಹೀಗೆ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ನನ್ನ ವಿರುದ್ಧ ಯಾವ ಬಿಡಾಡಿಗಳು ಏನೂ ಮಾಡಲು ಆಗಲ್ಲ. ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಹೇಳುತ್ತಿದೇನೆ ಎಂದು ಸಚಿವರು ತಿಳಿಸಿದರು

Muda scam | ಸಿದ್ದರಾಮಯ್ಯ ಪ್ರಾಸಿಕ್ಯೂಷನ್​ಗೆ ಹೈಕೋರ್ಟ್ ಅನುಮತಿ: ಸಚಿವ ಎಂಬಿ ಪಾಟೀಲ್ ಶಾಕಿಂಗ್ ಹೇಳಿಕೆ

ಮತಕ್ಕಾಗಿ ಕಾಸು ಪ್ರಕರಣ: ಅ.16ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಿಎಂ ರೇವಂತ್ ರೆಡ್ಡಿಗೆ ಕೋರ್ಟ್​ ನಿರ್ದೇಶನ

Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…