

Movies: ಜುಲೈ ತಿಂಗಳಲ್ಲಿ ಹಲವಾರು ಭಾರತೀಯ ಸಿನಿಮಾಗಳು ಬಾಕ್ಸ್ ಆಫೀಸ್ ಮಾತ್ರವಲ್ಲದೇ ಕಥಾಹಂದರದ ಮೂಲಕ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಿತ್ರಗಳ ಪೈಕಿ ಕನ್ನಡ ಸಿನಿಮಾಗಳು ಭರ್ಜರಿ ಕಮ್ಬ್ಯಾಕ್ ಮಾಡಿವೆ. ಕಳೆದ ತಿಂಗಳು ರಿಲೀಸ್ ಆದ 'ಜೂನಿಯರ್', 'ಎಕ್ಕ' ಮತ್ತು 'ಸು ಫ್ರಮ್ ಸೋ' ಸಿನಿಮಾಗಳು ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ಮೇಲುಗೈ ಸಾಧಿಸಿವೆ.
ಕೇವಲ 'ಸು ಫ್ರಮ್ ಸೋ' ಚಿತ್ರವೊಂದೇ ವಿಶೇಷ ದಾಖಲೆ ಬರೆದಿದ್ದು, ಅತಿ ಹೆಚ್ಚು ಟಿಕೆಟ್ ಬುಕ್ಕಿಂಗ್ ಮತ್ತು ಬಾಕ್ಸ್ ಆಫೀಸ್ ಗಳಿಕೆ ಕಂಡಿದೆ. ಇದೀಗ ತೆಲುಗು ಭಾಷೆಯಲ್ಲಿಯೂ ತೆರೆಕಂಡಿರುವ ರಾಜ್ ಬಿ. ಶೆಟ್ಟಿ ಚಿತ್ರ, ಮತ್ತೊಂದು ದಾಖಲೆ ಬರೆಯುವತ್ತ ಸಾಗಿದೆ. ಇದೊಂದು ಕನ್ನಡ ಸಿನಿಮಾ ಸ್ಯಾಂಡಲ್ವುಡ್ಗೆ ಹೊಸ ಕಳೆಯನ್ನು ತಂದುಕೊಟ್ಟಿದ್ದು, ವರ್ಷದ ದ್ವಿತೀಯಾರ್ಧದಲ್ಲಿ ಚಿತ್ರರಂಗಕ್ಕೆ ಉತ್ತಮ ಪ್ರಾರಂಭವನ್ನು ನೀಡಿದೆ. ಇದರಲ್ಲಿ ಎರಡನೇ ಮಾತಿಲ್ಲ. ಸದ್ಯ ಸೆಪ್ಟಂಬರ್ 05ರಂದು ಯಾವೆಲ್ಲ ಚಿತ್ರಗಳು ತೆರೆಗೆ ಅಪ್ಪಳಿಸಲಿವೆ? ಯಾವುದೆಲ್ಲ ಬಹುನಿರೀಕ್ಷಿತ ಸಿನಿಮಾಗಳು ಎಂಬುದರ ವಿವರ ಹೀಗಿದೆ ನೋಡಿ.
