3 ವರ್ಷದ ಮಗಳನ್ನು ಜೀವಂತ ದಹನ ಮಾಡಿ ತಾನೂ ಬೆಂಕಿ ಹಚ್ಚಿಕೊಂಡ ಅಮ್ಮ!

fire
Published on

ಹೈದರಾಬಾದ್​: ತಾಯಿಯೊಬ್ಬಳು ತನ್ನ ಮೂರು ವರ್ಷದ ಮಗಳನ್ನು ಜೀವಂತವಾಗಿ ಸುಟ್ಟು ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಮೆದಕ್​ ಜಿಲ್ಲೆಯಲ್ಲಿ ನಡೆದಿದೆ.

ರೇವತಿ (28) ಐದು ವರ್ಷಗಳ ಹಿಂದೆ ಗಟ್ಟಯ್ಯ ಹೆಸರಿನ ವ್ಯಕ್ತಿಯನ್ನು ಮದುವೆಯಾಗಿದ್ದರು. ದಂಪತಿಗೆ ಆದ್ಯಾಶ್ರೀ (3) ಹೆಸರಿನ ಮಗಳಿದ್ದಳು. ಗುರುವಾರದಂದು ಹೆಂಡತಿ ಮಗಳನ್ನು ಮನೆಯಲ್ಲಿ ಬಿಟ್ಟು ಗಟ್ಟಯ್ಯ ಕೆಲಸಕ್ಕೆ ತೆರಳಿದ್ದಾನೆ. ಗಂಡ ಕೆಲಸಕ್ಕೆ ಹೋದ ನಂತರ ರೇವತಿ ಮಗಳ ದೇಹಕ್ಕೆ ಬೆಂಕಿ ಹಚ್ಚಿದ್ದಾಳೆ. ಅದಾದ ನಂತರ ತಾನೂ ಸೀರೆಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರೇವತಿ ಮನೆಯ ಒಳಗಿನಿಂದ ಲಾಕ್​ ಮಾಡಿಕೊಂಡಿದ್ದರಿಂದಾಗಿ ಅಕ್ಕ ಪಕ್ಕದ ಮನೆಯವರು ಅವರ ರಕ್ಷಣೆಗೆ ಬರಲೂ ಸಾಧ್ಯವಾಗಿಲ್ಲ.

ಪೊಲೀಸರಿಗೆ ವಿಚಾರ ಮುಟ್ಟಿಸಿದ ನಂತರ ಅವರು ಬಂದು ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಅಮ್ಮ ಮಗಳ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಈ ಕುರಿತು ಪೊಲೀಸ್​ ಪ್ರಕರಣ ದಾಖಲಾಗಿದ್ದು, ಈ ಕೃತ್ಯಕ್ಕೆ ಕಾರಣವೇನು ಎನ್ನುವುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net