

ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆಯುತ್ತಿರುವುದಾಗಿ ನಿನ್ನೆ ಅಂದರೆ ಆಗಸ್ಟ್ 15ರಂದು ಘೋಷಿಸಿದ್ದಾರೆ.
ಕಳೆದ ಒಂದೂವರೆ ತಿಂಗಳಿಂದಲೂ ಧೋನಿ ನಿವೃತ್ತಿ ಬಗ್ಗೆ ಮಾತು ಕೇಳಿಬರುತ್ತಿದ್ದರೂ ಅವರು ಅಧಿಕೃತವಾಗಿ ಹೇಳಿರಲಿಲ್ಲ.
ಅಷ್ಟೆಲ್ಲ ದಿನಗಳಿಂದ ಕಾದು, ಆಗಸ್ಟ್ 15ರಂದೇ ಯಾಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂಬ ಕುತೂಹಲವೂ ಹಲವರಲ್ಲಿ ಮೂಡಿದೆ. ಈ ಬಗ್ಗೆ ಧೋನಿಯವರ ಮ್ಯಾನೇಜರ್ ಮಿಹಿರ್ ದಿವಾಕರ್ ಸ್ಪಷ್ಟನೆ ನೀಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿಯವರು ಓರ್ವ ನಿಜವಾದ ದೇಶಭಕ್ತ. ನಮ್ಮ ದೇಶದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ. ಸ್ವಾತಂತ್ರ್ಯ ಬಂದ ದಿನದಷ್ಟು ಮಹತ್ವದ ದಿನ ಇನ್ನೊಂದಿಲ್ಲ ಎಂಬುದು ಅವರ ಭಾವನೆ. ಅದೇ ಕಾರಣಕ್ಕೆ ಆಗಸ್ಟ್ 15ರಂದು ತಮ್ಮ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸುಮಾರು ದಿನಗಳಿಂದಲೂ ಧೋನಿಯವರ ನಿವೃತ್ತಿ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು. ಆದರೆ ದಿನಾಂಕವನ್ನು ಬಹಿರಂಗಪಡಿಸಿರಲಿಲ್ಲ. ಸದ್ಯ ಅವರ ಆಧ್ಯತೆ ಐಪಿಎಲ್ಗೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)