ಈ ಪಾಸ್​​ವರ್ಡ್​ ಹ್ಯಾಕ್​ ಮಾಡಲು ಸಾಕು ಕೆಲವೇ ಸೆಕೆಂಡ್​ಗಳು!ನೀವು ಇದನ್ನೇ ಬಳಸುತ್ತಿದ್ದರೇ ಈಗಲೇ ಬದಲಾಯಿಸಿ

ವಿಜಯವಾಣಿ - 2024-01-15T145002.626
Published on

ಬೆಂಗಳೂರು: ಪಾಸ್​ವರ್ಡ್​ ಎಂದಾಕ್ಷಣ ನಮಗೆಲ್ಲಾ ನೆನಪಾಗೋದು ನಮ್ಮ ಮೊಬೈಲ್, ಕಂಪ್ಯೂಟರ್​, ಬ್ಯಾಂಕ್​ ಲಾಕರ್​ ಹೀಗೆ ಮುಂತಾದ ವಸ್ತುಗಳ ಭದ್ರತೆಗೆ ನೀಡಲಾದ ನಾಲ್ಕರಿಂದ ಐದು ಡಿಜಿಟ್​ ಅಂಕಿಗಳು. ಈ ಪಾಸ್​ವರ್ಡ್​ ನಮ್ಮ ದಿನನಿತ್ಯದ ಜೀವನದಲ್ಲಿ ಎಷ್ಟು ಪರಿಣಾಮಕಾರಿಯಾಗಿದೆ ಹಾಗೂ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದರೆ ಬೆಳಗ್ಗೆ ಎದ್ದ ಕೂಡಲೇ ನಮ್ಮ ಫೋನ್​ಗೆ ಪಾಸ್​ವರ್ಡ್​ ಹಾಕಿ ದಿನವನ್ನು ಪ್ರಾರಂಭಿಸುವಂತೆ ಮಾಡಿದೆ.

ಬ್ಯಾಂಕ್​ ವಹಿವಾಟು ನಡೆಸಲು ಕೂಡ ಇದೇ ರೀತಿಯ ಸ್ಟ್ರಾಂಗ್ ಪಾಸ್​ವರ್ಡ್​ ಅನ್ನು ಇಟ್ಟಿರುತ್ತೇವೆ. ಈ ಕೋಡ್​ ಡಿಜಿಟ್​ಗಳು ನಮನ್ನು ಹೊರತುಪಡಿಸಿದರೆ ಅನ್ಯರಿಗೆ ತಿಳಿದಿರುವುದಿಲ್ಲ. ನಮಗೆ ನಂಬಿಕೆಯಿದ್ದರೆ ನಾವು ನಮ್ಮ ಆಪ್ತರಿಗೆ ಈ ಪಾಸ್​​ವರ್ಡ್​ ಅನ್ನು ಹಂಚಿಕೊಳ್ಳುವ ಮುಖೇನ ಅವರಿಗೂ ತಿಳಿಸಬಹುದು. ಈ ಮೂಲಕ ಕಷ್ಟದ ಸಮಯದಲ್ಲಿ ನಾವು ನಮ್ಮ ಕೋಡ್​ ಮರೆತರೆ, ಅವರ ಮೂಲಕ ಇದನ್ನು ಮತ್ತೊಮ್ಮೆ ಪಡೆದುಕೊಳ್ಳಬಹುದು.

ಭಾರತದಲ್ಲಿ ಕೆಲವರಲ್ಲ ಹಲವರು ಬಳಸುವ ಪಾಸ್​ವರ್ಡ್​ ಮಾತ್ರ ಒಂದೇ ಆಗಿದೆ ಎಂಬುದು ಸದ್ಯ ಬಹಳ ಆಶ್ಚರ್ಯಕರ ಸಂಗತಿ. ಏನಪ್ಪಾ ಇದು ಒಂದೇ ಪಾಸ್​​ವರ್ಡ್​ ಹೇಗೆ ಇಡಲು ಸಾಧ್ಯ ಎಂಬ ಪ್ರಶ್ನೆ ಖಂಡಿತ ನಿಮ್ಮಲ್ಲಿ ಮೂಡುವುದು ಸಹಜ.

ಈ ಪಾಸ್​ವರ್ಡ್​ಗಳು ಮೊಬೈಲ್​, ಡಿಜಿಟಲ್ ಲಾಕರ್​, ಲಾಪ್​ಟಾಪ್​ ಅಥವಾ ಇ-ಮೇಲ್​ಗೆ ಬಳಕೆ ಮಾಡಿರಬಹುದು. ಆದ್ರೆ, ಅನೇಕರು ತಮಗೆ ಸುಲಭವಾಗಿ ನೆನಪಾಗುವಂತೆ ಕೋಡ್​ ಇಡಲು ಹೆಚ್ಚು ಚಿಂತಿಸುತ್ತಾರೆ. ಕಾರಣ, ಈ ರೀತಿಯ ಪಾಸ್​ವರ್ಡ್​ಗಳನ್ನು ಇಟ್ಟುಕೊಳ್ಳುವುದರಿಂದ ನಾವು ಮರೆಯುವುದಿಲ್ಲ, ಮರೆತರೂ ಒಂದೆರೆಡು ಬಾರಿ ಪ್ರಯತ್ನಿಸುವ ಮುಖೇನ ಸುಲಭವಾಗಿ ಓಪನ್ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರ ಹಲವರದ್ದು.

ಆದರೆ ಇತ್ತೀಚಿನ ಮಾಹಿತಿ ಪ್ರಕಾರ, ಭಾರತದಲ್ಲಿ ಅತೀ ಹೆಚ್ಚಾಗಿ ಬಳಸುವ ಪಾಸ್​ವರ್ಡ್​ ಅಂದರೆ ಅದು "123456"! ಈ ಆರು ನಂಬರ್​ಗಳನ್ನು ಅನೇಕರು ಬಳಕೆ ಮಾಡುತ್ತಿದ್ದಾರೆ. ಇದನ್ನು ಹ್ಯಾಕ್ ಮಾಡಲು ಕೆಲವೇ ಸೆಕೆಂಡ್​ಗಳು ಸಾಕು ಎಂದು ತಜ್ಞರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net