More

    ಕ್ಲಬ್ ಕ್ರಿಕೆಟ್ ಪಂದ್ಯದಲ್ಲಿ 143 ರನ್ ಜತೆಯಾಟವಾಡಿದ ಅಮ್ಮ-ಮಗ!

    ಲಂಡನ್: ಕ್ರಿಕೆಟ್ ಆಟವೇ ಹಾಗೆ. ಈ ಆಟ ಎಷ್ಟು ಸುಂದರವೋ, ಅದೇ ರೀತಿ ಇದರಲ್ಲಿ ದಾಖಲಾಗುವ ದಾಖಲೆಗಳೂ ಅಷ್ಟೇ ವಿಶೇಷವಾದವುಗಳು. ಇಂಗ್ಲೆಂಡ್‌ನಲ್ಲಿ ನಡೆದ ಕ್ಲಬ್ ಕ್ರಿಕೆಟ್ ಪಂದ್ಯವೊಂದು ಕೂಡ ಇಂಥದ್ದೇ ವಿಶೇಷ ದಾಖಲೆಗೆ ಸಾಕ್ಷಿಯಾಗಿದ್ದು, ಅಮ್ಮ-ಮಗ ಜೋಡಿ ಶತಕದ ಜತೆಯಾಟವಾಡುವ ಮೂಲಕ ಗಮನಸೆಳೆದಿದೆ.

    ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಆರನ್ ಬ್ರಿಂಡಲ್ ಪುತ್ರ ಹ್ಯಾರಿ ಬ್ರಿಂಡಲ್ ಜತೆಗೂಡಿ ಪುರುಷರ ಕ್ಲಬ್ ಕ್ರಿಕೆಟ್ ಪಂದ್ಯವೊಂದರಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೆ, ಮೊದಲ ವಿಕೆಟ್‌ಗೆ ಪುತ್ರನ ಜತೆಗೆ 143 ರನ್‌ಗಳ ಅಜೇಯ ಜತೆಯಾಟವಾಡುವ ಮೂಲಕ ತಮ್ಮ ತಂಡದ ಗೆಲುವಿಗೆ ನೆರವಾದರು.

    ಇದನ್ನೂ ಓದಿ: ಭಾರಿ ಚರ್ಚೆಗೆ ಕಾರಣವಾಗಿದೆ ವಿರಾಟ್ ಕೊಹ್ಲಿ ಹೊಸ ಲುಕ್!

    39 ವರ್ಷದ ಆರನ್ ಬ್ರಿಂಡಲ್ ಇಂಗ್ಲೆಂಡ್ ಪರ 11 ಟೆಸ್ಟ್, 88 ಏಕದಿನ ಮತ್ತು 35 ಟಿ20 ಪಂದ್ಯವಾಡಿದ್ದು, 12 ವರ್ಷದ ಪುತ್ರ ಹ್ಯಾರಿ ಬ್ರಿಂಡಲ್ ಕ್ರಿಕೆಟ್ ಬೆಳವಣಿಗೆಗೆ ನೆರವಾಗುವ ಸಲುವಾಗಿ ಓಂಬಿ ಸಿಸಿ ಟ್ರೋಜನ್ಸ್ ತಂಡದ ಪರ ಆಡಿದರು. ನೆಟ್ಟೆಲ್‌ಹ್ಯಾಂ ಕ್ರಿಕೆಟ್ ಅಕಾಡೆಮಿ ಇಲೆವೆನ್ ವಿರುದ್ಧ ನಡೆದ ಲಿನ್‌ಕಾನ್ ಆಂಡ್ ಡಿಸ್ಟ್ರಿಕ್ ಲೀಗ್ ಟೂರ್ನಿಯಲ್ಲಿ 142 ರನ್ ಸವಾಲನ್ನು ಅಮ್ಮ-ಮಗ ಜೋಡಿ ಅಜೇಯವಾಗಿ ಬೆನ್ನಟ್ಟಿತು. ಆರನ್​ ಬ್ರಿಂಡಲ್​ 101 ಎಸೆತಗಳಲ್ಲಿ 94 ರನ್​ ಗಳಿಸಿದರೆ, ಪುತ್ರ ಹ್ಯಾರಿ ಬ್ರಿಂಡಲ್​ 32 ರನ್​ ಬಾರಿಸಿದರು. ಇದಕ್ಕೆ ಮುನ್ನ ಬೌಲಿಂಗ್​ನಲ್ಲೂ ಮಿಂಚಿದ್ದ ಪುತ್ರ ಹ್ಯಾರಿ ಬ್ರಿಂಡಲ್​ 4 ವಿಕೆಟ್​ ಕಬಳಿಸಿದ್ದರು.

    1999ರಿಂದ 2014ರ ನಡುವೆ ಇಂಗ್ಲೆಂಡ್ ಪರ ಆಡಿದ್ದ ಆರನ್ ಬ್ರಿಂಡಲ್ ಈ ನಡುವೆ ಪುತ್ರನಿಗೆ ಜನ್ಮ ನೀಡುವ ಸಲುವಾಗಿ 5 ವರ್ಷಗಳ ಕಾಲ ಕ್ರಿಕೆಟ್‌ನಿಂದ ಬಿಡುವು ಪಡೆದುಕೊಂಡಿದ್ದರು. ಆರನ್ ಬ್ರಿಂಡನ್ ಪುರುಷರ ವೃತ್ತಿಪರ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಪಂದ್ಯಗಳನ್ನು ಆಡಿರುವ ಅವರು 2011ರಲ್ಲಿ ಪುರುಷರ ಅರೆ-ವೃತ್ತಿಪರ ಕ್ರಿಕೆಟ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಮಹಿಳೆ ಎಂಬ ದಾಖಲೆ ಬರೆದಿದ್ದರು. ನಿವೃತ್ತಿಯ ನಂತರ ಅವರು ಟೀಚರ್ ಮತ್ತು ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಕರೊನಾ ವಿರುದ್ಧದ ಹೋರಾಟಕ್ಕೆ ಆರ್‌ಸಿಬಿ ನೀಡುತ್ತಿರುವ ಕೊಡುಗೆಗಳೇನು ಗೊತ್ತೇ?

    18 ದಿನಗಳಲ್ಲಿ 5 ರಾಜ್ಯ ಸುತ್ತಾಡಿ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್!

    ಈ ಐಪಿಎಲ್ ತಂಡ ನನಗಿನ್ನೂ ವೇತನ ನೀಡಿಲ್ಲ ಎಂದ ಆಸೀಸ್ ಕ್ರಿಕೆಟಿಗ ಬ್ರಾಡ್ ಹಾಡ್ಜ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts