More

    ವಿದ್ಯಾರ್ಥಿನಿಯರಿಗೆ ಹಿಜಾಬ್​ ಧರಿಸುವಂತೆ ಒತ್ತಾಯ; ತನಿಖೆಗೆ ಆದೇಶಿಸಿದ ಮಧ್ಯಪ್ರದೇಶ ಸರ್ಕಾರ

    ಭೋಪಾಲ್: ವಿದ್ಯಾರ್ಥಿನಿಯರಿಗೆ ಬಲವಂತವಾಗಿ ಹಿಜಾಬ್​ ಧರಿಸುವಂತೆ ಖಾಸಗಿ ಶಾಲೆಯಲ್ಲಿ ಒತ್ತಾಯಿಸಲಾಗುತ್ತಿದೆ ಎಂಬ ಆರೋಪ ವಿವಾದ ಸ್ವರೂಪ ಪಡೆದ ಬೆನ್ನಲ್ಲೇ ಮಧ್ಯಪ್ರದೇಶ ಸರ್ಕಾರ ಈ ಕುರಿತು ತನಿಖೆಗೆ ಆದೇಶಿಸಿದೆ.

    ಮಧ್ಯಪ್ರದೇಶದ ದಾಮೋಹ್​ ಜಿಲ್ಲೆಯ ಗಂಗಾ ಜಮುನಾ ಹೈಯರ್​ ಸೆಕಂಡರಿ ಶಾಲೆಯ ಬ್ಯಾನರ್​ ಒಂದರಲ್ಲಿ ಹಿಂದೂ ವಿದ್ಯಾರ್ಥಿನಿಯರು ಹಿಜಾಬ್​ ಧರಿಸಿರುವ ಫೋಟೋಗಳು ವೈರಲ್​ ಆಗಿವೆ.

    ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ನರೋತ್ತಮ್​​ ಮಿಶ್ರಾ ಕ್ಷೇತ್ರ ಶಿಕ್ಷಣಾಧಿಕಾರಿಯೂ ವಿಚಾರದ ಬಗ್ಗೆ ತನಿಖೆ ನಡೆಸುತ್ತಿದ್ದು ಈ ಕುರಿತು ಯಾವುದೇ ದೂರುಗಳು ದಾಖಲಾಗಿಲ್ಲ. ಸಮಸ್ಯೆಯ ಗಂಭೀರತೆಯನ್ನು ಕೂಲಂಕುಷವಾಗಿ ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

    Viral Tweet

    ಇದನ್ನೂ ಓದಿ: ವರ್ಗಾವಣೆ ಪತ್ರ ಕೊಡಲು ಲಂಚಕ್ಕೆ ಬೇಡಿಕೆ; ಪ್ರಾಂಶುಪಾಲ ಲೋಕಾಯುಕ್ತ ಬಲೆಗೆ

    ಈ ಕುರಿತು ಪ್ರತಿಕ್ರಿಯಿಸಿರುವ ದಾಮೋಹ್​ ಜಿಲ್ಲಾಧಿಕಾರಿ ಮಯಾಂಕ್​ ಅಗರ್​ವಾಲ್​ ಮೊದಲಿಗೆ ಧಾರ್ಮಿಕ ಮತಾಂತರದ ಆರೋಪ ಕೇಳಿ ಬಂದಿತ್ತು. ಆದರೆ, ಆ ಬಗ್ಗೆ ಯಾವುದೇ ಸಾಕ್ಷ್ಯಧಾರಗಳು ಲಭ್ಯವಾಗಿಲ್ಲ ಮತ್ತು ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಠಪಡಿಸಿದ್ಧಾರೆ.

    ಗೃಹ ಸಚಿವರ ಆಜ್ಞೆ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಹಶೀಲ್ದಾರ್​​ ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಖುಡ ಶೀಘ್ರದಲ್ಲೇ ವಿಚಾರಣೆ ಆರಂಭಿಸುತ್ತಾರೆ ಎಂದು ದಅಮೋಹ್​ ಜಿಲ್ಲಾಧಿಕಾರಿ ಮಯಾಂಕ್​ ಅಗರ್​ವಾಲ್​ ತಿಳಿಸಿದ್ದಾರೆ.

    ತಮ್ಮ ಶಾಲೆಯ ಮೇಲೆ ಮಾಡಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಮಾಲೀಕ ಮುಸ್ತಾಕ್​ ಖಾನ್ ಸಮವಸ್ತ್ರವು ಶಿರಸ್ತ್ರಾಣವನ್ನು(SCARF) ಒಳಗೊಂಡಿದೆ ವಿದ್ಯಾರ್ಥಿನಿಯರಿಗೆ ಯಾರು ಬಲವಂತ ಮಾಡಿಲ್ಲ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts