

Operation Sindoor: ಪಹಲ್ಗಾಮ್ ಉಗ್ರರರನ್ನು ಮಟ್ಟಹಾಕಲು ಭಾರತೀಯ ಸೇನೆ ಮಂಗಳವಾರ ಮಧ್ಯರಾತ್ರಿ ಪ್ರತಿಕಾರದ ಕ್ರಮ ಕೈಗೊಂಡಿದೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಪ್ರದೇಶಗಳಲ್ಲಿನ ಭಯೋತ್ಪಾದಕ ಒಂಬತ್ತು ಶಿಬಿರಗಳ ಮೇಲೆ ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆ 'ಆಪರೇಷನ್ ಸಿಂಧೂರ' ಹೆಸರಿನಲ್ಲಿ ಜಂಟಿ ದಾಳಿ ನಡೆಸಿವೆ. ಈ ದಾಳಿಯಲ್ಲಿ ಪಾಕ್ನ 80ಕ್ಕೂ ಅಧಿಕ ಭಯೋತ್ಪಾದಕರು ಮೃತಪಟ್ಟಿದ್ದಾರೆ.
ಆದರೆ ಪಾಕಿಸ್ತಾನ ನ್ಯೂಸ್ ಆ್ಯಂಕರ್ ಒಬ್ಬರು ಆಪರೇಷನ್ ಸಿಂಧೂರ್ ನೋಡಿ ಲೈವ್ನಲ್ಲೇ ಕಣ್ಣೀರಿಟ್ಟಿದ್ದಾಳೆ. ಪಹಲ್ಗಾಮ್ನಲ್ಲಿ 26 ಭಾರತೀಯ ಪ್ರವಾಸಿಗರನ್ನು ಪಾಕ್ ಉಗ್ರರು ಹತ್ಯೆಮಾಡಿದಾಗ ಮೌನವಾಗಿದ್ದ ಪಾಕ್ ನ್ಯೂಸ್ ಆ್ಯಂಕರ್ಗಳು ಇಂದು ಕಣ್ಣೀರು ಇಡುವಂತ ಪರಿಸ್ಥಿತಿ ಎದುರಾಗಿದೆ. ಆಗ ಪಾಕ್ ನ್ಯೂಸ್ ನಿರೂಪಕರು ಭಾರತ ಪಾಕಿಸ್ತಾನದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ ಎನ್ನುತ್ತಿದ್ದರು. ಆದರೆ ಇದೀಗ ಸ್ಟುಡಿಯೋದಲ್ಲಿ ಕುಳಿತುಕೊಂಡಿದ್ದ ನ್ಯೂಸ್ ಆ್ಯಂಕರ್ ಆಪರೇಷನ್ ಸಿಂಧೂರದಿಂದಾಗಿ ಕಣ್ಣೀರು ಹಾಕಿದ್ದಾರೆ.
26 ಭಾರತೀಯ ಪ್ರವಾಸಿಗರ ಪ್ರಾಣವನ್ನು ಬಲಿತೆಗೆದುಕೊಂಡ ಉಗ್ರರ ಮಟ್ಟಹಾಕಲು ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ 80ಕ್ಕೂ ಅಧಿಕ ಭಯೋತ್ಪಾದಕರು ಮೃತಪಟ್ಟಿದ್ದಾರೆ.(ಏಜೆನ್ಸೀಸ್)