ನಾಳೆ ನಕ್ಕು ನಗಿಸುವ ಮಿಸ್ಟರ್ ರಾವ್ & ಅಸೋಸಿಯೇಟ್ಸ್ ಕಾಮಿಡಿ ಡ್ರಾಮ

drama
Published on

ಬೆಂಗಳೂರು : ಅಂತರಂಗ ಬಹಿರಂಗ ತಂಡದ ನಕ್ಕು ನಗಿಸುವ ಮಿಸ್ಟರ್ ರಾವ್ & ಅಸೋಸಿಯೇಟ್ಸ್ "ಫ್ಯ‍ಾಮಿಲಿ ಹಿಟ್ ಕಾಮಿಡಿ ಡ್ರಾಮ" ಶನವಾರ ಪ್ರದರ್ಶನಗೊಳ್ಳಲಿದೆ.
ಮಕ್ಕಳ ಮೇಲಿರುವ ತಂದೆ ತಾಯಿಯರ ಭಾವನೆಗಳು ಮತ್ತು ಮಕ್ಕಳಿಗೆ ತಂದೆ ತಾಯಿಯರ ಮೇಲಿರುವ ಭಾವನೆಗಳನ್ನು ಹಾಸ್ಯದ ಮೂಲಕ ನಾಟಕ ಅಭಿವ್ಯಕ್ತಿಸುತ್ತದೆ.
ಈಗಾಗಲೇ 9 ಪ್ರದರ್ಶನ ಕಂಡಿರುವ ನಾಟಕದ 10ನೇ ಪ್ರದರ್ಶನ ಶನಿವಾರ ಸಂಜೆ 7ಕ್ಕೆ ಬಸವನಗುಡಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್​ನ ವಾಡಿಯಾ ಸಭಾಂಗಣದಲ್ಲಿ ನಡೆಯಲಿದೆ. ನಾಟಕದ ರಚನೆ ಭೀಷ್ಮ ರಾಮಯ್ಯ, ನಿರ್ದೇಶನ ಬಾಷ್ ರಾಘವೇಂದ್ರ. ಟಿಕೆಟ್​ಗಳು ಬುಕ್ ಮೈ ಶೋ ನಲ್ಲಿ ಲಭ್ಯವಿದೆ. ಹಾಗೂ ನೇರವಾಗಿ ದೂ: 8660547776 ಮೂಲಕ ಬುಕ್ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net