More

  ಬದಲಾದ ಜೀವನಶೈಲಿಯಿಂದ ಹೆಚ್ಚಿನ ಖಾಯಿಲೆ

  ರಾಯಚೂರು: ನಮ್ಮ ಬದಲಾದ ಜೀವನ ಶೈಲಿಯಿಂದಾಗಿ ಶೇ.65ರಷ್ಟು ಖಾಯಿಲೆಗಳು ಬರುತ್ತಿದ್ದು, ಅದರಲ್ಲೂ ಶೇ.30ರಷ್ಟು ಯುವಕರು ಹೃದಯ ಸಂಬಂ ಖಾಯಿಲೆಯಿಂದ ಸಾವಿಗೀಡಾಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ ಹೇಳಿದರು.
  ಸ್ಥಳೀಯ ವಿಜಿಕೆ ಹಾರ್ಟ್ ಇನ್ಸಿಟ್ಯೂಟ್‌ನಲ್ಲಿ ಹೊಸದಾಗಿ ಅಳವಡಿಸಲಾಗಿರುವ ಇನ್ಟ್ರಾವಾಸ್ಕೂಲರ್ ಅಲ್ಟ್ರಾಸೌಂಡ್ ಹಾಗೂ ಎ್ಎ್ಆರ್ ಉಪಕರಣ ಉದ್ಘಾಟಿಸಿ ಮಾತನಾಡಿ, ಹೃದಯ ಸಂಬಂತ ಖಾಯಿಲೆ ಬಡವ ಶ್ರೀಮಂತ ಎನ್ನದೆ ಎಲ್ಲರಿಗೂ ಬರುತ್ತಿದೆ ಎಂದರು.
  ಪ್ರತಿ ನಾಲ್ಕು ನಿಮಿಷಕ್ಕೊಬ್ಬರು ಹೃದಯಾಘಾತದಿಂದ ಸಾಯುತ್ತಿದ್ದಾರೆ. ಯುವಕರು ಮತ್ತು ಮಧ್ಯ ವಯಸ್ಕರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ. ಅಧ್ಯಯನದ ಪ್ರಕಾರ ಶೇ.22ರಷ್ಟು ಹೃದಯರೋಗ ಹೆಚ್ಚಾಗುತ್ತಿದೆ. ಒತ್ತಡ ಮತ್ತು ನಿರಂತರ ಕೆಲಸದಿಂದ ವೈದ್ಯರ ಆಯಸ್ಸು ಕೂಡಾ ಹತ್ತು ವರ್ಷ ಕಡಿಮೆಯಾಗುತ್ತಿದೆ.
  ಹೃದಯಾಘಾತವಾದಾಗ ಒಂದು ಗಂಟೆಯೊಳಗೆ ಸುಸಜ್ಜಿತ ಆಸ್ಪತ್ರೆಗೆ ಬರಲು ಸಾಧ್ಯವಿಲ್ಲವೋ ಆಗ ಸಾವುಗಳಾಗುತ್ತವೆ. ವಿಜಿಕೆ ಆಸ್ಪತ್ರೆ ಇಲ್ಲಿನ ಜನರಿಗೆ ವರದಾನವಾಗಿದ್ದು, ಆಸ್ಪತ್ರೆಯಲ್ಲಿ ಅಳವಡಿಸಿರುವ ಉಪಕರಣದಿಂದ ಸ್ಟಂಟ್ ಹಿಗ್ಗಿದೆಯಾ ಎಂದು ಕಂಡು ಕೊಳ್ಳಲು ಸಾಧ್ಯವಾಗಲಿದೆ ಎಂದು ಡಾ.ಸಿ.ಎನ್.ಮಂಜುನಾಥ ಹೇಳಿದರು.
  ಈ ಸಂದರ್ಭದಲ್ಲಿ ಆಸ್ಪತ್ರೆಯ ಮುಖ್ಯಸ್ಥ ಡಾ.ವಿ.ಜಿ.ಕುಲಕರ್ಣಿ, ಡಾ.ಅಜಿತ್ ಕುಲಕರ್ಣಿ, ಡಾ.ವಿ.ಜಿ.ಕಿರಣ, ಡಾ.ಶ್ರೀನಿವಾಸರಾವ್ ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts