ಮಂಗಳೂರು: ದೇಶದ ಪ್ರತಿಷ್ಠಿತ ಸಂಸ್ಥೆಯಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಲ್)ನ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಉನ್ನತ ತಂತ್ರಜ್ಞಾನ ಕೇಂದ್ರದಿಂದ ವಿಶೇಷ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬೆಂಗಳೂರಿನಲ್ಲಿ ನಡೆದ 27ನೇ ಎನರ್ಜಿ ಟೆಕ್ನಾಲಜಿ ಮೀಟ್‌ನಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಇಂದನ ಸಚಿವ ಹರ್ದೀಪ್ ಎಸ್ ಪುರಿ ಅವರು ಎಂಆರ್‌ಪಿಎಲ್‌ನ ಎಂಡಿ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್ ನೇತೃತ್ವದ ತಂಡಕ್ಕೆ ಪ್ರಶಸ್ತಿ ನೀಡಿ ಗೌರವಿಸಿದರು. ಎಂಆರ್‌ಪಿಎಲ್ ಇನ್ನೋವೇಶನ್ ಸೆಂಟರ್ ಅಧಿಕಾರಿಗಳಾದ ಡಾ. ವಿ.ನಂದಕುಮಾರ್, ಬಿಎಚ್‌ವಿ ಪ್ರಸಾದ್, ಬಿ. ಸುದರ್ಶನ್ ಸಹಿತ ಹಲವರು ಇದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಂಆರ್‌ಪಿಎಲ್ ಎಂಡಿ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್, ಎಂಆರ್‌ಪಿಎಲ್ ತಂಡಕ್ಕೆ ಸತತ ಮೂರನೇ ವರ್ಷವೂ ಎನರ್ಜಿ ಟೆಕ್ನಾಲಜಿ ಮೀಟ್‌ನಲ್ಲಿ ವಿಶೇಷ ವಿಭಾಗದಡಿಯಲ್ಲಿ ಇನ್ನೋವೇಶನ್ ಪ್ರಶಸ್ತಿ ಪಡೆಯುತ್ತಿರುವುದು ಹೆಮ್ಮೆಯ ಕ್ಷಣ. ಈ ಸಾಧನೆಯು ನೈಜ–ಪ್ರಪಂಚದ ಸವಾಲುಗಳಿಗೆ ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಎಂಆರ್‌ಪಿಎಲ್ ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.