ಆಲದಮರ ಪಾರ್ಕ್​ನಲ್ಲಿ ಅರಳಿದ ಮಣ್ಣಿನ ಗಣಪ

Mannina_Gananapa
Published on

ತುಮಕೂರು: ಜೇಡಿಮಣ್ಣನ್ನು ಕೈಗೆ ಮೆತ್ತಿಕೊಂಡ ಮಕ್ಕಳು, ಅವರೊಂದಿಗೆ ಪೋಷಕರು ಸಹ ಅತ್ಯಂತ ತಾಳ್ಮೆ, ತದೇಕಚಿತ್ತದಿಂದ ಗಣೇಶ ಮೂರ್ತಿ ಸೃಷ್ಟಿಯಲ್ಲಿ ತೊಡಗಿ ಖುಷಿಪಟ್ಟರು. ನಗರದ ಆಲದಮರ ಪಾರ್ಕ್​ ಆವರಣದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪ ನಿರ್ಮಾಣ ಕಾರ್ಯಾಗಾರದಲ್ಲಿ ನೂರಕ್ಕು ಹೆಚ್ಚು ಮಕ್ಕಳು ಭಾಗಿಯಾಗಿದ್ದು ವಿಶೇಷವೆನಿಸಿತ್ತು.

ನಗರದ ಆಲಮದರ ಪಾರ್ಕ್​ ಪ್ರೆಸ್​ಕ್ಲಬ್​ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಭಾನುವಾರ ವಣೋರ್ದಯ ಆರ್ಟ್​ ಗ್ರೂಪ್​ ಟ್ರಸ್ಟ್​ ಹಾಗೂ ಪ್ರೆಸ್​ ಕ್ಲಬ್​ ತುಮಕೂರು ವತಿಯಿಂದ ಆಯೋಜಿಸಿದ್ದ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ರಚನಾ ಕಾರ್ಯಾಗಾರ ಹಾಗೂ ಜಿಪಂ ವತಿಯಿಂದ ನೀರಿನ ಪರೀೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್​, ಸರ್ಕಾರಿ ಕಾರ್ಯಕ್ರಮವಿರಲಿ, ಖಾಸಗಿ ಕಾರ್ಯಕ್ರಮವಿರಲಿ ವಿಘ್ನ ನಿವಾರಕನಿಗೆ ಮೊದಲ ಪೂಜೆ ಸಲ್ಲುತ್ತದೆ. ಯಾವುದೇ ವಿಘ್ನ ಎದುರಾಗದಿರಲಿ ಎಂದು ನಾವು ಮೊದಲು ಪ್ರಾರ್ಥಿಸುವುದೇ ಗಣೇಶನನ್ನು. ಗಜಮುಖ ಗಣೇಶನನ್ನು ಕಂಡರೆ ಮಕ್ಕಳಿಗೆ ಇನ್ನೂಅಚ್ಚುಮೆಚ್ಚು. ಪರಿಸರಸ್ನೇಹಿ ಗಣೇಶನನ್ನು ನಿರ್ಮಿಸಿ ಅದನ್ನೇ ನಾವು ಪೂಜಿಸಲಿರುವುದು ವಿಶೇಷವೆನಿಸಿದೆ ಎಂದರು.

ಗಣೇಶೋತ್ಸವ ಆಚರಣೆಯಲ್ಲಿ ವಿಶೇಷ ಸಂದೇಶವಿದೆ. ಗಣೇಶನನ್ನು ಮಣ್ಣಿನಿಂದ ತಯಾರಿಸಿ ನೀರಿನಲ್ಲಿ ಬಿಡುತ್ತೇವೆ. ಅಂತೆಯೇ ನಾವು ಸಹ ಪರಿಸರದಿಂದ ಬರುತ್ತೇವೆ ಮತ್ತೆ ಪರಿಸರವನ್ನೇ ಸೇರುತ್ತೇವೆ. ಹಾಗಾಗಿ, ಇದರ ನಡುವೆ ಬರುವ ಅಹಂಕಾರವನ್ನು ನಾವು ಬಿಡಬೇಕಿದೆ. ಪ್ರೆಸ್​ಕ್ಲಬ್​ ನವರು ಸಾಮಾಜಿಕ ಕಳಕಳಿಯ ಉತ್ತಮ ಕೆಲಸ ಮಾಡುತ್ತಿದ್ದು ಅವರೊಂದಿಗೆ ಕೈಜೋಡಿಸಿರುವ ಮಕ್ಕಳು ಹಾಗೂ ಪೋಷಕರು ಅಭಿನಂದನಾರ್ಹರು ಎಂದು ತಿಳಿಸಿದರು.

ಪ್ರೆಸ್​ಕ್ಲಬ್​ ಹಾಗೂ ವಣೋರ್ದಯ ಆರ್ಟ್​ ಗ್ರೂಪ್​ ಸಹಯೋಗದಲ್ಲಿ ಮಕ್ಕಳಿಗೆ ಪರಿಸರ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡುವುದು ಈ ಕಾರ್ಯಕ್ರಮ ಉದ್ದೇಶವಾಗಿದೆ. ಓದುವುದಷ್ಟೇ ಅಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡುಗುವುದರಿಂದ ಹೊರಗಿನ ಪ್ರಪಂಚದಲ್ಲಿ ಕ್ರಿಯಾಶೀಲರನ್ನಾಗಿ ಮಾಡಲು ಇದೊಂದು ಉತ್ತಮವೇದಿಕೆಯೆನಿಸಿದೆ ಎಂದು ಜಿಪಂ ಸಿಇಒ ಜಿ.ಪ್ರಭು ಹೇಳಿದರು.

