ಇಸ್ಕಾನ್ ಅಕ್ಷಯ ಪಾತ್ರ ಫೌಂಡೇಶನ್‌ಗೆ 47 ಲಕ್ಷ ರೂ. ಕೊಡುಗೆ

mng-3sep-mrpl
Published on

ಮಂಗಳೂರು : ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ವತಿಯಿಂದ ಇಸ್ಕಾನ್‌ನ ಅಕ್ಷಯ ಪಾತ್ರ ಫೌಂಡೇಶನ್‌ಗೆ 47 ಲಕ್ಷ ರೂ.ಆರ್ಥಿಕ ಕೊಡುಗೆ ನೀಡಲಾಗಿದೆ.ಇಸ್ಕಾನ್‌ನ ಅಕ್ಷಯ ಪಾತ್ರ ಫೌಂಡೇಶನ್ ವಿವಿಧ ಶಾಲೆಗಳ ಸುಮಾರು 2,500 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದುದ್ದಕ್ಕೂ ಮಧ್ಯಾಹ್ನದ ವೇಳೆ ಬಿಸಿ, ಪೌಷ್ಟಿಕಾಂಶದ ಊಟವನ್ನು ಒದಗಿಸುತ್ತಿದೆ. ಮಧ್ಯಾಹ್ನದ ಊಟ ನೀಡುವ ಮೂಲಕ ಮಕ್ಕಳ ಕಲಿಕೆಯ ವಾತಾವರಣವನ್ನು ಉತ್ತಮಗೊಳಿಸುತ್ತಿರುವ ಇಸ್ಕಾನ್‌ನ ಈ ಸೇವಾ ಕಾರ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಂಆರ್‌ಪಿಎಲ್ ಈ ಕೊಡುಗೆ ನೀಡಿದೆ.
ಎಂಆರ್‌ಪಿಎಲ್‌ನ ಜಿಎಂ (ಸಿಎಸ್‌ಆರ್) ಪ್ರಶಾಂತ್ ಬಾಳಿಗಾ ಅವರು ಅಕ್ಷಯ ಪಾತ್ರ ಫೌಂಡೇಶನ್‌ನ ಪ್ರತಿನಿಧಿಗಳಿಗೆ 47 ಲಕ್ಷ ರೂ. ಮೊತ್ತದ ಚೆಕ್ ಹಸ್ತಾಂತರಿಸಿದರು. ಎಂಆರ್‌ಪಿಎಲ್ ಅಧಿಕಾರಿ ಸ್ಟೀವನ್ ಪಿಂಟೊ ಉಪಸ್ಥಿತರಿದ್ದರು.
ಅಕ್ಷಯ ಪಾತ್ರ ಫೌಂಡೇಶನ್ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಊಟ ಯೋಜನೆಯನ್ನು ಜಾರಿಗೊಳಿಸುವ ಮೂಲಕ ತರಗತಿಯ ಹಸಿವು ಹೋಗಲಾಡಿಸುವ ಉದ್ದೇಶದಿಂದ ನಡೆಸುತ್ತಿರುವ ಲಾಭ ರಹಿತ ಸಂಸ್ಥೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net