1. ಮದರಸಿ (ತಮಿಳು)
ತಾರಾಗಣ: ಶಿವಕಾರ್ತಿಕೇಯನ್, ರುಕ್ಮಿಣಿ ವಸಂತ್, ವಿದ್ಯುತ್ ಜಮ್ವಾಲ್, ಬಿಜು ಮೆನನ್, ಶಬೀರ್ ಕಲ್ಲರಕ್ಕಲ್, ವಿಕ್ರಾಂತ್, ಪ್ರೇಮ್ ಕುಮಾರ್, ಸಂಜಯ್, ಸಚನಾ ನಮಿದಾಸ್
ನಿರ್ದೇಶಕರು: ಎ.ಆರ್. ಮುರುಗದಾಸ್
ಜಾನರ್: ಆ್ಯಕ್ಷನ್, ಥ್ರಿಲ್ಲರ್
ರಿಲೀಸ್ ದಿನಾಂಕ: ಸೆ.05
2. ಮಿರೈ (ತೆಲುಗು)
ತಾರಾಗಣ: ತೇಜ ಸಜ್ಜ, ರಿತಿಕಾ ನಾಯಕ್, ಮಂಚು ಮನೋಜ್ ಕುಮಾರ್, ಶ್ರಿಯಾ ಸರಣ್, ಜಗಪತಿ ಬಾಬು, ಜಯರಾಮ್
ನಿರ್ದೇಶಕರು: ಕಾರ್ತಿಕ್ ಗಟ್ಟಮ್ನೇನಿ
ಜಾನರ್: ಫ್ಯಾಂಟಸಿ, ಆ್ಯಕ್ಷನ್
ರಿಲೀಸ್ ದಿನಾಂಕ: ಸೆ.05
3. ಶಕ್ತಿ ತಿರುಮಗನ್ (ತಮಿಳು/ತೆಲುಗು)
ತಾರಾಗಣ: ವಿಜಯ್ ಆಂಟೋನಿ, ವಾಗೈ ಚಂದ್ರಶೇಖರ್, ಸುನಿಲ್ ಕೃಪಲಾನಿ, ಸೆಲ್ ಮುರುಗನ್, ತೃಪ್ತಿ ರವೀಂದ್ರ, ಕಿರಣ್, ರಿನಿ ಬಾಟ್, ರಿಯಾ ಜಿತು.
ನಿರ್ದೇಶಕರು: ಅರುಣ್ ಪ್ರಭು ಪುರುಷೋತ್ತಮನ್
ಜಾನರ್: ರಾಜಕೀಯ, ಆ್ಯಕ್ಷನ್-ಥ್ರಿಲ್ಲರ್
ರಿಲೀಸ್ ದಿನಾಂಕ: ಸೆ.05
4. ಕಾಂಜುರಿಂಗ್- ದಿ ಲಾಸ್ಟ್ ರೈಟ್ಸ್ (ಇಂಗ್ಲಿಷ್)
ತಾರಾಗಣ: ವೆರಾ ಫೆರ್ಮಿಗಾ, ಮಿಯಾ ಟಾಮ್ಲಿನ್ಸನ್, ಟೈಸ್ಸಾ ಫೆರ್ಮಿಗಾ, ಪ್ಯಾಟ್ರಿಕ್ ವಿಲ್ಸನ್, ಬೆನ್ ಹಾರ್ಡಿ
ನಿರ್ದೇಶಕರು: ಮೈಕಲ್ ಛೇವ್ಸ್
ಜಾನರ್: ಹಾರರ್, ಥ್ರಿಲ್ಲರ್
ರಿಲೀಸ್ ದಿನಾಂಕ: ಸೆ.05
5. ದಿ ಗರ್ಲ್ಫ್ರೆಂಡ್ (ತೆಲುಗು)
ತಾರಾಗಣ: ರಶ್ಮಿಕಾ ಮಂದಣ್ಣ, ದೀಕ್ಷಿತ್ ಶೆಟ್ಟಿ, ರಾವ್ ರಮೇಶ್, ರೋಹಿಣಿ, ಕೌಶಿಕ್ ಮಹಾತಾ
ನಿರ್ದೇಶಕರು: ರಾಹುಲ್ ರವೀಂದ್ರನ್
ಜಾನರ್: ಡ್ರಾಮಾ
ರಿಲೀಸ್ ದಿನಾಂಕ: ಸೆ.05
6. ಘಾಟಿ (ತೆಲುಗು)
ತಾರಾಗಣ: ಅನುಷ್ಕಾ ಶೆಟ್ಟಿ, ವಿಕ್ರಮ್ ಪ್ರಭು, ರಮ್ಯಾ ಕೃಷ್ಣ, ಚೈತನ್ಯ ರಾವ್ ಮಡದಿ, ಜಗಪತಿ ಬಾಬು, ರಾಘವ್ ರುದ್ರ ಮುಲ್ಪುರು, ಜಿಶು ಸೇನ್‌ಗುಪ್ತ, ಜಾನ್ ವಿಜಯ್, ರವೀಂದ್ರ ವಿಜಯ್
ನಿರ್ದೇಶಕರು: ಕ್ರಿಶ್ ಜಗರ್ಲಮುಡಿ
ಜಾನರ್: ಆ್ಯಕ್ಷನ್, ಕ್ರೈಂ
ರಿಲೀಸ್ ದಿನಾಂಕ: ಸೆ.05