ಮಕ್ಕಳು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಕ್ರೀಯಾಶೀಲತೆ ಬರುವುದು ಬಾಹ್ಯ ಪ್ರಪಂಚದಿಂದ. ಪರಿಸರ ಸಂರಕ್ಷಣೆ ಪುಸ್ತಕರದಲ್ಲಿದೆ. ಇದರ ಹೊರತಾಗಿಯು ಮಕ್ಕಳಲ್ಲಿ ಅರಿವು ಮೂಡಿಸುವ ಈ ಕಾರ್ಯ ಶ್ಲಾನೀಯ. ಭೂವಿಯ ಮೇಲಿರುವ ಜೀವರಾಶಿಗಳಲ್ಲಿ ಶೇ.82ರಷ್ಟು ಜೀವರಾಶಿಗಳು ಸಸ್ಯವರ್ಗಕ್ಕೆ ಸೇರಿವೆ. ಬ್ಯಾಕ್ಟೀರಿಯಾಗಳು 13 % ಇವೆ. ಪ್ರಾಣಿ ಸಂಕುಲ 4% ಇದ್ದರೆ ಕೇವಲ 1% ಮಾನವ ಸಂಕುಲ ಇದೆ. ಆದರೆ, ನಾಮ ಪರಿಸರಕ್ಕೆ ಮಾಡುವ ಹಾನಿ ನೋಡುವುದಾದರೆ ಮುಂದಿನ ದಿನಗಳಲ್ಲಿ ನಾವು ಪರಿಸರ ಉಳಿಸುತ್ತೇವೆಯೇ ಎಂಬ ಆಂತಕ ಮೂಡುತ್ತದೆ ಎಂದರು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ವಣೋರ್ದಯ ಆರ್ಟ್​ಗ್ರೂಪ್​ ಟ್ರಸ್ಟ್​ ಅಧ್ಯಕ್ಷ ಕಿಶೋರ್​ ಕುಮಾರ್​, ಪ್ರೆಸ್​ಕ್ಲಬ್​ ಅಧ್ಯಕ್ಷ ಶಶಿಧರ್​ ದೋಣಿಹಕ್ಲು, ಖಜಾಂಚಿ ಆರ್​.ಸಂಗಮೇಶ್​, ಸತೀಶ್​ ಶಾಸ್ತ್ರಿ, ದಾದಾಪೀರ್​, ವಣೋರ್ದಯ ಟ್ರಸ್ಟ್​ನ ಹರ್ಷಹರಿಯೆಬ್ಬೆ, ಸಿ.ಭಾನುಪ್ರಕಾಶ್​, ಜಿ.ಅರುಣ್​, ಆರ್​.ಭರತ್​, ಕುಂ.ಸಿ.ಬಸವರಾಜು, ಸಿದ್ದೇಶಗೌಡ, ಉಮಾಮಹೇಶ್​, ಅಚ್ಚುತಾನಂದ, ಅಶೋಕ್​, ಅಚ್ಚುತಕುಮಾರ್​ ಉಪಸ್ಥಿತರಿದ್ದರು. ಬೆಂಗಳೂರಿನ ಕುಮಾರನ್ಸ್​ ಶಾಲೆಯ ಕಲಾಶಿಕ್ಷಕ ಶ್ರೀರಂಗ ಹರಿಯೆಬ್ಬೆ ಅವರು ಗಣೇಶ ಮೂರ್ತಿ ಪ್ರಾತ್ಯಕೆ ತೋರಿಸಿಕೊಟ್ಟರು. ಆ ಮಣ್ಣಿನ ಗಣಪನನ್ನೇ ಜಿಲ್ಲಾಧಿಕಾರಿ ಶುಭಕಲ್ಯಾಣ್​ಗೆ ನೀಡಿದರು.

ನಾವು ಹಳ್ಳಿಗಳಲ್ಲಿ ಎಮ್ಮೆ, ದನ ಮೇಯಿಸಲು ಹೋಗುತ್ತಿದ್ದಾಗ ಬಯಲಿನಲ್ಲಿ ಮಣ್ಣಿನಕುಡಿಕೆ, ಒಲೆ, ಪಾತ್ರೆಗಳನ್ನು ಮಾಡುತ್ತಿದ್ದ ಬಾಲ್ಯದ ದಿನಗಳು ನೆನಪಾದವು. ಅಮ್ಮನ ಕೈಲಿ ಒದೆ ತಿನ್ನುತ್ತಿದ್ದ ದೃಶ್ಯ ಕಣ್ಮುಂದೆ ಬಂತು. ಪರಿಸರ ಸ್ನೇಹಿ ಗಣೇಶ ನಿರ್ಮಾಣ ಮೂಲಕ ಪರಿಸರಕ್ಕೆ ಕೊಡುಗೆ ನೀಡೋಣ. ಜಿ.ಪ್ರಭು ಸಿಇಒ, ಜಿಪಂ ಸ್ವಾತಂತ್ರ$್ಯ ಸಂಗ್ರಾಮದಲ್ಲಿ ಗಣೇಶೋತ್ಸವ ಪ್ರಮುಖ ಪಾತ್ರ ವಹಿಸಿತ್ತು. ನಮಗೆ ವರ್ಷದ ಎರಡು ಮೂರು ಹಬ್ಬಗಳಲ್ಲಿ ಗಣೇಶ ಹಬ್ಬ ಹೆಚ್ಚು ೇವರಿಟ್​. ಮಕ್ಕಳೇ ಮಣ್ಣಿನಲ್ಲಿ ಗಣಪನನ್ನು ಮಾಡುವ ಕಾರ್ಯ ಪರಿಸರ ಜಾಗೃತಿ ಜತೆಗೆ ಪರಿಸರ ಉಳಿಸುವ ಸಂದೇಶವನ್ನು ನೀಡಿದೆ. ಕೆ.ವಿ.ಅಶೋಕ್​ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net