

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರ್ಭಾಧಾರಣೆಯನ್ನು ಕೊನೆಗೊಳಿಸುವ ಎಂಟಿಪಿ ಕಿಟ್ಗಳ ಆಕ್ರಮ ಮಾರಾಟ ಮತ್ತು ಬಳಕೆಯನ್ನು ನಿಯಂತ್ರಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಎಂಟಿಪಿ ಕಿಟ್ ಶೆಡ್ಯೂಲ್ ಎಚ್ ಗುಂಪಿನಲ್ಲಿರುವುದರಿಂದ ಮತ್ತು ಶೆಡ್ಯೂಲ್ ಎಚ್ ಔಷಧಗಳ ಬಳಕೆಯನ್ನು ವೈದ್ಯರುಗಳ ಸಲಹೆಯಿಲ್ಲದೆ ಮಾರಾಟ ಮಾಡುವುದು ಅಪರಾಧವಾಗಿದೆ. ಪ್ರತಿ ತಾಲೂಕು ಮಟ್ಟದಲ್ಲಿ ಎಂಟಿಪಿ ಕಿಟ್ ಮಾರಾಟ ಹಾಗೂ ಎಂಟಿಪಿ ಕಾಯ್ದೆ ಉಲ್ಲಂಘನೆಯ ಬಗ್ಗೆ ಗಂಭೀರವಾಗಿ ಚರ್ಚಿಸಿ ಸಂಬಂಧಪಟ್ಟ ಜಿಲ್ಲಾ ಸಹಾಯಕ ಔಷಧ ನಿಯಂತ್ರಕರು , ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ವ್ಯಾಪ್ತಿಯ ಸರ್ಕಾರಿ ವೈದ್ಯಾಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಯಿತು.
ಮುಂದಿನ ದಿನಗಳಲ್ಲಿ ಎಂಟಿಪಿ ಕಿಟ್ ಮಾರಾಟ ಮಾಡುವ ಎಲ್ಲ ಔಷಧಿ ಮಾರಾಟ ಅಂಗಡಿಗಳು, ಎಂಟಿಪಿ
ಕಾಯ್ದೆಯಡಿ ನೋಂದಣಿಯಾದ ಆಸ್ಪತ್ರೆಗಳು, ಕ್ಲಿನಿಕ್ಗಳ ಕಾರ್ಯಚರಣೆ ನಡೆಸಿ ಪರಿಶೀಲಿಸಲಾಗುವುದು. ವೈದ್ಯರ ಚಿಕಿತ್ಸಾ ಸಲಹೆ ಇಲ್ಲದೆ ಎಂಟಿಪಿ ಕಿಟ್ ಕಾನೂನು ಬಾಹಿರವಾಗಿ ಮಾರಾಟ ಮಾಡುವ ಔಷಧಿ ಅಂಗಡಿಗಳ ಮೇಲೆ ಕಠಿಣ ಕ್ರಮ ಜರುಗಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕೆಪಿಎಂಇ ಕಾಯ್ದೆಯಡಿ ಎಲ್ಲ ಖಾಸಗಿ ಆರೋಗ್ಯ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮಾಡಿಸಿ ಸರ್ಕಾರದ
ಮಾರ್ಗಸೂಚಿಯಂತೆ. ನಿರ್ದಿಷ್ಟ ಬಣ್ಣ ಹಾಗೂ ಅಳತೆಯ ಬೋರ್ಡ್ಗಳನ್ನು ಜುಲೈ 31 ರೊಳಗೆ ಅಳವಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
......................................