ಮಂಗಳೂರು: ದೇಶದ ಪ್ರತಿಷ್ಠಿತ ಸಂಸ್ಥೆಯಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಲ್) ಸಹಯೋಗದಲ್ಲಿ ವಿಜಿಲೆನ್ಸ್ ಅವೇರ್ನೆಸ್ ವೀಕ್-2024ರ ಅಂಗವಾಗಿ ಎಂಆರ್‌ಪಿಲ್ ವೆಂಡಸ್ಸ್ ಸಭೆ ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು.
ಎಂಆರ್‌ಪಿಲ್ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಂಆರ್‌ಪಿಲ್ ದೇಶದ ಅಗತ್ಯ ಇಂಧನ ಪೂರೈಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು, ಕರ್ನಾಟಕದ ಬೇಡಿಕೆಯ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೇಡಿಕೆಯ 60ಶೇ. ಎಂಆರ್‌ಪಿಲ್ ಪೂರೈಸುತ್ತದೆ. ಎಲ್‌ಆರ್‌ಪಿಎಲ್ ತನ್ನ ಗುಣಮಟ್ಟದ ಸೇವೆಗಳಿಂದ ದೇಶದ ಇಂಧನ ಶಕ್ತಿಯ ಅವಶ್ಯಕತೆಗಳನ್ನು ಪೂರೈಸಲು ಯಶಸ್ವಿಯಾಗುತ್ತಿದೆ ಎಂದರು.
ಎಂಆರ್‌ಪಿಎಲ್ ಮೆಟೀರಿಯಲ್ಸ್ ವಿಭಾಗದ ಜಿಎಂ ಸತೀಶ್ ಸತ್ಯನಾರಾಯಣ, ಜಿಜಿಎಂ ಪ್ರಶಾಂತ್ ಶಂಕರ್ ಪೊದುವಾಳ್, ಸಹಾಯಕ ವ್ಯವಸ್ಥಾಪಕ ಜಯಂಕ್ ವರ್ಮಾ, ಸಿವಿಓ ಗಣೇಶ್ ಎಸ್.ಭಟ್, ರಿಫೈನರಿ ನಿರ್ದೇಶಕ ನಂದಕುಮಾರ್ ವಿ ಪಿಳ್ಳೈ, ಎಂಎಸ್‌ಎಂಇ ಮಂಗಳೂರು ಇದರ ಜಂಟಿ ನಿರ್ದೇಶಕ ದೇವರಾಜ್, ಬೆಂಗಳೂರಿನ ರಾಷ್ಟ್ರೀಯ ಎಸ್‌ಸಿ/ಎಸ್‌ಟಿ ಹಬ್ ಎನ್‌ಎಸ್‌ಸಿ ಮುಖ್ಯಸ್ಥರಾದ ಕೋಕಿಲಾ ಎ., ನವ ದೆಹಲಿಯ ಜಿಇಎಂ ನಿರ್ದೇಶಕ ಆದಿತ್ಯ ಸಿಂಗ್ ಚೌಹಾಣ್ ಸೇರಿದಂತೆ ಹಲವರು ಇದ್ದರು.
ಕಾರ್ಯಕ್ರಮದಲ್ಲಿ ದೇಶಾದ್ಯಂತದ 300 ಕ್ಕೂ ಹೆಚ್ಚು ಮಾರಾಟಗಾರರು ಭಾಗವಹಿಸಿದ್ದರು. ಎಂಆರ್‌ಪಿಎಲ್ ಮೆಟೀರಿಯಲ್ಸ್ ವಿಭಾಗದ ಜಿಎಂ ಮಂಜುನಾಥ್ ಎಚ್.ವಿ.ವಂದಿಸಿದರು. ಹಿರಿಯ ವ್ಯವಸ್ಥಾಪಕ ಒ. ನೂಪುರ್ ಕೌಶಿಕ್ ಭಲ್ಲಾ ಕಾರ್ಯಕ್ರಮ ನಿರೂಪಿಸಿದರು.