

ಬೆಂಗಳೂರು: ಚುನಾವಣೆಯ ಸಲುವಾಗಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹಣ ಮತ್ತು ಇನ್ನಿತರೆ ವಸ್ತುಗಳು ಬಹುಕೋಟಿ ಮೌಲ್ಯವನ್ನು ಹೊಂದಿದ್ದು ಅವು ಜಪ್ತಿ ಆಗಿವೆ.
ಇನ್ನು ದಾಖಲಾಗಿರುವ ಪ್ರಕರಣಗಳಿಗಂತೂ ಲೆಕ್ಕವೇ ಇಲ್ಲ. ಕೇವಲ ಬೆಂಗಳೂರಿನಲ್ಲಿ ಸರಿ ಸುಮಾರು 76 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಮೌಲ್ಯದ ವಸ್ತುಗಳು ಹಾಗೂ ನಗದು ಜಪ್ತಿ ಆಗಿದೆ. ಒಟ್ಟಾರೆಯಾಗಿ ವಶಕ್ಕೆ ಸಿಕ್ಕಿರುವ ವಸ್ತುಗಳ ಮೌಲ್ಯದ ಲೆಕ್ಕಾಚಾರ ಹೀಗಿದೆ:
ಇದುವರೆಗೆ ನಗರದಲ್ಲಿ ಚುನಾವಣೆಯ ಸಲುವಾಗಿ ಒಟ್ಟು 2894 ಎಫ್ಆರ್ ದಾಖಲುಮಾಡಲಾಗಿದ್ದು ಬರೋಬ್ಬರಿ 76,30,86,056 ರೂ. ಮೌಲ್ಯದ ವಸ್ತುಗಳು ಹಾಗೂ ನಗದನ್ನು ಜಪ್ತಿ ಮಾಡಲಾಗಿದೆ.
ಈವರೆಗೆ ಒಟ್ಟು ಬೆಂಗಳೂರು ನಗರದಲ್ಲಿ 743 ದೂರುಗಳು ಚುನಾವಣೆಯ ಸಂಭಂದ ದಾಖಲಾಗಿದ್ದು ಅದರಲ್ಲಿ 119 ಸುಳ್ಳು ದೂರುಗಳಿದ್ದು, 622 ಪ್ರಕರಣದಲ್ಲಿ ಕ್ರಮಕೈಗೊಳ್ಳಲಾಗಿದೆ. ಉಳಿದ 2 ಪ್ರಕರಣದಲ್ಲಿ ತನಿಖೆ ಮುಂದುವರೆಯುತ್ತಿದೆ.