ಕರುಳಕುಡಿಯನ್ನು ಉಳಿಸಿಕೊಳ್ಳಲು ಹೋದಾಕೆಯೂ ಬದುಕಲಿಲ್ಲ... ದುರಂತ ಅಂತ್ಯಕಂಡ ಅಮ್ಮ-ಮಗ

death 2
Published on

ವಿಜಯಪುರ: ಮಗ ಪ್ರಾಣ ಉಳಿಸಲು ಹೋದ ತಾಯಿ ಕೂಡ ಮಗನೊಂದಿಗೆ ದುರ್ಮರಣಕ್ಕೀಡಾದ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.

ನಿಡಗುಂದಿಯ ನಿವಾಸಿಗಳಾದ ಅಂಜನಾ ಕೊಂಚಿಕೊರವರ(28) ಮತ್ತು ಇವರ ಪುತ್ರ ನಾಗೇಶ(8) ಮೃತ ದುರ್ದೈವಿಗಳು. ವಿಜಯದಶಮಿ ಹಬ್ಬದ ದಿನವೇ ಸಂಭವಿಸಿದ ತಾಯಿ-ಮಗನ ಸಾವಿಗೆ ನಿಡಗುಂದಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ನಿಡಗುಂದಿ ತಾಂಡಾ ಬಳಿ ಇರುವ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ಸೋಮವಾರ ಮಧ್ಯಾಹ್ನ ಬಟ್ಟೆ ತೊಳೆಯಲು ಅಂಜನಾ ಬಂದಿದ್ದರು. ತಾಯಿ ಜತೆಗೆ ಮಗನೂ ಬಂದಿದ್ದ. ಆಟವಾಡುತ್ತ ಆಕಶ್ಮಿಕವಾಗಿ ಕಾಲುಗೆ ಬಿದ್ದ ಮಗನನ್ನು ರಕ್ಷಿಸಲು ಹೋದ ತಾಯಿ ಕೂಡ ಜಲಸಮಾಧಿಯಾದರು.

ತಾಯಿ ಮತ್ತು ಮಗನ ಶವವನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net