ಆಯುರ್ವೇದ ಪದ್ಧತಿ ಬಗ್ಗೆ ತಾಯಿ ಪ್ರೀತಿ: ಡಾ.ಎಂ.ಬಿ.ಪುರಾಣಿಕ್ ಅಭಿಪ್ರಾಯ

Ull_Sharadha
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ನಾವು ನಮ್ಮ ತಾಯಿಗೆ ಯಾವ ರೀತಿಯ ಪ್ರೀತಿ ನೀಡುತ್ತೇವೆಯೋ ಅದೇ ರೀತಿಯ ಪ್ರೀತಿ ಮತ್ತು ವಿಶ್ವಾಸವನ್ನು ಆಯುರ್ವೇದ ಪದ್ಧತಿಯಲ್ಲಿ ಬೆಳೆಸಿಕೊಳ್ಳಬೇಕು ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಹೇಳಿದರು.

ತಲಪಾಡಿ ದೇವಿನಗರ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಗೊಂಡ ಬೆನ್ನು ಹುರಿ ಹಾಗೂ ಸಂಧು ಆರೋಗ್ಯ ಚಿಕಿತ್ಸಾ ವಿಭಾಗ ‘ಗಮನ’, ಕ್ಯಾನ್ಸರ್ ಪೂರಕ ಚಿಕಿತ್ಸಾ ವಿಭಾಗ ‘ಅಂಕುರ’, ವಿಷ ಚಿಕಿತ್ಸಾ ವಿಭಾಗ ‘ನಿರ್ವಿಷ’ ಚಿಕಿತ್ಸಾ ಘಟಕಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಾತನಾಡಿದರು.

ಪ್ರತಿ ವಾರಣಾಂತಿಕ ಕಾಯಿಲೆಗೂ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ಲಭ್ಯವಿದೆ. ಮುಖ್ಯವಾಗಿ ಆ ರೋಗಿಯಲ್ಲಿರುವ ಆತ್ಮಸ್ಥೈರ್ಯ, ಮನೋಸ್ಥೈರ್ಯ ಬೆಳೆಸುವ, ರೋಗ ಬರುವ ಕಾರಣಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಚಿಕಿತ್ಸಕರು ವಾಡಬೇಕು. ಭಾರತೀಯ ಪರಂಪರೆಯ ವಿಜ್ಞಾನ ಮತ್ತು ಆರೋಗ್ಯ ಪದ್ಧತಿ ಆಯುರ್ವೇದ ಮುಂದಿನ ಜಾಗತಿಕ ಆರೋಗ್ಯ ಸಮಸ್ಯೆಗೆ ಗಮನಾರ್ಹ ಕೊಡುಗೆ ನೀಡಲಿದೆ ಎಂದರು.

ಲಯನ್ಸ್ ಕ್ಲಬ್‌ನ ಜಿಲ್ಲಾ ನಿಕಟಪೂರ್ವ ಗವರ್ನರ್ ಡಾ.ಮೆಲ್ವಿನ್ ಡಿಸೋಜ ವಾತನಾಡಿ, ಶಾರದಾ ಆಯುರ್ವೇದ ಕಾಲೇಜಿನೊಂದಿಗೆ ಲಯನ್ಸ್ ಕ್ಲಬ್ ಅವಿನಾಭಾವ ಸಂಬಂಧ ಹೊಂದಿದ್ದು, ಲಯನ್ಸ್ ಕ್ಲಬ್‌ನ ಆರೋಗ್ಯ ಸಂಬಂಧಿ ಯೋಜನೆಯಾದ ಮಧುಮೇಹಕ್ಕೆ ಸಂಬಂಧಪಟ್ಟಂತೆ ಗ್ರಾಮ ಮಟ್ಟದಲ್ಲಿ ಆಸ್ಪತ್ರೆಯ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾರದಾ ಆಯುರ್ವೇದ ಕಾಲೇಜು ನೂತನವಾಗಿ ಆರಂಭಿಸಿರುವ ಕ್ಯಾನ್ಸರ್ ವಿಭಾಗದೊಂದಿಗೆ ಲಯನ್ಸ್ ಕ್ಲಬ್ ಕೈಜೋಡಿಸಲಿದೆ ಎಂದರು.

ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ವಾತನಾಡಿ, ಪ್ರತಿಯೊಂದು ಕಾಯಿಲೆಗೆ ಪರಿಣಾಮಕಾರಿ ಚಿಕಿತ್ಸೆ ನೀಡುವಲ್ಲಿ ವೈದ್ಯರ ಪಾತ್ರ ಮಹತ್ವದ್ದು. ರೋಗಿಯೊಂದಿಗೆ ಆಪ್ತ ಸವಾಲೋಚನೆ ನಡೆಸಿ ಅವರಲ್ಲಿ ಆತ್ಮವಿಶ್ವಾಸ ಬೆಳೆಸುವ ಕಾರ್ಯವನ್ನು ವೈದ್ಯರು ವಾಡಬೇಕು. ರೋಗಿಗಳು ಕಾಯಿಲೆ ಬಗ್ಗೆ ಮುಚ್ಚುಮರೆಯಿಲ್ಲದೆ ವೈದ್ಯರಲ್ಲಿ ತಿಳಿಸಿದರೆ ಯಾವುದೇ ರೋಗ ಗುಣವಾಗಲು ಸಾಧ್ಯ ಎಂದರು.

ಜೈ ಹಿಂದ್ ಟ್ಯೂಬ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ರಾಹುಲ್ ಜೈನ್, ಶಾರದಾ ಸಮೂಹ ಸಂಸ್ಥೆಗಳ ನಿರ್ದೇಶಕ ಸಮೀರ್ ಪುರಾಣಿಕ್, ಪಂಚಗವ್ಯ ಚಿಕಿತ್ಸಾ ತಜ್ಞ ಡಾ.ಡಿ.ಪಿ.ರಮೇಶ್, ಡಾ.ಲಿವಾ ವ್ಯಾಥ್ಯೂ, ಶಾರದಾ ನ್ಯಾಚುರೋಪಥಿ ಕಾಲೇಜಿನ ಪ್ರಾಂಶುಪಾಲ ಡಾ.ನಂದೀಶ್ ಮುಖ್ಯ ಅತಿಥಿಗಳಾಗಿದ್ದರು.

ಶಾರದಾ ಆಯುರ್ವೇದ ಕಾಲೇಜು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕಿ ಡಾ.ಅಶ್ವಿನಿ ಮರಾಠೆ ಸ್ವಾಗತಿಸಿದರು. ಪ್ರಾಂಶುಪಾಲ ಡಾ.ಸಂದೀಪ್ ಬೇಕಲ್ ಪ್ರಾಸ್ತಾವಿಕವಾಗಿ ವಾತನಾಡಿದರು. ಡಾ.ಗಣೇಶ್ ನಾಯಕ್ ವಂದಿಸಿದರು. ಡಾ.ನೇಹಾ, ಡಾ.ಪೂಜಾ ಮತ್ತು ಡಾ.ಮಧುರಾ ಅತಿಥಿಗಳನ್ನು ಪರಿಚಯಿಸಿದರು. ಡಾ.ಅರ್ಚನಾ ಕಾರ್ಯಕ್ರಮ ನಿರ್ವಹಿಸಿದರು.

ಆಯುರ್ವೇದದೊಂದಿಗೆ ಯೋಗ ಪ್ರಾಣಾಯಾಮದ ಮೂಲಕ ನ್ಯಾಚುರೋಪಥಿ ಚಿಕಿತ್ಸೆ ನೀಡುವ ಕಾರ್ಯವನ್ನು ಚಿಕಿತ್ಸಕರು ವಾಡಬೇಕು. ನೂತನವಾಗಿ ಆರಂಭಗೊಂಡಿರುವ ಬೆನ್ನುಹುರಿ, ಸಂಧು ಆರೋಗ್ಯ, ಕ್ಯಾನ್ಸರ್ ಪೂರಕ ಹಾಗೂ ವಿಷ ಚಿಕಿತ್ಸಾ ವಿಭಾಗದಲ್ಲಿ ನುರಿತ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ. - ಡಾ.ಎಂ.ಬಿ.ಪುರಾಣಿಕ್, ಅಧ್ಯಕ್ಷರು, ಶಾರದಾ ಸಮೂಹ ಶಿಕ್ಷಣ ಸಂಸ್ಥೆ https://www.vijayavani.net/a-beacon-to-a-new-life-free-from-addiction https://www.vijayavani.net/no-parking-space-for-108-ambulance

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net